ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಭಯದಿಂದ 3 ತಿಂಗಳು ಏರ್‌ಪೋರ್ಟ್‌ನಲ್ಲಿಯೇ ವಾಸ: ಭಾರತ ಮೂಲದ ವ್ಯಕ್ತಿ ಬಂಧನ

|
Google Oneindia Kannada News

ಲಾಸ್ ಏಂಜಲಿಸ್, ಜನವರಿ 19: ಕೊರೊನಾ ವೈರಸ್ ಪಿಡುಗಿನ ಕಾರಣ ಪ್ರಯಾಣಿಸಲು ಭಯಗೊಂಡು ಸುಮಾರು ಮೂರು ತಿಂಗಳಿನಿಂದ ವಿಮಾನ ನಿಲ್ದಾಣದೊಳಗೇ ವಾಸಿಸುತ್ತಿದ್ದ ಭಾರತ ಮೂಲದ 36 ವರ್ಷದ ವ್ಯಕ್ತಿಯನ್ನು ಅಮೆರಿಕದ ಷಿಕಾಗೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತಾ ವಲಯದಿಂದ ಬಂಧಿಸಲಾಗಿದೆ.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ ವಾಸಿಸುತ್ತಿರುವ ಆದಿತ್ಯ ಸಿಂಗ್ ಎಂಬುವವರು ಷಿಕಾಗೊದ ಓಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷಿತ ಪ್ರದೇಶವೊಂದರಲ್ಲಿ ಅಕ್ಟೋಬರ್ 19ರಿಂದಲೂ ವಾಸಿಸುತ್ತಿದ್ದರು. ಅವರನ್ನು ಶನಿವಾರ ಬಂಧಿಸಲಾಗಿದೆ. ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಅಪರಾಧದಲ್ಲಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಲಸಿಕೆ! ಅಮೆರಿಕ ಕೊಟ್ಟಿತು ಈ ಎಚ್ಚರಿಕೆನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಲಸಿಕೆ! ಅಮೆರಿಕ ಕೊಟ್ಟಿತು ಈ ಎಚ್ಚರಿಕೆ

ಅಕ್ಟೋಬರ್ 19ರಂದು ಲಾಸ್ ಏಂಜಲಿಸ್‌ನಿಂದ ಓಹರೆಗೆ ವಿಮಾನದಲ್ಲಿ ಬಂದಿದ್ದ ಆದಿತ್ಯ ಸಿಂಗ್, ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿ ನೆಲೆಸಿದ್ದರು. ವಿಶೇಷವೆಂದರೆ ಇದು ಸಿಬ್ಬಂದಿಯ ಕಣ್ಣಿಗೆ ಬಿದ್ದಿರಲಿಲ್ಲ.

Indian-American Arrested For Living In Airport For 3 Months Due To Fear Of Covid-19

ಯುನೈಟೆಡ್ ಏರ್‌ಲೈನ್ಸ್‌ನ ಇಬ್ಬರು ಸಿಬ್ಬಂದಿ ಆದಿತ್ಯ ಅವರನ್ನು ಕಂಡು ತಮ್ಮಗುರುತಿನ ಚೀಟಿ ತೋರಿಸುವಂತೆ ಕೇಳಿದರು. ಅವರು ಬ್ಯಾಡ್ಜ್ ಒಂದನ್ನು ತೋರಿಸಿದ್ದರು. ಆದರೆ ಅದು ಅಕ್ಟೋಬರ್‌ನಲ್ಲಿ ಬ್ಯಾಡ್ಜ್ ಕಳೆದುಕೊಂಡಿರುವುದಾಗಿ ತಿಳಿಸಿದ್ದ ಕಾರ್ಯಾಚರಣೆ ವ್ಯವಸ್ಥಾಪಕರದ್ದಾಗಿತ್ತು.

'ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯ ಬ್ಯಾಡ್ಜ್ ಸಿಕ್ಕಿತ್ತು. ಕೋವಿಡ್ ಕಾರಣದಿಂದ ಮನೆಗೆ ಮರಳಲು ಭಯವಾಗಿತ್ತು' ಎಂದು ಆದಿತ್ಯ ಸಿಂಗ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇತರೆ ಪ್ರಯಾಣಿಕರಿಂದ ಭಿಕ್ಷೆ ಪಡೆದು ಜೀವನ ನಡೆಸುತ್ತಿದ್ದರು. ಈ ಘಟನೆಯ ಮಾಹಿತಿ ಪಡೆದ ನ್ಯಾಯಾಧೀಶರು ಪ್ರಕರಣದ ಸನ್ನಿವೇಶಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

English summary
An Indian-American man was arrested for living in Chikago airport for 3 months due to the fear of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X