• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿರುವ ಭಾರತ

|
Google Oneindia Kannada News

ವಾಷಿಂಗ್ಟನ್‌, ಜು.31: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಆಗಸ್ಟ್ 1 ರಂದು ವಹಿಸಿಕೊಳ್ಳಲಿದೆ. ಮತ್ತು ಈ ತಿಂಗಳಲ್ಲಿ ಮೂರು ಪ್ರಮುಖ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಕ್ರಮಗಳಲ್ಲಿ ಸಹಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

"ನಾವು ನಮ್ಮ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ಅದೇ ತಿಂಗಳಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುವುದು ನಮಗೆ ಒಂದು ಗೌರವವಾಗಿದೆ," ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಟಿಎಸ್ ತಿರುಮೂರ್ತಿ ಭಾರತ ಪ್ರಬಲ 15 ರಾಷ್ಟ್ರಗಳ ಯುಎನ್ ಸಂಸ್ಥೆಯ ಅಧ್ಯಕ್ಷತೆಯನ್ನು ನೀಡುವ ಮುನ್ನಾದಿನದಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ದಾನಿಗಳೇ ಸಹಾಯ ಮಾಡಿ ಪ್ಲೀಸ್! ಕೈಮುಗಿದು ಕೇಳಿಕೊಂಡ ವಿಶ್ವಸಂಸ್ಥೆ!ದಾನಿಗಳೇ ಸಹಾಯ ಮಾಡಿ ಪ್ಲೀಸ್! ಕೈಮುಗಿದು ಕೇಳಿಕೊಂಡ ವಿಶ್ವಸಂಸ್ಥೆ!

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಕಾರ್ಯರಂಭವನ್ನು ಆಗಸ್ಟ್ 2 ರ ಸೋಮವಾರದಂದು ಮಾಡಲಿದೆ. ತಿರುಮೂರ್ತಿಯವರು ಯುಎನ್ ಪ್ರಧಾನ ಕಚೇರಿಯಲ್ಲಿ ಹೈಬ್ರಿಡ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ತಿಂಗಳ ಕೌನ್ಸಿಲ್ ಕಾರ್ಯಕ್ರಮದ ಕುರಿತು ನಡೆಸಲಿದ್ದಾರೆ.

ಯುಎನ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ತಿರುಮತಿಯು ಯುನೈಟೆಡ್‌ ನೇಷನ್ಸ್‌ನ ಸದಸ್ಯ ರಾಷ್ಟ್ರಗಳ ಮಂಡಳಿಯ ಸದಸ್ಯರಲ್ಲದ ರಾಷ್ಟ್ರಗಳಿಗೆ ಬ್ರೀಫಿಂಗ್ ಅನ್ನು ಒದಗಿಸುತ್ತದೆ.

ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು ಜನವರಿ 1, 2021 ರಂದು ಆರಂಭವಾಯಿತು. ಆಗಸ್ಟ್ 202-22 ರ ಅವಧಿಯಲ್ಲಿನ ಈ ಅಧ್ಯಕ್ಷತೆಯು ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿದ್ದರೂ ಭಾರತವು ಮೊದಲ ಅಧ್ಯಕ್ಷತೆಯಾಗಲಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಭಾರತವು ತನ್ನ ಎರಡು ವರ್ಷಗಳ ಅಧಿಕಾರಾವಧಿಯ ಕೊನೆಯ ತಿಂಗಳಲ್ಲಿ ಮಂಡಳಿಯ ಅಧ್ಯಕ್ಷತೆಯನ್ನು ವಹಿಸುತ್ತದೆ.

ಯುದ್ಧ ಮುಗಿದ ಮೇಲೆ ಅನ್ನವೂ ಇಲ್ಲ, ಮಲಗಲು ಮನೆಯೂ ಉಳಿದಿಲ್ಲ! ಯುದ್ಧ ಮುಗಿದ ಮೇಲೆ ಅನ್ನವೂ ಇಲ್ಲ, ಮಲಗಲು ಮನೆಯೂ ಉಳಿದಿಲ್ಲ!

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಮೂರು ಪ್ರಮುಖ ಪ್ರದೇಶಗಳಲ್ಲಿ ಉನ್ನತ ಮಟ್ಟದ ಸಹಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಕಡಲ ಭದ್ರತೆ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹ ಪ್ರದೇಶಗಳಲ್ಲಿ ಉನ್ನತ ಮಟ್ಟದ ಸಹಿ ಕಾರ್ಯಕ್ರಮಗಳನ್ನು ಬಾರತವು ಆಯೋಜಿಸಲಿದೆ.

ತನ್ನ ವೀಡಿಯೊ ಸಂದೇಶದಲ್ಲಿ, ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಟಿಎಸ್ ತಿರುಮೂರ್ತಿಯವರು ಸಮುದ್ರ ಭದ್ರತೆ ಭಾರತಕ್ಕೆ ಹೆಚ್ಚಿನ ಆದ್ಯತೆಯನ್ನು ಹೊಂದಿದೆ ಎಂದು ಹೇಳಿದರು ಮತ್ತು ಭದ್ರತಾ ಮಂಡಳಿಯು ಈ ವಿಷಯದ ಬಗ್ಗೆ ಸಮಗ್ರವಾದ ಮಾರ್ಗವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಕೂಡಾ ಉಲ್ಲೇಖ ಮಾಡಿದರು.

"ಶಾಂತಿಪಾಲನೆಯು ನಮ್ಮ ಹೃದಯಕ್ಕೆ ಹತ್ತಿರವಾದ ವಿಷಯವಾಗಿದೆ. ನಮ್ಮದೇ ದೀರ್ಘ ಮತ್ತು ಪ್ರವರ್ತಕ ಒಳಗೊಳ್ಳುವಿಕೆಯೊಂದಿಗೆ ಶಾಂತಿಪಾಲನೆಯ ವಿಷಯವಾಗಿದೆ," ಎಂದು ರಾಯಭಾರಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ. ಹಾಗೆಯೇ ಶಾಂತಿಪಾಲಕರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬುದರ ಕುರಿತು ಭಾರತವು ಗಮನ ಹರಿಸುತ್ತದೆ. ವಿಶೇಷವಾಗಿ ಉತ್ತಮ ತಂತ್ರಜ್ಞಾನವನ್ನು ಬಳಸುವುದು ಮತ್ತು ಶಾಂತಿಪಾಲಕರ ವಿರುದ್ಧ ಅಪರಾಧಗಳನ್ನು ಮಾಡುವ ಅಪರಾಧಿಗಳನ್ನು ಹೇಗೆ ಮುನ್ನಲೆಗೆ ತರುವುದು ಎಂಬುವುದು ಮುಖ್ಯವಾಗಿದೆ," ಎಂದು ಕೂಡಾ ಟಿಎಸ್ ತಿರುಮೂರ್ತಿ ಮಾಹಿತಿ ನೀಡಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿ, ಭಾರತವು ಭಯೋತ್ಪಾದನೆ ನಿಗ್ರಹದ ಬಗ್ಗೆ ಗಮನ ಸೆಳೆಯುತ್ತಲೇ ಇರುತ್ತದೆ. ಹಾಗೆಯೇ ಭಾರತವು ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಲವಾರು ವಿಚಾರಗಳನ್ನು ವಿಶ್ವಕ್ಕೆ ಪ್ರಸ್ತಾಪಿಸಿದೆ.

ತಿರುಮೂರ್ತಿಯವರು ಕೌನ್ಸಿಲ್‌ನಲ್ಲಿ ಭಾರತದ ಅಧಿಕಾರಾವಧಿಯ ಕೊನೆಯ ಏಳು ತಿಂಗಳ ಬಗ್ಗೆ ಮಾತನಾಡಿದರು. "ನಾವು ವಿವಿಧ ವಿಷಯಗಳ ಮೇಲೆ ತತ್ವಬದ್ಧ ಮತ್ತು ಮುಂದಕ್ಕೆ ನೋಡುವ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಹೆದರುವುದಿಲ್ಲ. ನಾವು ಕ್ರಿಯಾಶೀಲರಾಗಿದ್ದೇವೆ. ನಾವು ನಮ್ಮ ಆದ್ಯತೆಯ ಸಮಸ್ಯೆಗಳ ಮೇಲೆ ಗಮನ ಹರಿಸಿದ್ದೇವೆ," ಎಂದರು.

"ಕೌನ್ಸಿಲ್‌ನೊಳಗಿನ ವಿಭಿನ್ನ ಧ್ವನಿಗಳನ್ನು ಸೇರಿಸಲು ನಾವು ಪ್ರಯತ್ನಗಳನ್ನು ಮಾಡಿದ್ದೇವೆ, ಕೌನ್ಸಿಲ್ ಒಟ್ಟಾಗಿ ಬರುತ್ತದೆ ಮತ್ತು ದಿನದ ವಿವಿಧ ವಿಷಯಗಳ ಕುರಿತು ಒಂದೇ ಧ್ವನಿಯಲ್ಲಿ, ಒಮ್ಮತದಲ್ಲಿ ಮಾತನಾಡುತ್ತದೆ. ಇದನ್ನೇ ನಾವು ನಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕಾರ್ಯರೂಪಕ್ಕೆ ತರು‌ತ್ತೇವೆ," ಎಂದು ತಿಳಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
India will take over the Presidency of the UN Security Council on August 1 and is set to host signature events in three major areas of maritime security, peacekeeping and counterterrorism during the month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X