ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1 ಬಿ ವೀಸಾ ವಂಚನೆ, ಇಂಡೋ -ಅಮೆರಿಕನ್ ಸಿಇಒ ಬಂಧನ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 06: ಅಮೆರಿಕದ ನಕಲಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ ಪ್ರಕರಣದ ಬೆನ್ನಲ್ಲೇ, ಎಚ್ 1 ಬಿ ವೀಸಾ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಮೂಲದ ಅಮೆರಿಕನ್ ಒಬ್ಬರನ್ನು ಬಂಧಿಸಲಾಗಿದೆ.

ನ್ಯೂಜೆರ್ಸಿಯ ಪಿಸ್ಕಾಟವೇ ಟೌನ್ ಶಿಪ್ ನಿವಾಸಿಯಾಗಿರುವ ನೀರಜ್ ಶರ್ಮ(43) ಅವರು 11 ನಕಲಿ ಎಚ್1 ಬಿ ವೀಸಾ ಅರ್ಜಿಗಳನ್ನು ಸಲ್ಲಿಸಿದ್ದಲ್ಲದೆ, ಅಕ್ರಮವಾಗಿ ಯು ಸ್ ಪೌರತ್ವ ಪಡೆದಿರುವುದು ಕಂಡು ಬಂದಿದೆ ಎಂದು ಯುಎಸ್ ಅಟರ್ನಿ ಕ್ರೇಗ್ ಕಾರ್ಪೆನಿಟೋ ಹೇಳಿದ್ದಾರೆ.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ? ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

ನೆವಾರ್ಕ್ ಫೆಡರಲ್ ಕೋರ್ಟಿನ ಯುಎಸ್ ಮ್ಯಾಜಿಸ್ಟ್ರೇಟ್ ಜಡ್ಜ್ ಮೈಕಲ್ ಹಮಾರ್ ಎದುರು ವಿಚಾರಣೆಗೆ ನೀರಜ್ ಶರ್ಮ ಹಾಜರಾಗಬೇಕಿದೆ.

Indian American Arrested on Charges of H-1B, Naturalisation Fraud

ನೀರಜ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾದರೆ 10 ವರ್ಷ ಜೈಲುಶಿಕ್ಷೆ ಹಾಗೂ 250,000 ಯುಎಸ್ ಡಾಲರ್ ದಂಡ ವಿಧಿಸಲಾಗುತ್ತದೆ. ನಕಲಿ ದಾಖಲೆಗಳನ್ನು ನೀಡಿ ವಿದೇಶಿ ಐಟಿ ಉದ್ಯೋಗಿಗಳನ್ನು ಕಡಿಮೆ ವೆಚ್ಚದಲ್ಲಿ ಯುಎಸ್ ನಲ್ಲಿ ಕಾರ್ಯನಿರ್ವಹಿಸಲು ನೇಮಕ ಮಾಡಿದ್ದರು ಎಂದು ತಿಳಿದು ಬಂದಿದೆ.

ನ್ಯೂಜೆರ್ಸಿಯ ಸಮರ್ ಸೆಟ್ ನಲ್ಲಿರುವ ಮ್ಯಾಗ್ನವಿಷನ್ ಎಲ್ಎಲ್ ಸಿ ಎಂಬ ಮಾಹಿತಿ ತಂತ್ರಜ್ಞಾನ ಕನ್ಸಲ್ಟಿಂಗ್ ಕಂಪನಿಯ ಮಾಲೀಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾರೆ.

ಅಮೆರಿಕ ವೀಸಾ ಹಗರಣ: 130 ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಿತ್ತುಅಮೆರಿಕ ವೀಸಾ ಹಗರಣ: 130 ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಿತ್ತು

ಸುಮಾರು 65,000 ವೀಸಾಗಳನ್ನು ವಿದೇಶದಿಂದ ನೇಮಕವಾಗುವ ಉದ್ಯೋಗಿಗಳಿಗೆ ಯುಎಸ್ ನೀಡುತ್ತಿದೆ. ಯುಎಸ್ ಕಾಲೇಜ್ ಹಾಗೂ ವಿವಿಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದೇಶಿಯರಿಗೆ 20,000 ವೀಸಾಗಳು ಲಭ್ಯವಾಗುತ್ತಿದೆ.

ಈ ನಡುವೆ ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗಪಡಿಸುವವರನ್ನು ಪತ್ತೆಹಚ್ಚುವುದಕ್ಕಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಮಿಶಿಗನ್ ರಾಜ್ಯದಲ್ಲಿ 'ಫಾರ್ಮಿಂಗ್ಟನ್ ವಿಶ್ವವಿದ್ಯಾನಿಲಯ' ಎಂಬ ನಕಲಿ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಿದೆ.

ಈ ವಿಶ್ವವಿದ್ಯಾನಿಲಯಕ್ಕೆ ಕಮಿಶನ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುತ್ತಿದ್ದ ಆರೋಪದಲ್ಲಿ ಭಾರತ ಮೂಲದ 8 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ

English summary
An Indian-American was arrested on Tuesday for allegedly submitting 11 fake H-1B visa applications and fraudulently procuring his own citizenship, US Attorney Craig Carpenito said. Neeraj Sharma, 43, living in the Piscataway township of New Jersey, is charged by complaint with one count of visa fraud and one count of naturalization fraud, the attorney said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X