ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌-ರಷ್ಯಾ ಯುದ್ಧದ ಬಗ್ಗೆ ಭಾರತದ ಪ್ರತಿಕ್ರಿಯೆ ಅಸ್ಥಿರ: ಜೋ ಬೈಡೆನ್‌

|
Google Oneindia Kannada News

ವಾಷಿಂಗ್ಟನ್‌, ಮಾರ್ಚ್ 22: ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಭಾರತದ ಪ್ರತಿಕ್ರಿಯೆಯು ಅಸ್ಥಿರವಾದುದ್ದು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಸೋಮವಾರ ಹೇಳಿದ್ದಾರೆ. ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತ್ಯಂತ ಕೆಟ್ಟ ಸಂಘರ್ಷಗಳಲ್ಲಿ ಒಂದಾಗಿರುವ ಉಕ್ರೇನ್‌ ರಷ್ಯಾ ಯುದ್ಧದ ಬಗ್ಗೆ ಭಾರತದ ನಿಲುವಿನ ಬಗ್ಗೆ ಈಗಾಗಲೇ ಹಲವಾರು ನಾಯಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಕ್ವಾಡ್‌ ರಾಷ್ಟ್ರಗಳ ಪೈಕಿ ಭಾರತ ಮಾತ್ರ ಉಕ್ರೇನ್‌ ಯುದ್ಧದ ವಿಚಾರದಲ್ಲಿ ಅಸ್ಥಿರವಾಗಿದೆ. ಆದರೆ ಜಪಾನ್ ಅತ್ಯಂತ ಬಲಿಷ್ಠವಾಗಿದೆ. ಆಸ್ಟ್ರೇಲಿಯಾ ಕೂಡ ಬಲಿಷ್ಠವಾಗಿದೆ. ಪುಟಿನ್ ಆಕ್ರಮಣವನ್ನು ಎದುರಿಸುವ ವಿಷಯದಲ್ಲಿ ಜಪಾನ್, ಆಸ್ಟ್ರೇಲಿಯಾ ಬಲಿಷ್ಠವಾಗಿದೆ. ಆದರೆ ಭಾರತ ಪುಟಿನ್ ಆಕ್ರಮಣವನ್ನು ಎದುರಿಸುವ ವಿಷಯದಲ್ಲಿ ದುರ್ಬಲ ಅಥವಾ ಅಸ್ಥಿರವಾಗಿದೆ," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Recommended Video

Russia-Ukraine ಸಂಧಾನ ಯಶಸ್ವಿಯಾದ್ರೂ ರಷ್ಯಾಗೆ ಮತ್ತೆ ತಿರುಗೇಟು ಕೊಟ್ಟ Zelenskyy | Oneindia Kannada

ರಷ್ಯಾ-ಉಕ್ರೇನ್‌ ಯುದ್ಧ: ಪೋಲೆಂಡ್‌ಗೆ ಭೇಟಿ ನೀಡಲಿರುವ ಜೋ ಬೈಡೆ‌ನ್‌ರಷ್ಯಾ-ಉಕ್ರೇನ್‌ ಯುದ್ಧ: ಪೋಲೆಂಡ್‌ಗೆ ಭೇಟಿ ನೀಡಲಿರುವ ಜೋ ಬೈಡೆ‌ನ್‌

ಕ್ವಾಡ್ ಭಾರತ, ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾದ ನಾಲ್ಕು ರಾಷ್ಟ್ರಗಳ ಒಕ್ಕೂಟವಾಗಿದೆ. ಈ ದೇಶಗಳ ಪೈಕಿ ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾದ ಬಗ್ಗೆ ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾ ಒಂದೇ ರೀತಿಯ ನಿಲುವನ್ನು ಹೊಂದಿದೆ. ಈ ದಾಳಿಯನ್ನು ವಿರೋಧ ಮಾಡಿದೆ. ಆದರೆ ಭಾರತ ಮಾತ್ರ ನೇರವಾಗಿ ಈ ದಾಳಿಯನ್ನು ಎಂದಿಗೂ ವಿರೋಧ ಮಾಡಿಲ್ಲ. ಶಾಂತಿ ಮಾತುಕತೆ ನಡೆಸುವ ಬಗ್ಗೆ ಹೇಳಿಕೆಯನ್ನಷ್ಟೇ ನೀಡಿದೆ. ಅಷ್ಟೇ ಅಲ್ಲದೇ ರಷ್ಯಾದ ಜೊತೆ ಆರ್ಥಿಕ ವಹಿವಾಟು ನಡೆಸುತ್ತಿದೆ.

India response to Ukraine war somewhat shaky Says US president Biden

"ಮಾಸ್ಕೋದಿಂದ ತೈಲ ಆಮದು ನಿಷೇಧ ನಿರ್ಧಾರ ಪರಿಗಣಿಸಿ''

ಮಾಸ್ಕೋದಿಂದ ಕಚ್ಚಾ ತೈಲದ ಆಮದನ್ನು ನಿಷೇಧಿಸುವ ದೊಡ್ಡ ಕ್ರಮವನ್ನು ವಾಷಿಂಗ್ಟನ್ ಘೋಷಿಸಿದ ನಂತರ ಮಾಸ್ಕೋದಿಂದ ತೈಲ ಆಮದು ವಿಚಾರದಲ್ಲಿ ಯುಎಸ್‌ ನಿರ್ಧಾರವನ್ನು ಪರಿಗಣಿಸುವಂತೆ ಭಾರತವನ್ನು ಯುಎಸ್‌ ಒತ್ತಾಯ ಮಾಡಿದೆ. ಕಳೆದ ವಾರ, ಬೈಡೆನ್‌ ಈ ವಿಷಯದ ಬಗ್ಗೆ ಭಾರತದೊಂದಿಗೆ ಮಾತನಾಡಲಿದ್ದಾರೆಯೇ ಎಂಬ ಬಗ್ಗೆ ಸುದ್ದಿಗಳು ಆಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, "ನಾವು ಸಹಜವಾಗಿ, ಭಾರತೀಯ ನಾಯಕರೊಂದಿಗೆ ವಿವಿಧ ಹಂತಗಳಲ್ಲಿ ಸಂಪರ್ಕದಲ್ಲಿದ್ದೇವೆ. ಆದರೆ ನಮ್ಮ ದೇಶದ ಅಧ್ಯಕ್ಷರ ಮೂಲಕವಾಗಿ ಭಾರತದೊಂದಿಗೆ ಸಂಪರ್ಕವನ್ನು ನಾವು ಹೊಂದಿಲ್ಲ. ನಾವು ನಿಮಗೆಲ್ಲರಿಗೂ ಆ ಮಾಹಿತಿಯನ್ನು ಒದಗಿಸುತ್ತೇವೆ," ಎಂದು ಹೇಳಿದ್ದಾರೆ.

ಉಕ್ರೇನ್‌ಗೆ 1 ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಸಹಾಯ ಘೋಷಿಸಿದ ಯುಎಸ್‌ಉಕ್ರೇನ್‌ಗೆ 1 ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಸಹಾಯ ಘೋಷಿಸಿದ ಯುಎಸ್‌

ಉಕ್ರೇನ್ ಯುದ್ಧದ ಮಧ್ಯೆ ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾ ಮಾಸ್ಕೋ ವಿರುದ್ಧ ನಿರ್ಬಂಧಗಳನ್ನು ಘೋಷಿಸಿವೆ ಮತ್ತು ನವದೆಹಲಿಯು ಇದೇ ಮಾರ್ಗವನ್ನು ತೆಗೆದುಕೊಳ್ಳುವ ನಿರೀಕ್ಷೆಯನ್ನು ಈ ಕ್ವಾಡ್‌ ರಾಷ್ಟ್ರಗಳು ಹೊಂದಿದೆ. ಕಳೆದ ವಾರ, ಜಪಾನ್‌ನೊಂದಿಗೆ ಜಂಟಿ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, "ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು," ಎಂದು ಕರೆ ನೀಡಿದ್ದರು.

ಕಳೆದ ವಾರ, ಜಪಾನ್‌ನೊಂದಿಗೆ ಜಂಟಿ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು "ತಕ್ಷಣದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ" ಕರೆ ನೀಡಿದ್ದರು. ಇದೇ ರೀತಿಯ ಟೀಕೆಗಳನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿದೆ. ಆದರೆ ಮಾಸ್ಕೋ ವಿರುದ್ಧದ ಮತದಾನದಿಂದ ನವದೆಹಲಿ ದೂರ ಉಳಿದಿದೆ. ಇನ್ನು ಬೈಡೆ‌ನ್‌ ಭಾರತದ ನಿಲುವಿನ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಭಾರತ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇದಕ್ಕೂ ಮೊದಲು, ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯು ಯುದ್ಧ ಪೀಡಿತ ರಾಷ್ಟ್ರದಿಂದ ತನ್ನನ್ನು ಸ್ಥಳಾಂತರ ಮಾಡುವ ಯುಎಸ್‌ನ ಪ್ರಸ್ತಾಪವನ್ನು ನಿರಾಕರಿಸಿದರು. "ನನಗೆ ಮದ್ದುಗುಂಡುಗಳು ಬೇಕು, ಪಲಾಯನ ಅಲ್ಲ," ಎಂದು ಹೇಳುವ ಮೂಲಕ ಜಾಗತಿಕವಾಗಿ ಪ್ರಶಂಸೆಗೆ ಒಳಗಾಗಿದ್ದರು. ಈ ನಡುವೆ ನ್ಯಾಟೋ ಬಗ್ಗೆ ಝೆಲೆನ್ಸ್ಕಿ ಮಾತನಾಡಿದ್ದಾರೆ. ನ್ಯಾಟೋ ನಮ್ಮನ್ನು ಸ್ವೀಕರಿಸುತ್ತಿದೆಯೇ ಎಂದು ಈಗ ಹೇಳಬೇಕು ಅಥವಾ ಅವರು ರಷ್ಯಾದ ಬಗ್ಗೆ ಭಯಪಡುವ ಕಾರಣ ಅವರು ನಮ್ಮನ್ನು ಸ್ವೀಕರಿಸುತ್ತಿಲ್ಲ ಎಂದು ಬಹಿರಂಗವಾಗಿ ಹೇಳಬೇಕು. ಇದು ನಿಜ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
India's response to the Russian invasion of Ukraine has been "somewhat shaky", US president Joe Biden said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X