ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿನ ಮಳೆ, ಪ್ರವಾಹದ ಬಗ್ಗೆ ನಾಸಾ ಹೇಳಿದ್ದೇನು?

|
Google Oneindia Kannada News

Recommended Video

ಭಾರತದಲ್ಲಿನ ಮಳೆ, ಪ್ರವಾಹದ ಬಗ್ಗೆ ನಾಸಾ ಹೇಳಿದ್ದೇನು? | Oneindia Kannada

ವಾಷಿಂಗ್ಟನ್, ಆಗಸ್ಟ್ 21: ಆಗಸ್ಟ್ ತಿಂಗಳ ಮೊದಲ ಎರಡು ವಾರಗಳಲ್ಲಿ ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ವಿಪರೀತ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂಬುದನ್ನು ನಾಸಾ ಮೊದಲೇ ತಿಳಿಸಿತ್ತು. ಸ್ಯಾಟಲೈಟ್ ಚಿತ್ರಗಳ ಆಧಾರದಲ್ಲಿ ಮಳೆಯ ಕುರಿತು ಮಾಹಿತಿ ನೀಡಿದ್ದ ನಾಸಾ, ಆಗಸ್ಟ್‌ನ ಕೆಲವು ವಾರಗಳಲ್ಲಿ ಮಯನ್ಮಾರ್, ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಭಾರಿ ಮಳೆಯಾಗಲಿದ್ದು, ಅನಾಹುತಕಾರಿ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಲಿವೆ ಎಂದು ನಾಸಾ ವರದಿ ಹೇಳಿತ್ತು.

ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮಳೆ ನದಿಗಳು ಹಾಗೂ ಝರಿಗಳು ಉಕ್ಕಿಹರಿಯಲು ಕಾರಣಾಗುತ್ತವೆ. ವಿವಿಧ ಪ್ರದೇಶಗಳಲ್ಲಿನ ಬೆಟ್ಟಗುಡ್ಡಗಳು ಕುಸಿಯುವ ಅಪಾಯವಿದೆ ಎಂದು ತಿಳಿಸಿತ್ತು.

ಕಚೇರಿ ಬಿಡುವ ಸಮಯ ನೋಡಿ ಬರುವನು ಮಳೆರಾಯ : ಬೆಂಗಳೂರಲ್ಲಿ 2 ದಿನ ಭಾರಿ ಮಳೆ ಕಚೇರಿ ಬಿಡುವ ಸಮಯ ನೋಡಿ ಬರುವನು ಮಳೆರಾಯ : ಬೆಂಗಳೂರಲ್ಲಿ 2 ದಿನ ಭಾರಿ ಮಳೆ

ದಕ್ಷಿಣ ಏಷ್ಯಾದಲ್ಲಿ ವಾರ್ಷಿಕ ಮುಂಗಾರು ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಉದಾಹರಣೆಗೆ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಶೇ 70ರಷ್ಟು ಮಳೆ ಮುಂಗಾರು ಅವಧಿಯಲ್ಲಿಯೇ ಬರುತ್ತದೆ. ಶುದ್ಧ ನೀರಿನ ಪೂರೈಕೆ ಮತ್ತು ಬೆಳೆಗಳಿಗೆ ನೀರು ಹರಿಸಲು ಈ ಕಾಲಾವಧಿಯಲ್ಲಿನ ಮಳೆ ಅತ್ಯಂತ ಮುಖ್ಯವಾಗಿರುತ್ತದೆ. ಆದರೆ, ದೇಶದ ಶೇ 15ರಷ್ಟು ಭಾಗವು ಪ್ರವಾಹದ ಸ್ಥಿತಿ ಎದುರಿಸುತ್ತದೆ. ಅಲ್ಲದೆ, ಮುಂಗಾರು ಅವಧಿಯು ಪ್ರತಿ ವರ್ಷ ಸಾವಿರಾರು ಮಂದಿಯ ಸಾವಿಗೂ ಕಾರಣವಾಗುತ್ತಿದೆ ಎಂದು ನಾಸಾ ವಿಶ್ಲೇಷಿಸಿದೆ.

India Monsoon Rain Floods Analysis By Nasa

ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಪ್ರವಾಹದಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿತ್ತು. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ನೆಲೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಪ್ರವಾಹದ ನೀರು ರಸ್ತೆಗಳಿಗೆ ಮತ್ತು ರೈಲು ಮಾರ್ಗಗಳಿಗೆ ಹಾನಿ ಮಾಡಿದೆ. ಜತೆಗೆ ಸಾವಿರಾರು ಎಕರೆ ಕೃಷಿ ಬೆಳೆಗಳನ್ನು ನಾಶಪಡಿಸಿದೆ.

ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್

ಆಗಸ್ಟ್ 7-14ರ ಒಂದು ವಾರದಲ್ಲಿ ಸರಾಸರಿ ಮಳೆಗಿಂತ ಶೇ 45ರಷ್ಟು ಹೆಚ್ಚು ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ ಜೂನ್ 1ರಿಂದ ಪರಿಗಣನೆಗೆ ತೆಗೆದುಕೊಂಡಂತೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಕಳೆದ 50 ವರ್ಷಗಳಲ್ಲಿ ಕೇವಲ ಶೇ 1ರಷ್ಟು ಮಾತ್ರ ಹೆಚ್ಚು ಮಳೆಯಾಗಿದೆ.

English summary
An analysis of South Asia including flood situation in India from Nasa. It was predicted heavy rain, floods and landslides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X