• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಅಪಾರ್ಟ್‌ಮೆಂಟ್‌ನಲ್ಲಿ ಭಾರತ ಮೂಲದ ದಂಪತಿ ಶವವಾಗಿ ಪತ್ತೆ

|

ವಾಷಿಂಗ್ಟನ್, ಏಪ್ರಿಲ್ 9: ಅಮೆರಿಕದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭಾರತೀಯ ಮೂಲದ ದಂಪತಿ ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ದಂಪತಿಯ ಮಗಳು ಮನೆಯ ಬಾಲ್ಕನಿಯಲ್ಲಿ ಅಳುತ್ತಾ ನಿಂತಿದ್ದು, ಅದನ್ನು ಕಂಡ ನೆರೆಹೊರೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಮೆರಿಕದ ನ್ಯೂಜೆರ್ಸಿ ನಾರ್ಥ್ ಅರ್ಲಿಂಗ್ಟನ್‌ನಲ್ಲಿನ 21 ಗೋಲ್ಡನ್ ಟೆರೇಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಾರಾಷ್ಟ್ರ ಮೂಲದ ಬಾಲಾಜಿ ಭರತ್ ರುದ್ರಾವರ (32) ಹಾಗೂ ಆರತಿ (30) ದಂಪತಿ ವಾಸಿಸುತ್ತಿದ್ದರು. ಗಂಡ ಹೆಂಡತಿ ನಡುವೆ ಜಗಳವಾಗಿದ್ದು, ಈ ಸಂದರ್ಭ ಪತಿ ಪತ್ನಿಗೆ ಇರಿದು, ದೇಹವನ್ನು ಎರಡು ಭಾಗ ಮಾಡಿದ್ದಾರೆ. ನಂತರ ತಾವೂ ಇರಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಲಿವ್ ಇನ್‌ ಅಲ್ಲಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗಳನ್ನು ಹತ್ಯೆಗೈದು ಚರಂಡಿಗೆ ಎಸೆದ ವ್ಯಕ್ತಿ

"ನನ್ನ ಮೊಮ್ಮಗಳು ಮನೆಯ ಬಾಲ್ಕನಿಯಲ್ಲಿ ಅಳುತ್ತಾ ನಿಂತಿದ್ದನ್ನು ಕಂಡು ನೆರೆಹೊರೆಯವರು ವಿಚಾರಿಸಿದಾಗ ಸಂಗತಿ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಅವರಿಬ್ಬರು ಸಂತೋಷವಾಗಿಯೇ ಇದ್ದರು. ನೆರೆಹೊರೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು" ಎಂದು ಬಾಲಾಜಿ ಅವರ ತಂದೆ ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆಯಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅಟಾಪ್ಸಿ ವರದಿ ಬಂದ ನಂತರ ಮಾಹಿತಿ ನೀಡಲಾಗುವುದು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಭಾರತಕ್ಕೆ ಮೃತದೇಹಗಳನ್ನು 8-10 ದಿನಗಳಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಾಜಿ ರುದ್ರಾವರ ಅವರು ಐಟಿ ಉದ್ಯಮಿಯಾಗಿದ್ದು, 2014ರಲ್ಲಿ ಮದುವೆಯಾಗಿ 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಇನ್ಫೋಟೆಕ್‌ ಕಂಪನಿಯಲ್ಲಿ ಬಾಲಾಜಿ ಕೆಲಸ ಮಾಡುತ್ತಿದ್ದರು. ಆರತಿಯವರು ಗೃಹಿಣಿಯಾಗಿದ್ದರು ಎಂದು ತಿಳಿದುಬಂದಿದೆ.

English summary
Indian couple was found dead at their home in the US after neighbours saw their four year old daughter crying in balcony
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X