• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾನವ ಸಹಿತ ಚಂದ್ರಯಾನ ನಾಸಾ ತಂಡದಲ್ಲಿ ಓರ್ವ ಭಾರತೀಯ

|

ವಾಷಿಂಗ್ಟನ್, ಡಿ. 11: ಮಾನವ ಸಹಿತ ಚಂದ್ರಯಾನ ಯೋಜನೆ ಹಾಕಿಕೊಂಡಿರುವ ನಾಸಾದ ತಂಡದಲ್ಲಿ ಭಾರತ ಮೂಲದ ಗಗನಯಾನಿ ಕೂಡಾ ಆಯ್ಕೆಯಾಗಿದ್ದಾರೆ. ಇಂಡೋ ಅಮೆರಿಕನ್ ಗಗನಯಾನಿ ಸೇರಿದಂತೆ 18 ಮಂದಿ ತಂಡಕ್ಕೆ ವಿಶೇಷ ತರಬೇತಿ ಆರಂಭವಾಗಿದೆ.

18 ಮಂದಿ ಗಗನಯಾತ್ರಿಗಳ ತಂಡದಲ್ಲಿ ಮಹಿಳೆಯರೇ ಅಧಿಕವಾಗಿದ್ದು, ಆರ್ಟಿಮಿಸ್ ಚಂದ್ರನ ಮೇಲೆ ಲ್ಯಾಂಡಿಂಗ್ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆಯಲಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಸೂಕ್ತ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ತಂಡದಲ್ಲಿರುವ ಭಾರತೀಯ ಮೂಲದ ಅಮೆರಿಕನ್ ರಾಜಾ ಜಾನ್ ವರ್ಪುತೂರ್ ಎಂದು ಗುರುತಿಸಲಾಗಿದೆ. 43ವರ್ಷ ವಯಸ್ಸಿನ ಗಗನಯಾನಿ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದು, ಯುಎಸ್ ನೇವಿ ಪೈಲಟ್ ಸ್ಕೂಲ್, ಎಂಐಟಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ತಂಡದಲ್ಲಿರುವ ಏಕೈಕ ಇಂಡಿಯನ್- ಅಮೆರಿಕನ್ ಎನಿಸಿಕೊಂಡಿದ್ದಾರೆ.

2017ರಿಂದ ಗಗನಯಾನಿ ಅಭ್ಯರ್ಥಿ ತರಗತಿಗಳಲ್ಲಿ ಪಾಲ್ಗೊಂಡು ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಸಾ ಹೇಳಿದೆ.

ಗಗನಯಾನಿಗಳು ವಿವಿಧ ವಯೋಮಿತಿಯಲ್ಲಿದ್ದು, 32 ವರ್ಷದವರೊಬ್ಬರು ಅತ್ಯಂಕ ಕಿರಿಯರೊಬ್ಬರು ಹಾಗೂ 55 ವರ್ಷದವರು ಹಿರಿಯರಾಗಿದ್ದಾರೆ. ಸರಾಸರಿ ವಯಸ್ಸು 30 ರಿಂದ 40ರೊಳಗಿನ ವಯೋಮಿತಿಯವರಿದ್ದಾರೆ.

2024ರ ಚಂದ್ರಯಾನ ಕಾರ್ಯಕ್ರಮವು ಮೊದಲಿಗೆ ಮಹಿಳಾ ಗಗನಯಾನಿಗೆ ಚಂದ್ರನ ಅಂಗಳದಲ್ಲಿ ಕಾಲಿಡಲು ಅವಕಾಶ ನೀಡುತ್ತಿದೆ. ಚಂದ್ರನ ಮೇಲೆ ನಡಿಗೆ ಎಂಬುದು ಪ್ರತಿಯೊಬ್ಬರ ಕನಸು, ಅತ್ಯಂತ ಹೆಮ್ಮೆಯ ಕ್ಷಣ ಎಂದು ಮುಖ್ಯ ಗಗನಯಾನಿ ಪ್ಯಾಟ್ ಫಾರೆಸ್ಟರ್ ಹೇಳಿದ್ದಾರೆ. ಈ ತಂಡದಲ್ಲಿ ಕಳೆದ ವರ್ಷ ಮಹಿಳಾ ಗಗನಯಾನ ಯೋಜನೆ ಯಶಸ್ವಿಗೊಳಿಸಿದ ಕ್ರಿಶ್ಚಿಯನ್ ಕೋಚ್ ಹಾಗೂ ಜೆಸ್ಸಿಕಾ ಮೇರ್ ಕೂಡಾ ಇದ್ದಾರೆ.

English summary
An Indian-American is among the 18 astronauts selected by NASA for its manned mission to the Moon and beyond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X