• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕ

|

ವಾಷಿಂಗ್ಟನ್, ಅಕ್ಟೋಬರ್ 5: ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ಇಂಧನಕ್ಕೆ ಪರ್ಯಾಯವಾಗಿ ಬೇರೆ ಮಾರ್ಗವನ್ನು ಕಂಡುಕೊಳ್ಳಲು ಭಾರತ ಮತ್ತು ಇರಾಕ್‌ನಂತಹ ದೇಶಗಳಿಗೆ ಹೆಚ್ಚಿನ ಸಮಯ ನೀಡುವುದಾಗಿ ಅಮೆರಿಕ ಹೇಳಿದೆ.

ಇರಾನ್ ವಿರುದ್ಧದ ಎರಡನೆಯ ಹಂತದ ನಿರ್ಬಂಧವು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಈ ಅವಧಿಯೊಳಗೆ ಅಲ್ಲಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವಂತೆ ಅಮೆರಿಕ ಎಲ್ಲ ದೇಶಗಳಿಗೂ ಸೂಚನೆ ನೀಡಿದೆ.

ನಮ್ಮ ಸ್ನೇಹಿತ ಭಾರತಕ್ಕೆ ಬೇರೆ ಕಡೆಯಿಂದ ತೈಲ ಕೊಡಿಸ್ತೀವಿ: ಅಮೆರಿಕ

'ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಅಲ್ಲದೆ ಸರ್ಕಾರದ ಇತರೆ ಅಧಿಕಾರಿಗಳು ಕೂಡ ಭಾರತದೊಂದಿಗೆ ಮಾತುಕತೆ ನಡೆಸಿದ್ದಾರೆ. ಇರಾನ್‌ನ ಪ್ರಮುಖ ತೈಲ ಆಮದುದಾರರಾದ ಭಾರತ ಅಥವಾ ಇರಾಕ್‌ಗೆ ಮಾರುಕಟ್ಟೆ ದರದಲ್ಲಿ ಪರ್ಯಾಯವಾಗಿ ತೈಲ ಪೂರೈಕೆ ಮಾಡುವ ಇತರೆ ತೈಲ ಮಾರಾಟಗಾರರನ್ನು ಕಂಡುಕೊಳ್ಳಲು ಹೆಚ್ಚುವರಿ ಕಾಲಾವಕಾಶ ನೀಡಲಾಗುವುದು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.

ನವೆಂಬರ್ ನಿಂದ ಇರಾನ್ ತೈಲ ಭಾರತ ಖರೀದಿಸಲ್ಲ, ದುಬಾರಿಗೆ ದಾರಿಯೇ?

ಇರಾನ್ ಮೇಲಿನ ನಿರ್ಬಂಧವನ್ನು ಸಾಧಿಸುವುದು ನಮಗೆ ಮುಖ್ಯ ಎಂದು ಹೇಳುವುದಿಲ್ಲ. ಆದರೆ, ಅದರ ಉದ್ದೇಶ ಏನು ಎಂಬ ಕಲ್ಪನೆಗಳೊಂದಿಗೆ ಯಾರೂ ಅದರೊಂದಿಗೆ ನಂಟು ಮುಂದುವರಿಸಲು ಹೋಗಬಾರದು. ಅಲ್ಲಿನ ತೈಲ ವ್ಯವಹಾರವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ತರುವ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕು. ಬಹುಶಃ ಅದು ತಕ್ಷಣವೇ ಆಗಬೇಕು ಎಂದಿಲ್ಲ ಎಂದಿರುವ ಅವರು, ಭಾರತದಂತಹ ಕೆಲವು ದೇಶಗಳಿಗೆ ಇರಾನ್‌ನಿಂದ ತೈಲ ಖರೀದಿಯನ್ನು ಸಂಪೂರ್ಣ ಶೂನ್ಯಗೊಳಿಸುವುದು ಸಾಧ್ಯವಾಗಲಾರದು ಎಂದಿದ್ದಾರೆ.

ನಿರ್ಬಂಧ ವಿಧಿಸುವ ಮುನ್ನ ಯೋಚಿಸಿ: ಅಮೆರಿಕಕ್ಕೆ ಭಾರತದ ಖಡಕ್ ಸೂಚನೆ

ಆದರೆ, ಇದು ಒಬಾಮಾ ಆಡಳಿತವಲ್ಲ ಎನ್ನುವುದು ಇರಾಕ್‌ ಮಾತ್ರವಲ್ಲ, ಎಲ್ಲ ದೇಶಗಳಿಗೂ ನನ್ನ ಸಂದೇಶ ಅನ್ವಯಿಸುತ್ತದೆ. ದೇಶಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡುವುದು ನಮ್ಮ ನೀತಿಯಲ್ಲಿಲ್ಲ ಎಂದೂ ಹೇಳಿದ್ದಾರೆ.

English summary
America going give more time for India to find substitute for Iran to Import oil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X