ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪಾಕಿಸ್ತಾನಿ ಪತ್ರಕರ್ತರಿಗೆ 'ಸ್ನೇಹ ಹಸ್ತ' ನೀಡಿದ ಭಾರತ ರಾಯಭಾರಿ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 17: ಭಾರತ-ಪಾಕಿಸ್ತಾನಗಳ ನಡುವೆ ಆತಂಕ ಹೆಚ್ಚಾಗುತ್ತಿರುವ ಸಮದಲ್ಲಿಯೇ ಭಾರತದ ರಾಯಭಾರಿ ಪಾಕಿಸ್ತಾನದ ಪತ್ರಕರ್ತರಿಗೆ ಹಸ್ತಲಾಘವ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಿನ್ನೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು, ಪಾಕಿಸ್ತಾನದ ಪತ್ರಕರ್ತರಿಗೆ ವಿಶೇಷವಾಗಿ ಹಸ್ತಲಾಘವ ಮಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ

ಸುದ್ದಿಗೋಷ್ಠಿ ನಡೆವ ಸಂದರ್ಭದಲ್ಲಿ ಹಾಜರಿದ್ದ ಪಾಕಿಸ್ತಾನದ ಪತ್ರಕರ್ತರೊಬ್ಬರು, 'ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ಯಾವಾಗ ಪ್ರಾರಂಭಿಸುತ್ತೀರಿ?' ಎಂದು ಸೈಯದ್ ಅಕ್ಬರುದ್ದೀನ್ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ನಮ್ಮ ಸ್ನೇಹದ ಹಸ್ತ ಸದಾ ತೆರೆದಿರುತ್ತದೆ ಎಂದವರೇ ಹಾಲ್‌ನಲ್ಲಿದ್ದ ಮೂವರು ಪತ್ರಕರ್ತರಿಗೆ ಹಸ್ತಲಾಘವ ಮಾಡಿದ್ದಾರೆ.

India’s Ambassador to UN Syed Akbaruddin hand shaked Pakistani journalists

ಹಸ್ತಲಾಘವ ಮಾಡಿದ ನಂತರ ಮಾತನಾಡಿದ ಅವರು, 'ನಿಮ್ಮೊಂದಿಗೆ ಹಸ್ತಲಾಘವ ಮಾಡುವ ಮೂಲಕ ಮಾತುಕತೆ ಪ್ರಾರಂಭ ಮಾಡಿದ್ದೇವೆ' ಎಂದು ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಮುಂದುವರೆದ ಮಾತನಾಡಿದ ಅಕ್ಬರುದ್ದೀನ್, 'ನಾವು ಶಿಲ್ಮಾ ಒಪ್ಪಂದಕ್ಕೆ ಬದ್ಧರಾಗಿದ್ದೇವೆ ಎನ್ನುವ ಮೂಲಕ ನಾವು ಈಗಾಗಲೇ ಸ್ನೇಹದ ಹಸ್ತ ಮುಂದೆ ಚಾಚಿದ್ದೇವೆ ಪಾಕಿಸ್ತಾನದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.

ಪಾಕಸ್ತಾನದ ಜೊತೆ ಮಾತುಕತೆಗೆ ಭಾರತ ಉತ್ಸಾಹ ತೋರಿಸುತ್ತಿಲ್ಲ ಎಂದ ಮತ್ತೊಬ್ಬ ಪಾಕಿಸ್ತಾನದ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಸೈಯದ್ ಅಕ್ಬರುದ್ದೀನ್, 'ಭಯೋತ್ಪಾದನೆ ನಿಲ್ಲಿಸಿ ಆಮೇಲೆ ಮಾತನಾಡಿ' ಎಂದು ನೇರ ಉತ್ತರ ನೀಡಿದ್ದಾರೆ.

'ಹಲೋ ಡೊನಾಲ್ಡ್ ಟ್ರಂಪ್, ಈ ಕಡೆಯಿಂದ ಇಮ್ರಾನ್ ಖಾನ್...' 'ಹಲೋ ಡೊನಾಲ್ಡ್ ಟ್ರಂಪ್, ಈ ಕಡೆಯಿಂದ ಇಮ್ರಾನ್ ಖಾನ್...'

ಶುಕ್ರವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ರದ್ದು ಮಾಡಿದ ವಿಷಯ ಪ್ರಸ್ತಾಪವಾಗಿದ್ದು, ಚೀನಾ ಮಾತ್ರವೇ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಅಮೆರಿಕ, ರಷ್ಯಾಗಳು 'ಇದು ಭಾರತದ ಆಂತರಿಕ ವಿಷಯ' ಎಂದು ಸನ್ನಿವೇಶದಿಂದ ಹೊರಗೆ ಉಳಿದಿವೆ.

English summary
India’s Ambassador to UN Syed Akbaruddin hand shaked Pakistani journalists when asked,"when will you begin a dialogue with Pakistan?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X