ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷ ಜ.1ರಂದು ಭಾರತದಲ್ಲೇ ಅತಿ ಹೆಚ್ಚು ಶಿಶು ಜನನ

|
Google Oneindia Kannada News

ವಾಷಿಂಗ್ಟನ್, ಜನವರಿ 05: 2021ರ ಹೊಸ ವರ್ಷದಂದು ವಿಶ್ವದಲ್ಲಿ ಒಟ್ಟು 3,71,500 ಶಿಶುಗಳು ಜನಿಸಿದ್ದು, ಭಾರತ ಅತಿ ಹೆಚ್ಚಿನ ಜನನ ಸಂಖ್ಯೆ ದಾಖಲಿಸಿದೆ. ಯುನಿಸೆಫ್ ನೀಡಿರುವ ಮಾಹಿತಿಯಂತೆ ಭಾರತದಲ್ಲಿ 2021ರ ಜನವರಿ 01ರಂದು 60,000 ಶಿಶುಗಳು ಜನಿಸಿವೆ.

ಪೆಸಿಫಿಕ್ ನ ಫಿಜಿಯಲ್ಲಿ ಹೊಸ ವರ್ಷದಂದು ಮೊದಲ ಮಗು ಜನಿಸಿದ್ದು, ಅಮೆರಿಕದಲ್ಲಿ ಕೊನೆ ಜನನ ದಾಖಲಾಗಿದೆ.

ಹೊಸ ವರ್ಷದಂದು ಭಾರತದಲ್ಲಿ 60,000 ಶಿಶುಗಳ ಜನನ; ಯುನಿಸೆಫ್ಹೊಸ ವರ್ಷದಂದು ಭಾರತದಲ್ಲಿ 60,000 ಶಿಶುಗಳ ಜನನ; ಯುನಿಸೆಫ್

ವಿಶ್ವದಲ್ಲಿ ಇದೇ ಜನವರಿ 1ರಂದು ಹತ್ತು ರಾಷ್ಟ್ರಗಳಲ್ಲಿ ಅಧಿಕ ಶಿಶುಗಳು ಜನಿಸಿವೆ. ಭಾರತದಲ್ಲಿ 59,995, ಚೀನಾದಲ್ಲಿ 35,615, ನೈಜೀರಿಯಾ 21,439, ಪಾಕಿಸ್ತಾನ 14,161, ಇಂಡೋನೇಷಿಯಾ 12,336, ಇಥಿಯೋಪಿಯಾ 12,006, ಅಮೆರಿಕ 10,312, ಈಜಿಪ್ಟ್ 9455, ಬಾಂಗ್ಲಾ 9236 ಹಾಗೂ ಕಾಂಗೋದಲ್ಲಿ 8640 ಶಿಶುಗಳು ಜನಿಸಿರುವುದಾಗಿ ಯುನಿಸೆಫ್ ಮಾಹಿತಿ ನೀಡಿದೆ.

India Records Hightest Number Of Births On New Year Said Unicef

2021ನೇ ವರ್ಷದಲ್ಲಿ 14 ಮಿಲಿಯನ್ ಶಿಶುಗಳು ಜನಿಸಬಹುದು ಹಾಗೂ ಆ ಮಕ್ಕಳ ಜೀವಿತಾವಧಿಯು 84 ವರ್ಷವಾಗುತ್ತದೆ ಎಂದು ಅಂದಾಜಿಸಲಾಗಿತ್ತು.

"ಈ ವರ್ಷ ಜನಿಸಿರುವ ಮಕ್ಕಳು ವಿಭಿನ್ನ ಜಗತ್ತನ್ನು ನೋಡಲಿದ್ದಾರೆ. ಈ ಮಕ್ಕಳಿಗಾಗಿ ನಾವು ಜಗತ್ತನ್ನು ಹೆಚ್ಚು ಸುರಕ್ಷಿತಗೊಳಿಸಬೇಕಿದೆ" ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಪೋರ್ ತಿಳಿಸಿದ್ದಾರೆ.

ಇದೇ ವರ್ಷ ಯುನಿಸೆಫ್ ಕೂಡ ತನ್ನ 75ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಇಷ್ಟೂ ವರ್ಷಗಳಲ್ಲಿ ಯುನಿಸೆಫ್ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದೆ. ವಿಶ್ವದ ತುರ್ತು ಪರಿಸ್ಥಿತಿಗಳಲ್ಲಿ, ಪ್ರಾಕೃತಿಕ ವಿಕೋಪಗಳಲ್ಲಿ ಮಕ್ಕಳ ರಕ್ಷಣೆಗೆ ನಿಂತಿದೆ. ಈ ಹೊಸ ವರ್ಷದಲ್ಲಿ ಮಕ್ಕಳ ಸುರಕ್ಷತೆಗೆ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಯುನಿಸೆಫ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

English summary
India records highest number of babies born on New Year's Day nearly 60,000 said UNICEF,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X