ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಕೋವಿಡ್ ಟಾಸ್ಕ್ ಫೋರ್ಸ್: ನಿರೀಕ್ಷೆಯಂತೆಯೇ ಕನ್ನಡಿಗ ವಿವೇಕ್ ಮೂರ್ತಿಗೆ ಸ್ಥಾನ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 9: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಕೊರೊನಾ ವೈರಸ್ ಟಾಸ್ಕ್ ಫೋರ್ಸ್‌ ಸಲಹಾ ಸಮಿತಿಯಲ್ಲಿ ನಿರೀಕ್ಷೆಯಂತೆಯೇ ಕನ್ನಡಿಗ ಡಾ. ವಿವೇಕ್ ಮೂರ್ತಿ ಸ್ಥಾನ ಪಡೆದಿದ್ದಾರೆ.

Recommended Video

Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಇತರೆ ಕೋವಿಡ್ 19 ಸೋಂಕು ನಿರ್ವಹಣಾ ತಂಡದ ಸಿಬ್ಬಂದಿಗೆ ಸೂಕ್ತ ಸಲಹೆಗಳನ್ನು ನೀಡುವ ಸಲುವಾಗಿ ಮುಂಚೂಣೀ ಸಾರ್ವಜನಿಕ ಆರೋಗ್ಯ ಪರಿಣತರ ತಂಡವನ್ನು ಒಳಗೊಂಡ ಕೋವಿಡ್ 19 ಸಲಹಾ ಮಂಡಳಿಯನ್ನು ರಚಿಸಲಾಗಿದೆ.

ಅಮೆರಿಕದ ಕೊವಿಡ್ ಟಾಸ್ಕ್ ಫೋರ್ಸಿಗೆ ಕನ್ನಡಿಗ ವಿವೇಕ್ ಮೂರ್ತಿಅಮೆರಿಕದ ಕೊವಿಡ್ ಟಾಸ್ಕ್ ಫೋರ್ಸಿಗೆ ಕನ್ನಡಿಗ ವಿವೇಕ್ ಮೂರ್ತಿ

ಈ ಮಂಡಳಿಯನ್ನು ಡಾ. ವಿವೇಕ್ ಮೂರ್ತಿ, ಡಾ. ಡೇವಿಡ್ ಕೆಸ್ಲೆರ್ ಮತ್ತು ಡಾ. ಮರ್ಸೆಲ್ಲಾ ನೂನೆಜ್ ಸ್ಮಿತ್ ಸಹ ಮುಖ್ಯಸ್ಥರಾಗಿ ಮುನ್ನಡೆಸಲಿದ್ದಾರೆ. ಡಾ. ಬೆತ್ ಕ್ಯಾಮರಾನ್ ಮತ್ತು ಡಾ. ರೆಬೆಕ್ಕಾ ಕಟ್ಜ್ ಅವರು ಸಲಹಾ ಮಂಡಳಿಯಲ್ಲಿ ಕೋವಿಡ್ 19 ನಿರ್ವಹಣೆಯ ಕುರಿತು ಸೂಕ್ತ ಸಲಹೆಗಳನ್ನು ನೀಡಲು ಜತೆಯಾಗಿ ಸಮೀಪದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ಬೈಡನ್-ಹ್ಯಾರಿಸ್ ತಂಡ ತಿಳಿಸಿದೆ.

 Indian American Vivek Murthy Named Co Chair Of Joe Bidens Covid Task Force

'ಕೊರೊನಾ ವೈರಸ್ ಪಿಡುಗು ನಮ್ಮ ಆಡಳಿತವು ಎದುರಿಸಲಿರುವ ಅತ್ಯಂತ ಮುಖ್ಯ ಹೋರಾಟಗಳಲ್ಲಿ ಒಂದಾಗಲಿದೆ. ನಾನು ವಿಜ್ಞಾನ ಮತ್ತು ಪರಿಣತರಿಂದ ಸಲಹೆಗಳನ್ನು ಪಡೆದುಕೊಳ್ಳಲಿದ್ದೇನೆ' ಎಂದು ಬೈಡನ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹಲ್ಲಗೆರೆ ಗ್ರಾಮದವರಾದ ವಿವೇಕ್ ಮೂರ್ತಿ ಅವರು ಈ ಹಿಂದೆ ಬರಾಕ್ ಒಬಾಮ ಅವರ ಸರ್ಕಾರದಲ್ಲಿ ಸರ್ಜನ್ ಜನರಲ್ ಆಗಿದ್ದರು. ಅವರ ಆರೋಗ್ಯ ನೀತಿಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬೈಡನ್ ಅವರ ಚುನಾವಣಾ ಪ್ರಚಾರ ಕಾರ್ಯತಂತ್ರಗಳಲ್ಲಿಯೂ ವಿವೇಕ್ ಮೂರ್ತಿ ಬೆಂಬಲ ನೀಡಿದ್ದರು.

English summary
Indian American Vivek Murthy named as co chair of President elect Joe Biden's Covid task force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X