ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ; ಭಾರತದ ಸಾಮರ್ಥ್ಯದ ಬಗ್ಗೆ ಅಮೆರಿಕ ಮೆಚ್ಚುಗೆ ಮಾತು

|
Google Oneindia Kannada News

ವಾಷಿಂಗ್ಟನ್, ಜೂನ್ 04: ಭಾರತದ ಕೊರೊನಾ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಶ್ಲಾಘಿಸಿರುವ ಅಮೆರಿಕ ಸರ್ಕಾರ, ಭಾರತದ ಈ ಸಾಮರ್ಥ್ಯ ವಿಶ್ವದ ಚಿತ್ರಣವನ್ನೇ ಬದಲಿಸಬಲ್ಲಷ್ಟು ಸಮರ್ಥವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಸುಮಾರು ಅರ್ಧ ಶತಕೋಟಿ ಡಾಲರ್‌ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ದೃಢಪಡಿಸಿತು.

ಭಾರತದ ಈ ಸಾಮರ್ಥ್ಯ ಗಡಿಯಾಚೆಗೂ ವೃದ್ಧಿಸಬಲ್ಲದು ಎಂದು ಅಮೆರಿಕ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ನಾವು ಭಾರತದಲ್ಲಿ ಹೆಚ್ಚಿನ ಲಸಿಕೆ ಉತ್ಪಾದನೆಯತ್ತ ಗಮನ ಹರಿಸಿ ಈ ಕುರಿತು ಚರ್ಚಿಸಿದ್ದೇವೆ. ನೆರವು ನೀಡುವ ಉದ್ದೇಶವಾಗಿ ದ್ವಿಪಕ್ಷೀಯ ಬೆಂಬಲ ಘೋಷಿಸಿದ್ದೇವೆ. ಸುಮಾರು 500 ಮಿಲಿಯನ್ ಡಾಲರ್‌ಗಳನ್ನು ವಿನಿಯೋಗಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿ; ಕಮಲ ಹ್ಯಾರಿಸ್ ಜೊತೆ ಮೋದಿ ಮಾತುಕತೆಕೋವಿಡ್ ಪರಿಸ್ಥಿತಿ; ಕಮಲ ಹ್ಯಾರಿಸ್ ಜೊತೆ ಮೋದಿ ಮಾತುಕತೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ಲಸಿಕೆ ಉತ್ಪಾದನೆಯಲ್ಲಿ ಖಾಸಗಿ ವಲಯವನ್ನು ಪ್ರೇರೇಪಿಸುವ ಪ್ರಯತ್ನ ಮುನ್ನಡೆಸಿದ್ದಾರೆ ಎಂದು ತಿಳಿಸಿದರು.

 Indias Corona vaccines Manufacturing Capacity Potential To Be Game changer Says US

ಅಮೆರಿಕ ಸರ್ಕಾರ ಹಾಗೂ ಖಾಸಗಿ ವಲಯದ ಕೊಡುಗೆಗಳ ನಡುವೆ ಅರ್ಧ ಬಿಲಿಯನ್ ಡಾಲರ್‌ಗಳಷ್ಟು ಬೆಂಬಲವು ಭಾರತಕ್ಕೆ ಅಗತ್ಯವಿರುವ ಸಮಯದಲ್ಲಿ ತಲುಪುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಈ ಮಧ್ಯೆ ಅಮೆರಿಕ ತನ್ನ ಜಾಗತಿಕ ಲಸಿಕೆ ಹಂಚಿಕೆ ಪ್ರಯತ್ನದಲ್ಲಿ ಜಾನ್ಸನ್ ಅಂಡ್ ಜಾನ್ಸನ್, ಫೈಜರ್ ಮತ್ತು ಮಾಡರ್ನಾ ಲಸಿಕೆಗಳ ಉತ್ಪಾದನೆಯನ್ನು ಪ್ರೇರೇಪಿಸಲಿದೆ ಎಂದು ಶ್ವೇತಭವನ ತಿಳಿಸಿದೆ. 25 ಮಿಲಿಯನ್ ಲಸಿಕೆಗಳಲ್ಲಿ ಅಂದಾಜು ಏಳು ಮಿಲಿಯನ್ ಲಸಿಕೆ ಪ್ರಮಾಣವನ್ನು ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾದ ದೇಶಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲ ಹ್ಯಾರಿಸ್ ಅವರು ಕೋವಿಡ್ ಪರಿಸ್ಥಿತಿ, ಕೋವಿಡ್ ವಿರುದ್ಧದ ಲಸಿಕೆಯ ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕ ಜಾಗತಿಕ ಲಸಿಕೆ ಹಂಚಿಕೆಯ ಭಾಗವಾಗಿ ಭಾರತಕ್ಕೆ ಕೊರೊನಾ ಸೋಂಕಿನ ವಿರುದ್ಧದ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ನೀಡಿದೆ. ಈ ಭರವಸೆಯನ್ನು ನಾನು ಶ್ಲಾಘಿಸುತ್ತೇನೆ. ಭಾರತ ಮತ್ತು ಅಮೆರಿಕ ನಡುವಿನ ಲಸಿಕೆ ತಯಾರಿಕೆ ಸಹಭಾಗಿತ್ವ ಇದರಿಂದ ಇನ್ನಷ್ಟು ಬಲಗೊಳ್ಳಲಿದೆ ಎಂದು ಮೋದಿ ಹೇಳಿರುವುದಾಗಿ ಪ್ರಧಾನ ಮಂತ್ರಿಗಳ ಕಚೇರಿ ಮಾಹಿತಿ ನೀಡಿತ್ತು.

English summary
United States government asserted that India's manufacturing capacity for COVID-19 vaccines has the potential to be a game-changer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X