ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ, ಸೈಬರ್ ಭದ್ರತೆ ಬಗ್ಗೆ ಭಾರತದೊಂದಿಗೆ ಮತ್ತೆ ಅಮೆರಿಕ ಮಾತುಕತೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 24: ಭಯೋತ್ಪಾದನೆ, ಸೈಬರ್ ಭದ್ರತೆ ಕುರಿತು ಅಮೆರಿಕ ಮತ್ತೊಮ್ಮೆ ಭಾರತದ ಜತೆ ಮಾತುಕತೆ ನಡೆಸಲಿದೆ.

ಈ ಕುರಿತು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಮಾಹಿತಿ ನೀಡಿದೆ. ಸೈಬರ್ ಭದ್ರತೆ, ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಯೊರ್ಕಾಸ್ ಮತ್ತು ಸಂಧು ಸಮಾಲೋಚನೆ ನಡೆಸಿದ್ದಾರೆ.

ಭಾರತ-ಅಮೆರಿಕ ರಕ್ಷಣಾ ಪಾಲುದಾರಿಕೆ ಬಗ್ಗೆ ಮಾತನಾಡಿದ ಲಾಯ್ಡ್ ಆಸ್ಟಿನ್ಭಾರತ-ಅಮೆರಿಕ ರಕ್ಷಣಾ ಪಾಲುದಾರಿಕೆ ಬಗ್ಗೆ ಮಾತನಾಡಿದ ಲಾಯ್ಡ್ ಆಸ್ಟಿನ್

2011 ರಲ್ಲಿ ಒಬಾಮಾ ಆಡಳಿತವಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಗೃಹ ಇಲಾಖೆ ಹಾಗೂ ಅಮೆರಿಕದ ಆಂತರಿಕ ಭದ್ರತಾ ಇಲಾಖೆ ನಡುವೆ ಮಾತುಕತೆ ನಡೆದಿದ್ದವು. ಆಗ ಕಾರ್ಯದರ್ಶಿಯಾಗಿದ್ದ ಜಾನೆಟ್ ನೊಪೊಲಿಟಾನೊ ಅವರು ಭಾರತಕ್ಕೆ ಭೇಟಿ ನೀಡಿ, ಭಾರತದ ಅಂದಿನ ಗೃಹ ಸಚಿವರಾಗಿದ್ದ ಪಿ ಚಿದಂಬರಂ ಅವರ ಜತೆ ಮಾತನಾಡಿದ್ದರು.

India, US Agree To Re-Establish Homeland Security Dialogue

ಬಳಿಕ 2013ರಲ್ಲಿ ನಾಪೊಲಿಟಾನೊ ಹಾಗೂ ಅಂದಿನ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ನಡುವೆ ಚರ್ಚೆ ನಡೆದಿದ್ದವು. ಆದರೆ, ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಈ ಸಂಬಂಧವನ್ನು ಸ್ಥಗಿತಗೊಳಿಸಲಾಗಿತ್ತು.

ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮಾಯೊರ್ಕಾಸ್ ಅವರು ಅಮೆರಿಕದಲ್ಲಿನ ಭಾರತದ ರಾಯಭಾರಿ ತಾರಾಂಜಿತ್ ಸಿಂಗ್ ಸಂಧು ಅವರೊಂದಿಗೆ ಚರ್ಚಿಸಿ ಭಾರತ ಹಾಗೂ ಆಂತರಿಕ ಭದ್ರತಾ ಇಲಾಖೆಯ ಸಂಬಂಧಗಳನ್ನು ಬಲಪಡಿಸುವ ಕುರಿತು ಪರಸ್ಪರ ಚರ್ಚೆ ನಡೆಸಿದರು.

English summary
The Biden administration has announced the re-establishment of the Homeland Security Dialogue with India that was discontinued by the previous Trump dispensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X