ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಎನ್‌ಆರ್‌ಐ ವೈದ್ಯ ಅಜಯ್ ಲೋಧಾ ಕೊರೊನಾ ಸೋಂಕಿನಿಂದ ಸಾವು

|
Google Oneindia Kannada News

ನ್ಯೂಯಾರ್ಕ್, ನವೆಂಬರ್ 23: ಖ್ಯಾತ ಎನ್‌ಆರ್‌ಐ ವೈದ್ಯ ಅಜಯ್ ಲೋಧಾ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಕೊರೊನಾ ಸೋಂಕಿನೊಂದಿಗೆ ಹೋರಾಡುತ್ತಿದ್ದ ಅಜಯ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

2008ರಲ್ಲಿ, ಲೋಧಾ ಅವರಿಗೆ ನರ್ಗಿಸ್ ದತ್ ಸ್ಮಾರಕ ಪ್ರತಿಷ್ಠಾನದ ವರ್ಷದ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 2016ರಲ್ಲಿ ಪ್ರತಿಷ್ಠಿತ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಆನರ್ ಗೌರವಕ್ಕೆ ಪಾತ್ರರಾಗಿದ್ದ ಅವರು 2015-16ರಲ್ಲಿ ಎಎಪಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಕೊರೊನಾ ಸೋಂಕಿಗೆ ಬಲಿಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಕೊರೊನಾ ಸೋಂಕಿಗೆ ಬಲಿ

ಅಮೆರಿಕನ್ ಅಸೋಸಿಯೇಷನ್ ​​ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್(ಎಎಪಿಐ) ಮಾಜಿ ಅಧ್ಯಕ್ಷ ಲೋಧಾ, ಕ್ಲೀವ್ಲ್ಯಾಂಡ್ ಕ್ಲಿನಿಕ್ನಲ್ಲಿ ನವೆಂಬರ್ 21ರಂದು ಮೃತಪಟ್ಟಿದ್ದಾರೆ. 58 ವರ್ಷದ ಅಜಯ್ ಲೋಧಾ ಅವರು ಪತ್ನಿ ಸ್ಮಿತಾ, ಮಗ ಅಮಿತ್ ಮತ್ತು ಮಗಳು ಶ್ವೇತಾಳನ್ನು ಅಗರಲಿದ್ದಾರೆ.

Indian-American Physician Ajay Lodha Passes Away Due To COVID-19 Complications

ನ್ಯೂಯಾರ್ಕ್‌ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಟ್ವೀಟ್ ಮಾಡಿದ್ದು, ಭಾರತೀಯ-ಅಮೇರಿಕನ್ ಸಮುದಾಯದ ಪ್ರಮುಖ ಸದಸ್ಯರಾದ ಡಾ. ಅಜಯ್ ಲೋಧಾ ಅವರ ನಿಧನದ ಬಗ್ಗೆ ತುಂಬಾ ದುಃಖವಾಗಿದೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾನೆ. ಅವರ ನಮ್ರತೆ, ದಯೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.

ಎಎಪಿಐ ಅಧ್ಯಕ್ಷ ಸುಧಾಕರ್ ಜೊನ್ನಲಗಡ್ಡ ಅವರು ದೂರದೃಷ್ಟಿಯ ನಾಯಕ ರವರ ನಿಧನ ಆಘಾತ ಮತ್ತು ದುಃಖಕರವಾಗಿದೆ ಎಂದರು. ಅವರು ಸಾವು ಎಎಪಿಐ ಇತಿಹಾಸದಲ್ಲಿ ಕರಾಳ ದಿನ ಎಂದು ಹೇಳಿದರು.

English summary
Eminent Indian-American physician and community leader Ajay Lodha has passed away due to complications from coronavirus (COVID-19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X