ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 21: ಶ್ವೇತಭವನ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಆಡಳಿತ ತಂಡವನ್ನು ಕಟ್ಟುತ್ತಿರುವ ಚುನಾಯಿತ ಅಧ್ಯಕ್ಷ ಜೋ ಬೈಡನ್, ಬರಾಕ್ ಒಬಾಮ ಅವರ ಆಡಳಿತದಲ್ಲಿದ್ದ ನಾಲ್ವರು ಹಿರಿಯರನ್ನು ತಮ್ಮ ಉನ್ನತ ಕಚೇರಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ಭಾರತ ಮೂಲದ ಮಾಲಾ ಅಡಿಗ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಪಡೆದುಕೊಂಡಿದ್ದಾರೆ. ಬೈಡನ್ ಪ್ರತಿಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಾಲಾ ಅಡಿಗ ಅವರು, ಒಬಾಮ ಆಡಳಿತದ ಅವಧಿಯಲ್ಲಿ ಒಬಾಮ ಸರ್ಕಾರದ ಅವಧಿಯಲ್ಲಿ ಜೋ ಬೈಡನ್ ಉಪಾಧ್ಯಕ್ಷರಾಗಿದ್ದಾಗ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ನೀತಿ ಸಲಹೆಗಾರರೂ ಆಗಿದ್ದರು. ಈ ಬಾರಿ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಜಾರ್ಜಿಯಾ ಮರು ಎಣಿಕೆಯಲ್ಲಿಯೂ ಬೈಡನ್‌ಗೆ ಜಯಜಾರ್ಜಿಯಾ ಮರು ಎಣಿಕೆಯಲ್ಲಿಯೂ ಬೈಡನ್‌ಗೆ ಜಯ

ಜಿಲ್ ಬೈಡನ್ ಅವರಿಗೆ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್ ಅವರನ್ನು ಶ್ವೇತಭವನದಲ್ಲಿನ ಅಧ್ಯಕ್ಷರ ಖಾಸಗಿ ಕಚೇರಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಒಬಾಮ ಆಡಳಿತದಲ್ಲಿ ಅಧ್ಯಕ್ಷರ ಶಾಸಕಾಂಗ ಸಲಹೆಗಾರ ಮತ್ತು ಸೆನೆಟ್‌ನಲ್ಲಿ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದ ಲೌಸಿಯಾ ಟೆರೆಲ್ ಅವರನ್ನು ಶ್ವೇಭವನದ ಶಾಸಕಾಂಗ ವ್ಯವಹಾರಗಳ ಕಚೇರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

 Indian American Mala Adiga Appointed As Jill Bidens Policy Director

ನಿಯಮಗಳಿಗೆ ಅನುಗುಣವಾಗಿ ಚೀನಾ ನಡೆದುಕೊಳ್ಳಲಿ: ಬೈಡನ್ನಿಯಮಗಳಿಗೆ ಅನುಗುಣವಾಗಿ ಚೀನಾ ನಡೆದುಕೊಳ್ಳಲಿ: ಬೈಡನ್

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

ಹಾಗೆಯೇ ಜೋ ಬೈಡನ್ ಉಪಾಧ್ಯಕ್ಷರಾಗಿದ್ದಾಗ ಜಿಲ್ ಬೈಡನ್ ಅವರಿಗೆ ಸಾಮಾಜಿಕ ಕಾರ್ಯದರ್ಶಿಯಾಗಿದ್ದ ಕಾರ್ಲೋಸ್ ಎಲಿಜೊಂಡೊ ಅವರಿಗೆ ಅದೇ ಹುದ್ದೆ ನೀಡಲಾಗಿದೆ. ಇನ್ನು ಜೋ ಬೈಡನ್ ಅವರ ಸಾರ್ವಜನಿಕ ವ್ಯವಹಾರದ ಶ್ವೇತಭವನ ಕಚೇರಿಯ ನಿರ್ದೇಶಕರಾಗಿ ಕೆಡ್ರಿಕ್ ರಿಚ್‌ಮಂಡ್, ಸಿಬ್ಬಂದಿ ಉಪ ಮುಖ್ಯಸ್ಥರನ್ನಾಗಿ ಜೇನ್ ಓ ಮ್ಯಾಲ್ಲಿ ಡಿಲ್ಲೋನ್ ಮತ್ತು ತಮ್ಮ ಆಪ್ತರಾದ ರಾನ್ ಕ್ಲೈನ್ ಅವರನ್ನು ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

English summary
Indian American Mala Adiga who advised Jill Biden on policy during Obama administration appointed as Jill's policy director.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X