ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 02: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವು ತ್ವರಿತವಾಗಿ ವ್ಯಾಪಾರ ವಹಿವಾಟು ಒಪ್ಪಂದಕ್ಕೆ ಮುಂದಾಗುತ್ತಿರುವ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮೆಕ್ಸಿಕೋ, ಕೆನಡಾ ನಡುವೆ ಯುಎಸ್ಎ ವ್ಯಾಪಾರ ಒಪ್ಪಂದ ಏರ್ಪಟ್ಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಭಾರತವು ನನ್ನನ್ನು ಖುಷಿಪಡಿಸಲು ಯತ್ನಿಸುತ್ತಿದೆ ಎಂದರು.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಭಾರತವನ್ನು 'ಟ್ಯಾರಿಫ್ ಕಿಂಗ್' ಎಂದು ಕರೆದರು. 'ನಮಗೆ ಕರೆ ಮಾಡಿ, ತಕ್ಷಣವೇ ಮಾತುಕತೆ ನಡೆಸುವುದರ ಬಗ್ಗೆ ಕೇಳಿಕೊಂಡಿದ್ದಾರೆ' ಎಂದು ಟ್ರಂಪ್ ಹೇಳಿಕೆ ಉಲ್ಲೇಖಿಸಿ ಎಎಫ್ ಪಿ ವರದಿ ಮಾಡಿದೆ.

India wants trade deal with US primarily to keep me happy: Donald Trump

ಯುಎಸ್ ಟ್ರೇಡ್ ಪ್ರತಿನಿಧಿ ಮಾರ್ಕ್ ಲಿನ್ ಸ್ಕಾಟ್ ಅವರು ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡು, ಯುಎಸ್ ಗೆ ಮರಳಿದ್ದಾರೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವಹಿವಾಟು ಹಾಗೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಭಾರತದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು.

ಟ್ರಂಪ್ ಗೆ ಮುನಿಸೇಕೆ?: ಅಮೆರಿಕದ ಉತ್ಪನ್ನಗಳ ಮೇಲೆ ಭಾರತದಲ್ಲಿ ಭಾರಿ ಸುಂಕ ಹಾಕಲಾಗುತ್ತಿದೆ. ಹಾರ್ಲೆ ಡೇವಿಡ್ಸನ್ ಮೋಟರ್ ಸೈಕಲ್ ಮೇಲಿನ ಸುಂಕ ವಿವಾದವನ್ನು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ್ದೇನೆ. ಸುಂಕ ಇಳಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ. ಆದರೆ, ಸುಂಕ ಇಳಿಕೆಯಿಂದಲೂ ಬೆಲೆಯಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.
ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಕಿಡಿಕಾರಿದ್ದಾರೆ.

ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಬೆಲೆಯ ದ್ವಿಚಕ್ರವಾಹನಗಳ ಮೇಲೆ ಅಬಕಾರಿ ಸುಂಕವನ್ನು ಶೇ50ರಷ್ಟು ಕೇಂದ್ರ ಸರ್ಕಾರ ತಗ್ಗಿಸಿದೆ. ಆದರೆ, ಇದರಿಂದ ಟ್ರಂಪ್ ಅವರು ಖುಷಿಯಾಗಿಲ್ಲ.

ಕಸ್ಟಮ್ಸ್ ಸುಂಕ ತಗ್ಗಿಸಿರುವುದರಿಂದ ಟ್ರಯಾಂಪ್, ಹಾರ್ಲೆ ಬೆಲೆ ತಗ್ಗುವುದರಿಂದ ನಷ್ಟ. ಪರೋಕ್ಷ ತೆರಿಗೆ ವಿಧಿಸಬಹುದಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ.

English summary
India wants to start trade talks with the US "immediately", US President Donald Trump said today at a press conference to announce a trade deal struck between the United States, Mexico and Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X