ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಜನರಿಗೆ ಅಮೆರಿಕದಲ್ಲಿ ಹಿಂಸೆ? ಜನಾಂಗೀಯ ದಾಳಿಯ ಭಯಾನಕ ಸತ್ಯ

|
Google Oneindia Kannada News

ಜಗತ್ತು ಒಂದು ಕಡೆ ಹೋದರೆ, ಅಮೆರಿಕ ಮತ್ತೊಂದು ಕಡೆ ಸಾಗುತ್ತದೆ. ಅದು ಅಭಿವೃದ್ಧಿಯೇ ಇರಬಹುದು ಅಥವಾ ಮಿಲಿಟರಿ ವಿಚಾರವೇ ಇರಬಹುದು. ಹೀಗೆ ಅಮೆರಿಕ ಎಲ್ಲದರಲ್ಲೂ ನಂಬರ್ 1 ಆಗಬೇಕೆಂಬ ಕನಸು ಹೊಂದಿದೆ. ಆದರೆ ಅಮೆರಿಕದ ಸಾಮಾಜಿಕ ಸ್ವಾಸ್ಥ್ಯ ಮಾತ್ರ ಹಾಳಾಗಿ ಹೋಗಿದೆ. ಈಗಲಾದರೂ ಅಮೆರಿಕದಲ್ಲಿ ಕರಿಯರು, ಬಿಳಿಯರು, ಏಷ್ಯನ್ನರು ಎಂಬ ಕ್ರೂರ ಪದ್ಧತಿ ಇದೆ.

Recommended Video

ಜನಾಂಗೀಯ ನಿಂದನೆಗೆ ತುತ್ತಾದ ಭಾರತೀಯರು !! | Oneindia Kannada

ಅದ್ರಲ್ಲೂ ಭಾರತ ಮೂಲದವರಿಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರಂತೆ ಕೆಲವು ಅಮೆರಿಕನ್ನರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸೇರಿ ಇನ್ನಿತರ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ಅಮೆರಿಕದಲ್ಲಿ ವಾಸಿಸುತ್ತಿರುವ ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗಾದರೂ ಜನಾಂಗೀಯ ದಾಳಿಯ ಅನುಭವ ಆಗಿದೆಯಂತೆ.

ಕೆನಡಾದಲ್ಲಿ ಭಾರತೀಯರ ಜೀವಕ್ಕೆ ಆಪತ್ತು? ಕೋಮುವಾದಿಗಳ ಕೂಪವಾಯ್ತಾ ಉ.ಅಮೆರಿಕ?ಕೆನಡಾದಲ್ಲಿ ಭಾರತೀಯರ ಜೀವಕ್ಕೆ ಆಪತ್ತು? ಕೋಮುವಾದಿಗಳ ಕೂಪವಾಯ್ತಾ ಉ.ಅಮೆರಿಕ?

ಅದರಲ್ಲೂ ಕೊರೊನಾ ವಕ್ಕರಿಸಿದ ಬಳಿಕ ಭಾರತೀಯರನ್ನ ಅಮೆರಿಕದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಸುಮಾರು 1200 ಭಾರತ ಮೂಲದ ಅಮೆರಿಕನ್ನರನ್ನು ಸಮೀಕ್ಷೆ ನಡೆಸಿದಾಗ ಈ ಭಯಾನಕ ವಿಚಾರ ಬೆಳಕಿಗೆ ಬಂದಿದೆ. ಭಾರತ ಮೂಲದವರನ್ನ ಹೆಚ್ಚಾಗಿ ಚರ್ಮದ ಬಣ್ಣ ಹಿಡಿದು ಹೀಯಾಳಿಸಿದವರೇ ಹೆಚ್ಚು ಎನ್ನಲಾಗಿದೆ.

ಭಾರತೀಯರ ಮೇಲೆ ಕೋಪ ಏಕೆ..?

ಭಾರತೀಯರ ಮೇಲೆ ಕೋಪ ಏಕೆ..?

ಅಮೆರಿಕದಲ್ಲಿ ಜನಾಂಗೀಯ ನಿಂದನೆ, ದಾಳಿ ಮೊದಲಿನಿಂದಲೂ ನಡೆಯುತ್ತಿದೆ. ಆದರೆ ಕೊರೊನಾ ಕಾಲದಲ್ಲಿ ಇಂತಹ ಕೀಳು ಮನಸ್ಥಿತಿ ಹೆಚ್ಚಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ ಅಮೆರಿಕದಲ್ಲಿ ವಾಸ ಇರುವ ಪ್ರತಿ ಇಬ್ಬರ ಪೈಕಿ ಒಬ್ಬ ಭಾರತ ಮೂಲದ ವ್ಯಕ್ತಿಗಾದರೂ ಜನಾಂಗೀಯ ನಿಂದನೆ ಅಥವಾ ಜನಾಂಗೀಯ ದಾಳಿ ಅನುಭವ ಆಗಿದೆಯಂತೆ. ಇದು ಅಮೆರಿಕದಲ್ಲಿ ಹಬ್ಬಿರುವ ಜನಾಂಗೀಯ ತಾರತಮ್ಯ ಮನೋಭಾವನೆಯನ್ನು ತಿಳಿಸುತ್ತದೆ. ಇದೆಲ್ಲವನ್ನೂ ಸಹಿಸಿಕೊಂಡೇ ಭಾರತೀಯರು ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕೆಲ ಸೈಕೋಗಳ ವರ್ತನೆಯಿಂದಾಗಿ ಅಮೆರಿಕದಲ್ಲಿ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದೆ.

ಅಲ್ಲೇ ಹುಟ್ಟಿದ್ದರೆ ಇನ್ನೂ ಟಾರ್ಚರ್

ಅಲ್ಲೇ ಹುಟ್ಟಿದ್ದರೆ ಇನ್ನೂ ಟಾರ್ಚರ್

ಭಾರತದಿಂದ ಹೋಗಿ ನೆಲೆಸಿದವರಿಗಿಂತಲೂ, ಅಮೆರಿಕದಲ್ಲೇ ಹುಟ್ಟಿದ ಭಾರತ ಮೂಲದವರಿಗೆ ಜನಾಂಗೀಯ ತಾರತಮ್ಯ ಹೆಚ್ಚಾಗಿ ಅನುಭವವಾಗಿದೆ. ಅದರಲ್ಲೂ ಭಾರತ ಮೂಲದ ದಂಪತಿಗೆ ಜನಿಸಿದವರು ಇಂತಹ ಕೆಟ್ಟ, ಸಹಿಸಲಾಗದ ಪರಿಸ್ಥಿತಿಯಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಏಷ್ಯಾ ಮೂಲದ ಜನರ ಮೇಲೆ ಹೀಗೆ ಹಲವು ದಾಳಿಗಳು ನಡೆಯುತ್ತವೆ, ಆದರೆ ಭಾರತೀಯರನ್ನೇ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಕಳವಳ ಉಂಟುಮಾಡುವ ವಿಚಾರ. ಅದೆಷ್ಟೇ ಶ್ರೀಮಂತ ರಾಷ್ಟ್ರ ಎನಿಸಿಕೊಂಡರೂ ಅಮೆರಿಕ ಇಂತಹ ಕ್ರೂರ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗದೇ ಇರೋದು ದುರಂತವೇ ಸರಿ.

ಲಕ್ಷ ಲಕ್ಷ ಭಾರತೀಯರು..!

ಲಕ್ಷ ಲಕ್ಷ ಭಾರತೀಯರು..!

ಭಾರತ ಮೂಲದ ಪ್ರತಿಭೆಗಳಿಗೆ ಜಗತ್ತಿನ ಯಾವ ಮೂಲೆಯಲ್ಲಾದರೂ ಜಾಗವಿದೆ. ಭಾರತ ಮೂಲದ ಕೋಟಿ ಕೋಟಿ ಪ್ರತಿಭಾವಂತರು ಹೊರ ದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗೇ ತಾಯಿ ನಾಡಿನ ಸೇವೆಯನ್ನೂ ಮಾಡುತ್ತಿದ್ದಾರೆ. ಹೀಗೆ ಅಮೆರಿಕದಲ್ಲಿ ಸುಮಾರು 42 ಲಕ್ಷ ಭಾರತೀಯರು ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ. 1ಕ್ಕೆ ಸಮವಾಗಿದೆ. 42 ಲಕ್ಷ ಭಾರತೀಯರಲ್ಲಿ ಬಹುತೇಕರಿಗೆ ಅಮೆರಿಕದಲ್ಲಿ ಮತದಾನ ಮಾಡುವ ಹಕ್ಕು ಕೂಡ ಇದೆ. ಇದೆಲ್ಲಾ ‘ಬಿಳಿಯರ ಸಾರ್ವಭೌಮತ್ವ' ವಾದಿಗಳಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಹೆಚ್ಚುತ್ತಿದೆ ಎಂಬ ಆರೋಪವಿದೆ.

ಇದು ಶತಮಾನಗಳ ಕಾದಾಟ

ಇದು ಶತಮಾನಗಳ ಕಾದಾಟ

ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ಎಂಬುದು ಇಂದು ಅಥವಾ ನಿನ್ನೆಯದಲ್ಲ. ಯಾವಾಗ ಯುರೋಪ್‌ ಮೂಲದ ಜನರು ಅಮೆರಿಕದಲ್ಲಿ ನೆಲೆ ಕಂಡುಕೊಂಡರೋ, ಅಂದಿನಿಂದಲೇ ಈ ಕಿತ್ತಾಟವೂ ಆರಂಭವಾಗಿದೆ. ನೂರಾರು ವರ್ಷಗಳಿಂದ ಅಮೆರಿಕದಲ್ಲಿ ಜನಾಂಗೀಯ ದಾಳಿ, ತಾರತಮ್ಯ, ಸಂಘರ್ಷ ಇದೆ. ಮೊದಲಿಗೆಲ್ಲಾ ಅಮೆರಿಕದ ಮೂಲ ನಿವಾಸಿಗಳ ಜೊತೆ ಕಿತ್ತಾಡಿದ್ದ ಯುರೋಪ್‌ ವಲಸಿಗರು, ನಂತರ ಆಫ್ರಿಕಾ ಮೂಲದವರ ಮೇಲೆ ದಾಳಿ ಮಾಡಿ ಜೀತ ಮಾಡಿಸಿದರು. ಅಲ್ಲಿಂದ ಮುಂದೆ ಆಫ್ರಿಕನ್-ಅಮೆರಿಕನ್ಸ್ ಮೂಲ ನಿವಾಸಿಗಳ ಸ್ಥಾನಮಾನ ಪಡೆದರು. ಆಫ್ರಿಕನ್-ಅಮೆರಿಕನ್ಸ್‌ಗೆ ಅಮೆರಿಕದ ಪೌರತ್ವ ಸಿಕ್ಕ ನಂತರವಂತೂ ಜನಾಂಗೀಯ ಸಂಘರ್ಷ ತಾರಕಕ್ಕೆ ಏರಿತ್ತು. ಈಗಲೂ ಇಂತಹ ಕೀಳು ಮನಸ್ಥಿತಿ ಅಸ್ಥಿತ್ವದಲ್ಲಿರುವುದು ಅಮೆರಿಕದ ದುರಂತ.

English summary
A Study explains that how 1 In 2 Indian-Americans facing discrimination from past 1 Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X