ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ-ಅಮೆರಿಕನ್‌ ಆರೋಗ್ಯ ನೀತಿ ತಜ್ಞೆ ಮೀನಾ ಶೇಷಮಣಿ ಮೆಡಿಕೇರ್ ನಿರ್ದೇಶಕಿಯಾಗಿ ನೇಮಕ

|
Google Oneindia Kannada News

ವಾಷಿಂಗ್ಟನ್‌, ಜು.09: ಅಮೆರಿಕದ ಬೈಡನ್-ಹ್ಯಾರಿಸ್ ಆಡಳಿತದಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ (ಎಚ್‌ಎಚ್‌ಎಸ್) ಏಜೆನ್ಸಿ ಪರಿಶೀಲನಾ ತಂಡದ ನಾಯಕತ್ವದಲ್ಲಿ ಸೇವೆ ಸಲ್ಲಿಸಿದ ಭಾರತೀಯ-ಅಮೆರಿಕನ್‌ ಆರೋಗ್ಯ ನೀತಿ ತಜ್ಞೆ ಡಾ. ಮೀನಾ ಶೇಷಮಣಿರನ್ನು ಯುಎಸ್ ಸೆಂಟರ್ ಫಾರ್ ಮೆಡಿಕೇರ್‌ನ ನಿರ್ದೇಶಕರಾಗಿ ನೇಮಿಸಲಾಗಿದೆ.

43 ರ ಹರೆಯದ ಶೇಷಮಣಿ, 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, ವಿಕಲಾಂಗರಿಗೆ ಮತ್ತು ಮೆಡಿಕೇರ್ ವ್ಯಾಪ್ತಿಯನ್ನು ಅವಲಂಬಿಸಿರುವ ಮೂತ್ರಪಿಂಡ ಕಾಯಿಲೆಯ ಕೊನೆಯ ಹಂತದಲ್ಲಿರುವ ಜನರಿಗೆ ಸೇವೆ ಸಲ್ಲಿಸುವ ಕೇಂದ್ರದ ಪ್ರಯತ್ನವನ್ನು ಮುನ್ನಡೆಸಲಿದ್ದಾರೆ.

'ಫಾ. ಸ್ಟಾನ್ ಸ್ವಾಮಿ ನಿಧನದಿಂದ ದುಃಖಿತರಾಗಿದ್ದೇವೆ': ಅಮೆರಿಕ'ಫಾ. ಸ್ಟಾನ್ ಸ್ವಾಮಿ ನಿಧನದಿಂದ ದುಃಖಿತರಾಗಿದ್ದೇವೆ': ಅಮೆರಿಕ

ಡಾ. ಶೇಷಮಣಿ ಉಪ ಆಡಳಿತಾಧಿಕಾರಿ ಮತ್ತು ಸೆಂಟರ್ ಫಾರ್ ಮೆಡಿಕೇರ್ ನಿರ್ದೇಶಕರಾಗಿ ಜುಲೈ 6 ರಿಂದ ಅಧಿಕಾರ ಸ್ವೀಕರಿಸಿದ್ದಾರೆ.

Indian-American Health Policy Expert Meena Seshamani Appointed to Key Medicare Position

ಈ ಬಗ್ಗೆ ಮಾಹಿತಿ ನೀಡಿದ ಸಿಎಂಎಸ್‌ (ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಕೇಂದ್ರಗಳು) ಆಡಳಿತಾಧಿಕಾರಿ ಚಿಕ್ವಿಟಾ ಬ್ರೂಕ್ಸ್-ಲಾಸೂರ್, "ಡಾ. ಮೀನಾ ಶೇಷಮಣಿ ಆರೋಗ್ಯ ರಕ್ಷಣಾ ಕಾರ್ಯನಿರ್ವಾಹಕಿ, ಆರೋಗ್ಯ ಅರ್ಥಶಾಸ್ತ್ರಜ್ಞೆ, ವೈದ್ಯೆ ಮತ್ತು ಆರೋಗ್ಯ ನೀತಿ ತಜ್ಞೆಯಾಗಿ ಮೆಡಿಕೇರ್‌ಗೆ ಉನ್ನತ ಸೇವೆ ನೀಡಲಿದ್ದಾರೆ" ಎಂದು ಹೇಳಿದ್ದಾರೆ.

"ಮೆಡಿಕೇರ್ ಅನ್ನು ಅವಲಂಬಿಸಿರುವ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು. ಹಾಗೆಯೇ ಆರೋಗ್ಯ ಸಮಾನತೆಯನ್ನು ಮುಂದುವರಿಸುವುದು ಸಿಎಂಎಸ್‌ನ ಆದ್ಯತೆಯಾಗಿದೆ. ಆರೋಗ್ಯ ನೀತಿಯು ರೋಗಿಗಳ ನೈಜ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಡಾ. ಶೇಷಮಣಿ ವಿಶಿಷ್ಟ ದೃಷ್ಟಿಕೋನವನ್ನು ತರಲಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಡೆಪ್ಯೂಟಿ ಅಡ್ಮಿನಿಸ್ಟ್ರೇಟರ್ ಮತ್ತು ಸೆಂಟರ್ ಫಾರ್ ಮೆಡಿಕೇರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ," ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆ

ಶೇಷಮಣಿ ಇತ್ತೀಚೆಗೆ ಮೆಡ್‌ಸ್ಟಾರ್ ಹೆಲ್ತ್‌ನಲ್ಲಿ ಕ್ಲಿನಿಕಲ್ ಕೇರ್ ಟ್ರಾನ್ಸ್‌ಫರ್ಮೇಷನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಜನಸಂಖ್ಯೆಯ ಆರೋಗ್ಯ ಮತ್ತು ಮೌಲ್ಯ ಆಧಾರಿತ ಆರೈಕೆಗಾಗಿ 10 ಆಸ್ಪತ್ರೆಯ ಹಿರಿಯ ನಾಯಕತ್ವದಲ್ಲಿ, 300+ ಹೊರರೋಗಿ ಆರೈಕೆ ಸೈಟ್ ಆರೋಗ್ಯ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಸಮುದಾಯ ಆರೋಗ್ಯ, ಜೆರಿಯಾಟ್ರಿಕ್ಸ್ ಮತ್ತು ಉಪಶಾಮಕ ಆರೈಕೆ ಸೇರಿದಂತೆ ಮೀನಾ ಆರೋಗ್ಯ ಸುಧಾರಣಾ ಸಂಸ್ಥೆಯಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Indian-American health policy expert Dr. Meena Seshamani has been appointed as the Director of the US Centre for Medicare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X