ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಕೊವಿಡ್ ಟಾಸ್ಕ್ ಫೋರ್ಸಿಗೆ ಕನ್ನಡಿಗ ವಿವೇಕ್ ಮೂರ್ತಿ

|
Google Oneindia Kannada News

ವಾಷಿಂಗ್ಟನ್, ನ.8: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಯುಎಎನಲ್ಲಿ ಕೊರೊನಾವೈರಸ್ ಸೋಂಕು ತಡೆಗಾಗಿ ಕಾರ್ಯಪಡೆಯನ್ನು ರಚಿಸಲಿದ್ದು, ಅದರಲ್ಲಿ ಇಂಡೋ-ಅಮೆರಿಕನ್, ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಅವರಿಗೆ ಪ್ರಮುಖ ಸ್ಥಾನ ಸಿಗುವ ನಿರೀಕ್ಷೆಯಿದೆ.

ಮಂಡ್ಯದ ಜಿಲ್ಲೆ ಮದ್ದೂರು ತಾಲೂಕಿನ ಹಲ್ಲೆಗೆರೆ ಗ್ರಾಮದವರಾಗಿರುವ ವಿವೇಕ್ ಮೂರ್ತಿ ಈ ಹಿಂದೆ ಒಬಾಮಾ ಅವರ ಸರ್ಜನ್ ಜನರಲ್ ಆಗಿದ್ದರು. ಆ ಮೂಲಕ ಒಬಾಮಾ ಆಡಳಿತ ಅವಧಿಯ ಆರೋಗ್ಯ ಕ್ಷೇತ್ರದ ಮುಖವಾಣಿಯಂತೆ ಬಿಂಬಿತರಾಗಿದ್ದರು.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಅವರ ಚುನಾವಣಾ ಕಾರ್ಯತಂತ್ರಕ್ಕೆ ಕನ್ನಡಿಗ ಡಾ.ವಿವೇಕ್ ಮೂರ್ತಿ ಬೆನ್ನೆಲುಬಾಗಿ ನಿಂತಿದ್ದರು. 2008 ಮತ್ತು 2012ರ ಒಬಾಮಾ ಚುನಾವಣಾ ಪ್ರಚಾರದಲ್ಲೂ ಕನ್ನಡಿಗ ಮೂರ್ತಿ ಪ್ರಮುಖ ಪಾತ್ರವಹಿಸಿದ್ದರು

2014ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರು ಅಮೆರಿಕದ 19ನೇ 'ಸರ್ಜನ್ ಜನರಲ್' ಆಗಿ ನೇಮಕ ಮಾಡಿದ್ದರು. ಬ್ರಿಟನ್‌ನಲ್ಲಿ ಜನಿಸಿರುವ ಮೂರ್ತಿ ಅವರು ಅತಿ ಕಡಿಮೆ ವಯಸ್ಸಿನಲ್ಲೇ (37) 'ಸರ್ಜನ್ ಜನರಲ್' ಹುದ್ದೆಗೆ ನೇಮಕಗೊಂಡ ಸಾಧನೆ ಮಾಡಿದ್ದರು. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಹುದ್ದೆಯನ್ನು ತೊರೆದಿದ್ದರು.

ಕೊರೊನಾ ನಿಯಂತ್ರಣ ಬಗ್ಗೆ ಬೈಡನ್

ಕೊರೊನಾ ನಿಯಂತ್ರಣ ಬಗ್ಗೆ ಬೈಡನ್

ಬೈಡನ್ ಅವರು ತಮ್ಮ ಮೊದಲ ಭಾಷಣದಲ್ಲೇ ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ್ದು, ''ನಮ್ಮ ಕೋವಿಡ್ ತಡೆ ಯೋಜನೆಯ ನೀಲನಕ್ಷೆ ರೂಪಿಸಲು ಪ್ರಮುಖ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನೊಳಗೊಂಡ ತಂಡವೊಂದನ್ನು ಸೋಮವಾರ ಘೋಷಿಸಲಿದ್ದೇನೆ. 2021ರ ಜನವರಿ 20ರಿಂದ ಯೋಜನೆ ಅನುಷ್ಠಾನಕ್ಕೆ ಬರಲಿದೆ. ವಿಜ್ಞಾನದ ತಳಹದಿಯಲ್ಲೇ ಯೋಜನೆ ರೂಪಿಸಲಾಗುತ್ತದೆ'' ಎಂದಿದ್ದಾರೆ/

ಕೊವಿಡ್ ಟಾಸ್ಕ್ ಫೋರ್ಸಿಗೆ ಯಾರು ಮುಖ್ಯಸ್ಥ

ಕೊವಿಡ್ ಟಾಸ್ಕ್ ಫೋರ್ಸಿಗೆ ಯಾರು ಮುಖ್ಯಸ್ಥ

ಕೊವಿಡ್ ಟಾಸ್ಕ್ ಫೋರ್ಸಿನಲ್ಲಿ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಮಾಜಿ ಆಯುಕ್ತ ಡೇವಿಡ್ ಕೆಸ್ಲರ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಹಿಂದೆ ಸರ್ಜನ್ ಜನರಲ್ ಆಗಿದ್ದ ಡಾ ವಿವೇಕ್ ಮೂರ್ತಿ ಅವರಿಗೂ ಮುಖ್ಯ ಜವಾಬ್ದಾರಿ ಸಿಗಲಿದೆ. ಆದರೆ, ಕಾರ್ಯ ಪಡೆಯನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿದೆ, ಬೈಡನ್ ಆಡಳಿತದಲ್ಲಿ ಅವರು ಆರೋಗ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಬ್ರಿಟನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದಿರುವ ವಿವೇಕ್

ಬ್ರಿಟನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದಿರುವ ವಿವೇಕ್

ಬ್ರಿಟನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದಿರುವ ವಿವೇಕ್ ಮೂರ್ತಿ, ಮಂಡ್ಯದ ಮದ್ದೂರಿನವರು, ಇವರ ಅಜ್ಜ ಎಚ್ ನಾರಾಯಣಶೆಟ್ಟಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತರಾಗಿದ್ದರು. ಇವರ ತಂದೆ ಲಕ್ಷ್ಮೀನರಸಿಂಹ ಮೂರ್ತಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ತಾಯಿ ಮೈತ್ರೇಯಿ. ವಿವೇಕ್ ಮೂರ್ತಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಎಂಬಿಎ ಪದವಿ ಪಡೆದು ಬಳಿಕ ಯೇಲ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಲ್ಲಿ, 'ಡಾ ಆಫ್ ಅಮೆರಿಕ ಸಂಸ್ಥೆ'ಯನ್ನು ಗೆಳೆಯರ ಜೊತೆ ಸೇರಿ ಸ್ಥಾಪಿಸಿದರು. ಅಧ್ಯಕ್ಷ ಬರಾಕ್ ಒಬಾಮರವರ 'ಹೆಲ್ತ್ ಕೇರ್ ಸಿಸ್ಟೇಮ್,' ಮತ್ತು 'ಹೆಲ್ತ್ ಇನ್ಶೂರೆನ್ಸ್ ಅಭಿಯಾನ'ದಲ್ಲಿ ನಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada
ಅಮೆರಿಕದಲ್ಲಿ ಕೊರೊನಾ ನಿಯಂತ್ರಣ

ಅಮೆರಿಕದಲ್ಲಿ ಕೊರೊನಾ ನಿಯಂತ್ರಣ

ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಸಿಗದಂತೆ ಹಬುತ್ತಿದೆ ನವೆಂಬರ್ 8ರಂದು 10,185,012 ಸೋಂಕಿತರನ್ನು ಹೊಂದಿದ್ದು, 243,269 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಯುಎಸ್ಎ ವಿಶ್ವದಲ್ಲೇ ಅಧಿಕವಾಗಿದೆ. 6,442,094 ಮಂದಿ ಗುಣಮುಖರಾಗಿದ್ದು, ಭಾರತ ಬಿಟ್ಟರೆ ಅಮೆರಿಕದಲ್ಲೇ ಚೇತರಿಕೆ ಕಂಡವರು ಹೆಚ್ಚು ಪ್ರಮಾಣದಲ್ಲಿದ್ದಾರೆ. ಸೋಂಕು ನಿಯಂತ್ರಣ ಜೊತೆಗೆ ಲಸಿಕೆ ಅಭಿವೃದ್ಧಿ ಬಗ್ಗೆ ಕಾರ್ಯಪಡೆ ನಿಗಾ ವಹಿಸಲಿದೆ.

English summary
Indian-American Dr Vivek Murthy is expected to co-chair the coronavirus task force the members of which will be announced on Monday by President-elect Joe Biden, who clinched the US presidency after defeating President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X