ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮಗುವನ್ನು ದತ್ತು ಪಡೆದು, ಹಾಲು ಕುಡಿಯಲಿಲ್ಲವೆಂದು ಕೊಂದ ತಂದೆ

|
Google Oneindia Kannada News

ಹೌಟ್ಸನ್(ಅಮೆರಿಕ), ಜೂನ್ 27: ಮಗು ಹಾಲು ಕುಡಿಯುವುದಿಲ್ಲ ಎಂದು ಹಠ ಮಾಡಿದ್ದಕ್ಕೆ ಮಗುವನ್ನು ಮನೆಯಿಂದ ಆಚೆ ಹಾಕಿದ್ದ ತಂದೆಯೋರ್ವ ನಂತರ ಆ ಮಗುವನ್ನು ಕೊಂದಿರುವ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅಮೆರಿಕದ ಟೆಕ್ಸಾಸ್ ನ ಆಸ್ಟಿನ್ ಎಂಬಲ್ಲಿ ನಡೆದ ಘಟನೆ ಇದು. 2017 ರ ಅಕ್ಟೋಬರ್ ನಲ್ಲಿ ಮಾಥ್ಯೂ ಎನ್ನುವವರ ದತ್ತುಪುತ್ರಿ ಶೆರಿನ್ ಹಾಲುಕುಡಿಯುವುದಿಲ್ಲ ಎಂದು ಹಠ ಮಾಡಿದ್ದಳು. ಇದರಿಂದಾಗಿ ಕೋಪಗೊಂಡ ತಂದೆ ಮ್ಯಾಥ್ಯೂ, ಪುಟ್ಟ ಮಗುವಿಗೆ ಮನೆಯಾಚೆ ಇರುವ ದೊಡ್ಡ ಮರದ ಕೆಳಗೆ ತಾಸುಗಟ್ಟಲೆ ನಿಂತಿರುವ ಶಿಕ್ಷೆಯನ್ನು ದಯಪಾಲಿಸಿದ್ದ. ಹೀಗೆ ನಿಂತಿದ್ದ ಮಗು ಕೆಲ ಹೊತ್ತಿನಲ್ಲಿ ಕಾಣೆಯಾಗಿತ್ತು. ಮಗು ಕಾಣೆಯಾಗಿದೆ ಎಂದು ಆತ ನಂತರ ಪೊಲೀಸರಿಗೆ ದೂರೂ ನೀಡಿದ್ದ.

ಹಾಲು ಕುಡಿಯದ 3 ವರ್ಷದ ಮಗುವನ್ನು ಮನೆಯಿಂದ ಹೊರಹಾಕಿದ ತಂದೆ!ಹಾಲು ಕುಡಿಯದ 3 ವರ್ಷದ ಮಗುವನ್ನು ಮನೆಯಿಂದ ಹೊರಹಾಕಿದ ತಂದೆ!

'ಮಗಳು ನಂತರ ಮನೆಯ ಬಳಿ ಕಾಣಲೇ ಇಲ್ಲ, ಆದರೆ ಇದಾಗಿ ಹದಿನೈದು ದಿನದ ನಂತರ ಮಗಳ ಕೊಳೆತ ಶವ ಪತ್ತೆಯಾಗಿತ್ತು ' ಎಂದು ಮ್ಯಾಥ್ಯೂ ಪೊಲೀಸರ ಬಳಿ ಹೇಳಿಕೊಂಡಿದ್ದ. ಆದರೆ ವಿಚಾರಣೆಯ ನಂತರ ಮ್ಯಾಥ್ಯೂವೇ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದ. 'ಆದರೆ ಅದು ಆಕಸ್ಮಿಕವಾಗಿ ನಡೆದ ಘಟನೆ. ನಾನು ಮಗಳಿಗೆ ಹಾಲು ಕುಡಿಯಲು ಹೇಳಿದೆ. ಅವಳು ಕುಡಿಯಲಿಲ್ಲ. ಆದ್ದರಿಂದ ಆಕೆಗೆ ಹೊಡೆದೆ. ನಾನು ಕೊಟ್ಟ ಏಟಿಗೆ ಮಗು ಪ್ರಾಣ ಕಳೆದುಕೊಂಡಿತ್ತು. ಇದರಿಂದ ಭಯಗೊಂದ ನಾನು ಅದರ ದೇಹವನ್ನು ನೀಲಿ ಬಣ್ಣದ ಕವರ್ ವೊಂದರಲ್ಲಿ ಹಾಕಿ ಎಸೆದೆ ಎಂದು ಒಪ್ಪಿಕೊಂಡಿದ್ದಾನೆ.

Indian-American foster father kills his daughter for not drinking milk

ಇದೀಗ ಆತನಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

ಮಗು ಶೆರಿನ್ ಭಾರತೀಯ ಮೂಲದವಳಾಗಿದ್ದು, ಆಕೆಯನ್ನು ಮ್ಯಾಥ್ಯೂ ದಂಪತಿ ದತ್ತುಪಡೆದಿದ್ದರು. ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಶೆರಿನ್, ಮ್ಯಾಥ್ಯೂ ದಂಪತಿ ಆಕೆಯನ್ನು ದತ್ತುಪಡೆದ ಮೇಲೆ ಆರೋಗ್ಯದಲ್ಲಿ ಸುಧಾರಿಸಿಕೊಂಡಿದ್ದಳು.

English summary
An Indian-American foster father of 3 year old Sherin Mathews, was sentenced to life after his daughter's murder proved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X