ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಜತೆ ಒಪ್ಪಂದ ಭಾರತಕ್ಕೆ ಕುತ್ತು? ನಿರ್ಬಂಧ ವಿಧಿಸಲಿದೆಯೇ ಅಮೆರಿಕ?

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 6: ತನ್ನ ಆಕ್ಷೇಪಣೆಯ ನಡುವೆಯೂ ಭಾರತವು ರಷ್ಯಾದ ಜತೆಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿರುವುದು ಅಮೆರಿಕದ ಕಣ್ಣು ಕೆಂಪಗಾಗಿಸಿದೆ. ಇತ್ತ ಭಾರತದ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

ಈ ಕೋಪವನ್ನು ತೀರಿಸಿಕೊಳ್ಳಲು ಭಾರತದ ವಿರುದ್ಧ ಅಮೆರಿಕ ಕೆಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ.

2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂದು ಅಮೆರಿಕ ಆರೋಪಿಸಿತ್ತು. ಅದರ ಬೆನ್ನಲ್ಲೇ ರಷ್ಯಾಕ್ಕೆ ಬೆಂಬಲ ನೀಡುವ ಹಾಗೂ ಅದರ ಜತೆಗೆ ವ್ಯವಹಾರ ನಡೆಸುವ ದೇಶಗಳು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನಿರ್ಬಂಧದ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಕೈಗೊಂಡಿತ್ತು.

ರಷ್ಯಾ ಮಾಡಿದ ತಪ್ಪಿಗೆ ತಕ್ಕ ಪ್ರತಿಫಲ ಅನುಭವಿಸಬೇಕು ಎಂಬುದು ಅಮೆರಿಕದ ಗುರಿ. ಹಾಗೆಂದು ಅದಕ್ಕಾಗಿ ತನ್ನ ಮಿತ್ರರಿಗೆ ದಂಡ ವಿಧಿಸುವುದಿಲ್ಲ. ಆದರೆ, ಭಾರತದ ವಿಚಾರದಲ್ಲಿ ವಿನಾಯಿತಿ ನೀಡುವುದು ಕಷ್ಟ.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್

ಏಕೆಂದರೆ, ಅಮೆರಿಕ ತನ್ನ ಬದ್ಧ ವೈರಿ ಎಂದು ಪರಿಗಣಿಸಿರುವ ದೇಶದೊಂದಿಗೆ ಭಾರತ ಐದು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಅದನ್ನು ತನ್ನ ಪ್ರಮುಖ ರಕ್ಷಣಾ ವ್ಯವಹಾರ ಪಾಲುದಾರನನ್ನಾಗಿಸಿಕೊಂಡಿದೆ 'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶ್ಲೇಷಣೆಯೊಂದು ಹೇಳಿದೆ.

ನಿರ್ಬಂಧಕ್ಕೆ ಒಳಗಾಗಲು ಅರ್ಹ!

ನಿರ್ಬಂಧಕ್ಕೆ ಒಳಗಾಗಲು ಅರ್ಹ!

ರಷ್ಯಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕಾರಣ ಅಮೆರಿಕದ ವಿರೋಧಿಗಳ ವಿರುದ್ಧ ವಿಧಿಸುವ ನಿರ್ಬಂಧ ಕಾಯ್ದೆಗೆ (ಸಿಎಎಟಿಎಸ್‌ಎ) ಒಳಪಡಲು ಭಾರತ ಅರ್ಹವಾಗಿದೆ. ಈ ಕಾಯ್ದೆಯು ರಷ್ಯಾ, ಉತ್ತರ ಕೊರಿಯಾ ಅಥವಾ ಇರಾನ್ ಜತೆ ರಕ್ಷಣಾ ಮತ್ತು ಗುಪ್ತಚರ ವಲಯಗಳಲ್ಲಿ ಮಹತ್ವದ ವ್ಯವಹಾರಗಳನ್ನು ನಡೆಸುವ ದೇಶಗಳ ಮೇಲೆ ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ವಿನಾಯ್ತಿ ಸಿಗಲಿದೆಯೇ?

ವಿನಾಯ್ತಿ ಸಿಗಲಿದೆಯೇ?

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ತಮ್ಮ ಮಿತ್ರ ರಾಷ್ಟ್ರ ಎಂದು ಹೇಳಿದ್ದರು. ಈ ನಡುವೆ ರಷ್ಯಾದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದಕ್ಕೆ ವಿನಾಯಿತಿ ನೀಡಲಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಏಕೆಂದರೆ, ತನ್ನ ವಾಯುಪಡೆ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವ ವಿವಿಧ ಸಾಧನಗಳ ಜತೆಗೆ ಯುದ್ಧ ವಿಮಾನಗಳನ್ನು ರಷ್ಯಾದಿಂದ ಖರೀದಿಸಿದ್ದ ಚೀನಾದ ರಕ್ಷಣಾ ವಿಭಾಗದ ಮೇಲೆ ಸೆಪ್ಟೆಂಬರ್‌ನಲ್ಲಷ್ಟೇ ಅಮೆರಿಕ ನಿರ್ಬಂಧಗಳನ್ನು ಜಾರಿಗೊಳಿಸಿತ್ತು.

ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?

ಬಾಂಧವ್ಯದ ಸಂಘರ್ಷ

ಬಾಂಧವ್ಯದ ಸಂಘರ್ಷ

ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ಬಹಳ ನಿಕಟ ನಂಟು ಹೊಂದಿವೆ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಚೀನಾದ ಬೆಳೆಯುತ್ತಿರುವ ಪ್ರಭಾವಳಿಯ ಬಗ್ಗೆ ಉಭಯ ದೇಶಗಳು ಕಳವಳ ಹೊಂದಿವೆ. ಆದರೆ, ರಷ್ಯಾದ ಜತೆ ಕ್ಷಿಪಣಿ ವ್ಯವಸ್ಥೆಯ ಒಪ್ಪಂದವು ಸಂಘರ್ಷದ ಆದ್ಯತೆಯ ಪ್ರಕರಣವಾಗಿದೆ ಎಂದು ಅಮೆರಿಕ ಹೇಳಿತ್ತು.

ಅಮೆರಿಕದ ದೃಷ್ಟಿಕೋನದಿಂದ ಭಾರತದ ಮೇಲೆ ನಿರ್ಬಂಧ ವಿಧಿಸುವುದು ಅಗತ್ಯವಾಗಿದೆ ಮತ್ತು ಅದು ಅಮೆರಿಕದ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ವಿರುದ್ಧದ ಸೂಕ್ತವಾದ ಪ್ರತಿಕ್ರಿಯೆಯಾಗಲಿದೆ. ಅಮೆರಿಕದ ಮಿತ್ರ ದೇಶಗಳು ಅದರ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ರಷ್ಯಾದ ನೆರವು ಮರೆಯುವಂತಿಲ್ಲ

ರಷ್ಯಾದ ನೆರವು ಮರೆಯುವಂತಿಲ್ಲ

ಇದೇ ಸಂದರ್ಭದಲ್ಲಿ, ಅಮೆರಿಕದ ಜತೆಗೆ ಗಟ್ಟಿಯಾದ ಬಾಂಧವ್ಯ ಹೊಂದಿದ್ದರೂ, ಅದಕ್ಕಾಗಿ ರಷ್ಯಾದೊಂದಿಗಿನ ದೀರ್ಘಕಾಲದ ರಕ್ಷಣಾ ವಲಯದ ನಂಟನ್ನು ಬಲಿಕೊಡಲು ಸಾಧ್ಯವಿಲ್ಲ. ಇರಾನ್ ಅಥವಾ ಚೀನಾದಂತಹ ದೇಶಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅದು ಬಯಸುತ್ತದೆ. ಈ ಕಾರಣದಿಂದಾಗಿ ಅಮೆರಿಕದ ಹಿತಾಸಕ್ತಿಗಿಂತ ಭಿನ್ನ ಅಭಿಪ್ರಾಯವನ್ನು ಭಾರತ ಹೊಂದಿರುತ್ತದೆ ಎನ್ನಲಾಗಿದೆ.

ಅಮೆರಿಕ ಮತ್ತು ಭಾರತ ಇತ್ತೀಚೆಗೆ ಹೆಚ್ಚಿನ ಗೆಳೆತನ ಬೆಳೆಸಿಕೊಂಡರೂ, ಭಾರತದ ರಕ್ಷಣಾ ವಲಯದಲ್ಲಿ ರಷ್ಯಾದೊಂದಿನ ಮೈತ್ರಿಗೆ ಸುದೀರ್ಘ ಇತಿಹಾಸವಿದೆ. ಸಂಕಷ್ಟದ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ನೆರವು ನೀಡಿದ ರಷ್ಯಾದೊಂದಿಗಿನ ಸಂಬಂಧವನ್ನು ಭಾರತ ಅಷ್ಟು ಸುಲಭವಾಗಿ ಕಡಿದುಕೊಳ್ಳಲು ಸಾಧ್ಯವಿಲ್ಲ. ಅದರಲ್ಲಿಯೂ 1962ರಲ್ಲಿ ಚೀನಾ-ಭಾರತ ಯುದ್ಧದ ವೇಳೆ ರಷ್ಯಾ ಶಸ್ತ್ರಾಸ್ತ್ರ ನೆರವು ನೀಡದೆ ಇದ್ದರೆ ಭಾರತದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು.

ಅತಿ ಹೆಚ್ಚು ಶಸ್ತ್ರಾಸ್ತ್ರ ಪೂರೈಕೆ

ಅತಿ ಹೆಚ್ಚು ಶಸ್ತ್ರಾಸ್ತ್ರ ಪೂರೈಕೆ

ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶವೆಂದರೆ ರಷ್ಯಾ. ಶೀತಲ ಸಮರ ಆರಂಭವಾದ ಸಂದರ್ಭದಿಂದಲೂ ಉಭಯ ದೇಶಗಳ ಗೆಳೆತನ ಬೆಳೆದುಬಂದಿದೆ. 2013-2017ರ ಅವಧಿಯಲ್ಲಿ ಭಾರತದ ಶೇ 62ರಷ್ಟು ಶಸ್ತ್ರಾಸ್ತ್ರ ಆಮದಾಗಿರುವುದು ರಷ್ಯಾದಿಂದ ಎಂದು ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ತಿಳಿಸಿದೆ.

ಅಮೆರಿಕದ ಜತೆಗೆ ರಕ್ಷಣಾ ವ್ಯವಹಾರ ವೃದ್ಧಿಸಿದ ಬಳಿಕ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಪ್ರಮಾಣ ಕಡಿಮೆಯಾಗಿದೆ. ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಎರಡನೆಯ ಅತಿದೊಡ್ಡ ರಾಷ್ಟ್ರದ ಸಾಲಿನಲ್ಲಿ ಈಗ ಅಮೆರಿಕ ಇದೆ. ದಶಕದ ಹಿಂದೆ ಶೂನ್ಯವಾಗಿದ್ದ ಶಸ್ತ್ರಾಸ್ತ್ರ ಮಾರಾಟ ಪ್ರಮಾಣ, ಈಗ ಶೇ 15ರಷ್ಟು ಇದೆ. ಕಳೆದ ತಿಂಗಳು ಪ್ರಮುಖ ಸೇನಾ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕವು ಭಾರತಕ್ಕೆ ಸಂವಹನ ಸಾಧನಗಳನ್ನು ಒದಗಿಸಲಿದೆ.

ಇರಾನ್ ಒಪ್ಪಂದ ಒತ್ತಡವೂ ಇದೆ

ಇರಾನ್ ಒಪ್ಪಂದ ಒತ್ತಡವೂ ಇದೆ

ರಷ್ಯಾದಿಂದ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದವು ಭಾರತ ಮತ್ತು ಅಮೆರಿಕ ಸಂಬಂಧದ ಸ್ಥಿತಿಸ್ಥಾಪಕತೆಯನ್ನು ಪರೀಕ್ಷೆಗೆ ಒಡ್ಡಿದೆ ಎಂದು ಭಾರತದ ರಕ್ಷಣಾ ತಜ್ಞ ಸಿ. ಉದಯ್ ಭಾಸ್ಕರ್ ಹೇಳಿದ್ದಾರೆ.

ರಷ್ಯಾ ಜತೆಗಿನ ರಕ್ಷಣಾ ವ್ಯವಹಾರ ಮಾತ್ರವಲ್ಲ, ಮುಂದಿನ ತಿಂಗಳಿನಿಂದ ಇರಾನ್ ಮೇಲೆ ಜಾರಿಗೆ ಬರಲಿರುವ ನಿರ್ಬಂಧದ ಕಾರಣ ಅಲ್ಲಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ.

ಭಾರತ ಗುರಿಯಲ್ಲ

ಭಾರತ ಗುರಿಯಲ್ಲ

ಒಂದು ವೇಳೆ ಎಸ್‌-400 ಕ್ಷಿಪಣಿ ವ್ಯವಸ್ಥೆ ಖರೀದಿ ವ್ಯವಹಾರದಲ್ಲಿ ಭಾರತ ಮುಂದುವರಿದರೆ ಏನಾಗಬಹುದು ಎಂಬುದನ್ನು ನಿಖರವಾಗಿ ಹೇಳುವುದು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಅಮೆರಿಕದ ಅಧಿಕಾರಿಗಳು ಹೇಳಿದ್ದರು.

ಅಮೆರಿಕದ ಕಾನೂನಿನ ಜಾರಿಯ ಉದ್ದೇಶ ರಷ್ಯಾದ ಕಪಟ ವರ್ತನೆಗೆ ದಂಡ ವಿಧಿಸುವುದೇ ಹೊರತು, ನಮ್ಮ ಮಿತ್ರ ಅಥವಾ ಪಾಲುದಾರ ದೇಶಗಳ ರಕ್ಷಣಾ ಸಾಮರ್ಥ್ಯಕ್ಕೆ ಹಾನಿ ಮಾಡುವುದಲ್ಲ ಎಂದು ನವದೆಹಲಿಯಲ್ಲಿರುವ ಅಮೆರಿಕದ ಧೂತಾವಾಸದ ಹೇಳಿಕೆ ತಿಳಿಸಿತ್ತು.

ನಿರ್ಬಂಧದಿಂದ ವಿನಾಯಿತಿ ನೀಡಲು ಕಠಿಣವಾದ ನಿಯಮಗಳಿವೆ. ಇದನ್ನು ವ್ಯವಹಾರದಿಂದ ವ್ಯವಹಾರದ ಆಧಾರದಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳಿತ್ತು.

ತಕ್ಷಣ ಜಾರಿಯಾಗದು

ತಕ್ಷಣ ಜಾರಿಯಾಗದು

ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಇನ್ನೂ ಸ್ವಲ್ಪ ಕಾಲಾವಕಾಶವಿದೆ. ನಿರ್ಬಂಧವು ಒಪ್ಪಂದಕ್ಕೆ ಸಹಿಹಾಕಿದ ಕೂಡಲೇ ಆರಂಭವಾಗುವುದಿಲ್ಲ. ಅದು ಕ್ಷಿಪಣಿ ಖರೀದಿಗೆ ಭಾರತ ಹಣ ಪಾವತಿ ಮಾಡಲು ಶುರುಮಾಡಿದಾಗ ಜಾರಿಗೆ ಬರುತ್ತದೆ. ಇಂತಹ ಖರೀದಿಗಳು ಪರಿಣಾಮಕಾರಿಗಾಗಿ ಕಡಿಮೆಯಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರಿಗೆ ಅನಿಸಿದರೆ ನಿರ್ಬಂಧ ವಿಧಿಸುವುದನ್ನು ವಿಳಂಬ ಮಾಡುವ ಅವಕಾಶವಿದೆ. ರಷ್ಯಾದ ಜತೆಗೆ ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಕೂಡ ರಕ್ಷಣಾ ವ್ಯವಹಾರ ನಡೆಸಲಿವೆ. ಹೀಗಾಗಿ ಭಾರತದ ಕುರಿತಾದ ಅಮೆರಿಕದ ಕ್ರಮವನ್ನು ಈ ದೇಶಗಳು ಸೂಕ್ಷ್ಮವಾಗಿ ಗಮನಿಸಲಿವೆ.

English summary
Will US impose CAATSA act sanctions on India for its defence deal with Russia to purchase S-400 Missile? What is the deal? What could be the President Donald Trump's steps? Here is the analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X