ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದ ಎಬ್ಬಿಸಿದ ಟ್ರಂಪ್ ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪ

|
Google Oneindia Kannada News

Recommended Video

ಕಾಶ್ಮೀರ ವಿಚಾರದಲ್ಲಿ ನೀವು ಮಧ್ಯೆ ಬರಬೇಡಿ ಎಂದು ಟ್ರಂಪ್ ಗೆ ಎಚ್ಚರಿಕೆ ಕೊಟ್ಟ ಮೋದಿ..? | Oneindia Kannada

ವಾಷಿಂಗ್ಟನ್, ಜುಲೈ 23: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎನ್ನುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಕೂಡ ಮಧ್ಯಸ್ಥಿಕೆಗೆ ಮನವಿ ಮಾಡಿದ್ದರು, ಈಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಈಗ ಇದೇ ವಿಷಯ ಪ್ರಸ್ತಾಪಿಸುತ್ತಿದ್ದಾರೆ.
ಉಭಯ ದೇಶಗಳು ಒಪ್ಪಿಕೊಂಡರೆ ಮಧ್ಯಸ್ಥಿಕೆಗೆ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದು ಟ್ರಂಪ್ ತಿಳಿಸಿದ್ದರು.

ಆದರೆ ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಭಾರತ ಭಾರತವೆಂದಿಗೂ ಇಂತಹ ಪ್ರಸ್ತಾಪವನ್ನು ಮಾಡಿಯೇ ಇಲ್ಲ. ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವನ್ನು ಭಾರತ ಸಹಿಸುವುದಿಲ್ಲ.

 India rejects Trumps mediation statement on Kashmir

ಭಯೋತ್ಪಾದನೆ ನಿಯಂತ್ರಣದ ಬಳಿಕ ದ್ವಿಪಕ್ಷೀಯ ಮಾತುಕತೆಗಳಿಂದ ಮಾತ್ರ ಪರಿಹಾರ ಸೂತ್ರ ಸಾಧ್ಯವಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಅಮೆರಿಕ ಅಧ್ಯಕ್ಷ ವಿವಾದಿತ ಹೇಳಿಕೆ ಬಳಿಕ ಮಧ್ಯರಾತ್ರಿಯೇ ವಿಶೇಷ ಹೇಳಿಕೆ ನೀಡಿದ ವಿದೇಶಾಂಗ ಇಲಾಖೆ ಭಾರತ ಹಾಗೂ ಪಾಕಿಸ್ತಾನ ಮನವಿ ಮಾಡಿಕೊಂಡರೆ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಮಾಧ್ಯಮಗಳಿಗೆ ಟ್ರಂಪ್ ತಿಳಿಸಿದ್ದಾರೆ.

ಕಾಶ್ಮೀರ ಲೂಟಿಕೋರರನ್ನು ಕೊಲೆ ಗೈಯಿರಿ, ಭಯೋತ್ಪಾದಕರಿಗೆ ರಾಜ್ಯಪಾಲರ ಕರೆಕಾಶ್ಮೀರ ಲೂಟಿಕೋರರನ್ನು ಕೊಲೆ ಗೈಯಿರಿ, ಭಯೋತ್ಪಾದಕರಿಗೆ ರಾಜ್ಯಪಾಲರ ಕರೆ

ಆದರೆ ಮೂರನೇ ವ್ಯಕ್ತಿಗಳ ಪ್ರವೇಶ ಅಥವಾ ಮಧ್ಯಸ್ಥಿಕೆ ಕುರಿತಂತೆ ಎಂದಿಗೂ ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಮನವಿ ಮಾಡಿಯೇ ಇಲ್ಲ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದ ಕೇವಲ ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಬಗೆಹರಿಸಬೇಕು ಎನ್ನುವ ಸಿದ್ಧಾಂತಕ್ಕೆ ಭಾರತ ಇಂದಿಗೂ ಬದ್ಧವಾಗಿದೆ. ಹಾಗೆಯೇ ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣವಾಗುವವರೆಗೂ ಮಾತುಕತೆ ಸಾಧ್ಯವೇ ಇಲ್ಲ ಎನ್ನುವುದು ಭಾರತದ ಕಠಿಣ ನಿಲುವಾಗಿದೆ.

ಶಿಮ್ಲಾ ಒಪ್ಪಂದ ಹಾಗೂ ಲಾಹೋರ್ ಒಪ್ಪಂದಕ್ಕೆ ಪಾಕಿಸ್ತಾನ ಬದ್ಧವಾಗಿರಲೇಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗೊಂದಲದ ಹೇಳಿಕೆ ನೀಡಿದ ಟ್ರಂಪ್: ಯಾವುದೇ ವಿಚಾರಕ್ಕೆ ಸಂಬಂಧಿಸಿ ಸುಳ್ಳು ಹೇಳಿಕೆ ಅಥವಾ ಗೊಂದಲ ಸೃಷ್ಟಿಸುವುದರಲ್ಲಿ ಮೊದಲಿನಿಂದಲೂ ಟ್ರಂಪ್ ನಿಷ್ಣಾತರಾಗಿದ್ದಾರೆ.

ಈಗ ಕಾಶ್ಮೀರ ವಿವಾದಕ್ಕೂ ಸಂಬಂಧಿಸಿ ಮಧ್ಯಸ್ಥಿಕೆ ವಹಿಸುವ ಕುರಿತು ಇದೇ ರೀತಿಯ ಗೊಂದಲದ ಹೇಳಿಕೆ ನೀಡಿದ್ದಾರೆ. ಜಪಾನ್ ಒಸಾಕಾ ಶೃಂಗದ ಸಂದರ್ಭದಲ್ಲಿ ಮಧ್ಯಸ್ಥಿಕೆ ಕುರಿತು ಮೋದಿ ಪ್ರಸ್ತಾಪಿಸಿದ್ದಾರೆ ಎಂದು ಮೊದಲು ಹೇಳಿದ್ದರೆ, ಬಳಿಕ ಮೋದಿಯೂ ಮಧ್ಯಸ್ಥಿಕೆ ಬಗ್ಗೆ ಪ್ರಸ್ತಾಪಿಸಿದರೆ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದು ಭಿನ್ನ ಹೇಳಿಕೆ ನೀಡಿದ್ದಾರೆ. ಟ್ರಂಪನ್ನು ಇಮ್ರಾನ್ ಖಾನ್ ಭೇಟಿಯಾದ ಬಳಿಕ ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕದ ನೆರವಿಗಾಗಿ ಗೋಗರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿಚಾರದ ಸಾಕಷ್ಟು ವರ್ಷಗಳಿಂದ ಹಾಗೆ ಉಳಿದಿದೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಗೆ ನಾನು ಸಿದ್ಧವಾಗಿದ್ದು ಖುಷಿಯಿಂದ ಈ ಕೆಲಸ ಮಾಡಲು ಬಯಸುತ್ತೇನೆ .

ಜಪಾನ್ ಜಿ 20 ಶೃಂಗದ ಸಂದರ್ಭದಲ್ಲಿ ಭಾರತ ಪ್ರಧಾನಿ ಮೋದಿ ಕೂಡ ಮಧ್ಯಸ್ಥಿಕೆಗೆ ಮನವಿ ಮಾಡಿದ್ದರು.ಕಾಶ್ಮೀರ ವಿವಾದ ಬಗೆಹರಿಸುವಂತೆ ತಿಳಿಸಿದ್ದರು.ಈಗ ಇಮ್ರಾನ್ ಖಾನ್ ಕೂಡ ಮನವಿ ಮಾಡಿದ್ದಾರೆ ಎಂದು ಟ್ರಂಪ್ ಆರಂಭಿಕ ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಟ್ರಂಪ್ ಇಂತಹ ವಿಷಯಗಳಿಗೆ ಬಹುಬೇಗನೆ ಪರಿಹಾರ ಕಂಡುಕೊಳ್ಳಬೇಕು ಹೀಗಾಗಿ ಮಧ್ಯಸ್ಥಿಕೆಗಾಗಿ ಮೋದಿಯೂ ನನಗೆ ಮನವಿ ಮಾಡಬೇಕು.

ಭವಿಷ್ಯದಲ್ಲಿ ಈ ಕುರಿತು ನಾವು ಮಾತನಾಡಬಹುದು ಅಥವಾ ನಾನೇ ಮೋದಿ ಬಳಿ ಪ್ರಸ್ತಾಪಿಸಲೂ ಬಹುದು. ಭಾರತದೊಂದಿಗೆ ಅಮೆರಿಕ ಅತ್ಯತ್ತಮ ಸಂಬಂಧ ಹೊಂದಿದ್ದು ಈ ಕುರಿತು ಮಾತನಾಡಲು ಅಮೆರಿಕ ಸಿದ್ಧವಿದೆ ಎಂದು ಟ್ರಂಪ್ ಗೊಂದಲದ ಹೇಳಿಕೆ ನೀಡಿದ್ದಾರೆ.

English summary
India rejects the statement over kashmir mediation by US president Donald Trump. And India clarifies that through Bilateral talk only we want to resolve the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X