ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಅಧ್ಯಕ್ಷರ ಪದಗ್ರಹಣ ಸಮಿತಿಯಲ್ಲಿ ಭಾರತ ಮೂಲದ ಮಜು ವರ್ಗೀಸ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 2: ಅಮೆರಿಕದ ಅಧ್ಯಕ್ಷೀಯ ಪದಗ್ರಹಣ ಸಮಿತಿಯ ನಾಲ್ವರು ಸದಸ್ಯರಲ್ಲಿ ಭಾರತ ಮೂಲದ ಅಮೆರಿಕನ್ ಮಜು ವರ್ಗೀಸ್ ಅವರನ್ನು ಚುನಾಯಿತ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದ್ದಾರೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರ ಮಾಡಬೇಕಿದ್ದು, ಅಂದು ನಡೆಯುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪದಗ್ರಹಣಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಈ ಸಮಿತಿ ಆಯೋಜಿಸಲಿದೆ.

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಟೋನಿ ಅಲೆನ್, ಕಾರ್ಯಕಾರಿ ನಿರ್ದೇಶಕರಾಗಿ ಮಜು ವರ್ಗೀಸ್, ಉಪ ಕಾರ್ಯಕಾರಿ ನಿರ್ದೇಶಕರಾಗಿ ಎರಿನ್ ವಿಲ್ಸನ್ ಮತ್ತು ವಿಯಾನ್ನಾ ಕ್ಯಾನ್ಸೆಲಾ ಅವರನ್ನು ಈ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಚುನಾವಣೆಯಲ್ಲಿ ವಂಚನೆ ನಡೆದಿಲ್ಲ ಎಂದ ಟ್ರಂಪ್ ಆಪ್ತ ಅಟಾರ್ನಿ ಜನರಲ್ಚುನಾವಣೆಯಲ್ಲಿ ವಂಚನೆ ನಡೆದಿಲ್ಲ ಎಂದ ಟ್ರಂಪ್ ಆಪ್ತ ಅಟಾರ್ನಿ ಜನರಲ್

'ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಉದ್ಘಾಟನಾ ಚಟುವಟಿಕೆಗಳನ್ನು ಆಯೋಜಿಸುವ ತಂಡವನ್ನು ಮುನ್ನಡೆಸುವ ಕಾರ್ಯಕ್ಕೆ ನೆರವಾಗುವುದು ನನಗೆ ದೊರೆತ ಗೌರವವಾಗಿದೆ. ಅವರಿಬ್ಬರೂ ಅಮೆರಿಕನ್ನರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವುದರ ಜತೆಗೆ ನಮ್ಮ ದೇಶದ ಬಲ ಮತ್ತು ಸ್ಥಿತಿಸ್ಥಾಪಕತೆಯನ್ನು ಪ್ರದರ್ಶಿಸುವ ಕಾರ್ಯ ಮಾಡುತ್ತಿದ್ದಾರೆ' ಎಂದು ಮಜು ವರ್ಗೀಸ್ ಹೇಳಿದ್ದಾರೆ.

 Indian-American Maju Varghese To Organise Joe Biden Inauguration

ಮಜು ಅವರು ಬೈಡನ್ ಅಧಿಕಾರ ಹಸ್ತಾಂತರ ಪ್ರಕ್ರಿಯೆ ತಂಡದಲ್ಲಿ ಪ್ರಮುಖ ಸ್ಥಾನ ಪಡೆದ ಭಾರತ ಮೂಲದ ಐದನೇ ವ್ಯಕ್ತಿಯಾಗಿದ್ದಾರೆ. ಈ ಉದ್ಘಾಟನಾ ಸಮಾರಂಭವು ಅಮೆರಿಕದ ಅಧ್ಯಕ್ಷರ ಮುಂದಿನ ನಾಲ್ಕು ವರ್ಷದ ಅಧಿಕಾರಾವಧಿಯನ್ನು ಆರಂಭಿಸುತ್ತದೆ. ಪ್ರಮಾಣವಚನ ಸ್ವೀಕಾರ, ಉದ್ಘಾಟನಾ ಭಾಷಣ, ಪಥಸಂಚಲನ ಮುಂತಾದ ಚಟುವಟಿಕೆಗಳು ಅಂದು ನಡೆಯಲಿದೆ.

ಜೋ ಬೈಡನ್ ಸರ್ಕಾರದಲ್ಲಿ ಭಾರತ ಮೂಲದ ನೀರಾ ಟಂಡೆನ್‌ಗೆ ಮುಖ್ಯ ಹುದ್ದೆಜೋ ಬೈಡನ್ ಸರ್ಕಾರದಲ್ಲಿ ಭಾರತ ಮೂಲದ ನೀರಾ ಟಂಡೆನ್‌ಗೆ ಮುಖ್ಯ ಹುದ್ದೆ

ಬೈಡನ್-ಹ್ಯಾರಿಸ್ ಅವರ ಪ್ರಚಾರ ತಂಡದಲ್ಲಿ ಪ್ರಾಥಮಿಕ ಚುನಾವಣೆಗಳಿಂದ ಸಾರ್ವತ್ರಿಕ ಚುನಾವಣೆಯವರೆಗೂ ಮುಖ್ಯಕಾರ್ಯಾರಣೆ ಅಧಿಕಾರಿ ಮತ್ತು ಹಿರಿಯ ಸಲಹೆಗಾರರಾಗಿದ್ದ ಮಜು, ದೈನಂದಿನ ಪ್ರಚಾರ ಕಾರ್ಯಾಚರಣೆಯ ಬಗ್ಗೆ ಗಮನ ಹರಿಸಿದ್ದರು. ಅವರು ಬರಾಕ್ ಒಬಾಮ ಆಡಳಿತದಲ್ಲಿಯೂ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಮಜು ಅವರು ಅಮೆರಿಕದಲ್ಲಿ ಜನಿಸಿದ್ದು, ಅವರ ಪೋಷಕರು ಕೇರಳದ ತಿರುವಲ್ಲದಿಂದ ವಲಸೆ ಹೋಗಿದ್ದರು.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada

English summary
Indian-American Maju Varghese in the four member Presidential Inaugural Committee which will organise Joe Biden and Kamala Harris swearing-in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X