ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಅತಿ ಹೆಚ್ಚು ತೆರಿಗೆ ಹಾಕುತ್ತಿದೆ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 03: ಅಮೆರಿಕದ ಉತ್ಪನ್ನಗಳಿಗೆ ಅತ್ಯಧಿಕ ತೆರಿಗೆ ವಿಧಿಸುವ ದೇಶವಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಪ್ರತಿ ತೆರಿಗೆ Reciprocal Tax ವಿಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ಅಮೆರಿಕ ನಿರ್ಮಿತ ವಾಹನಗಳಿಗೆ ಭಾರತದಲ್ಲಿ ಸುಂಕ ವಿಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೆರಿಲ್ಯಾಂಡ್ ನಲ್ಲಿ ನಡೆದ ಕನ್ಸರ್ವೇಟಿವ್ ಪಾಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪ್ಯಾಕ್)ನಲ್ಲಿ ಭಾಷಣ ಮಾಡಿದ ವೇಳೆ ಭಾರತದ ತೆರಿಗೆ ನೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್ ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

'ನಮ್ಮಲ್ಲಿ ಉತ್ಪಾದನೆಯಾದ ಮೋಟಾರು ವಾಹನಗಳನ್ನು ಭಾರತಕ್ಕೆ ರಫ್ತು ಮಾಡಿದರೆ, ಶೇ. 100ರಷ್ಟು ಸುಂಕ ವಿಧಿಸುತ್ತದೆ. ಆದರೆ, ಅಮೆರಿಕಕ್ಕೆ ಆಮದಾಗುವ ಭಾರತದ ವಾಹನಗಳಿಗೆ ಸುಂಕವನ್ನೇ ವಿಧಿಸುವುದಿಲ್ಲ. ಹೀಗಾಗಿ, ಬದಲಿ ಸುಂಕ ವಿಧಿಸಲು ಅಮೆರಿಕ ನಿರ್ಧರಿಸಿದೆ. ಕನಿಷ್ಠ ಪಕ್ಷ ತೆರಿಗೆಯನ್ನಾದರೂ ವಿಧಿಸಲಾಗುವುದ' ಎಂದು ಹೇಳಿದರು.

India a high-tariff nation, says US President Donald Trump

800 ಸಿಸಿ ಸಾಮರ್ಥ್ಯದ ತನಕದ ಬೈಕುಗಳ ಆಮದು ಮೇಲಿನ ಸುಂಕವನ್ನು ಶೇ 60ರಷ್ಟು ಹಾಗೂ 800 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯಗಳ ಐಕಿಗಳ ಮೇಲೆ ಶೇ 75ರಷ್ಟು ಸುಂಕ ವಿಧಿಸಲಾಗಿತ್ತು. ಆದರೆ, ಎಲ್ಲಾ ಬಗೆಯ ಬೈಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ 50ರಷ್ಟು ತಗ್ಗಿಸಲಾಗಿದೆ ಎಂದು ಸಿಬಿಇಸಿ ಆದೇಶಿಸಿದೆ.

ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಬೆಲೆಯ ದ್ವಿಚಕ್ರವಾಹನಗಳ ಮೇಲೆ ಅಬಕಾರಿ ಸುಂಕವನ್ನು ಶೇ50ರಷ್ಟು ಕೇಂದ್ರ ಸರ್ಕಾರ ತಗ್ಗಿಸಿದೆ. ಆದರೆ, ಇದರಿಂದ ಟ್ರಂಪ್ ಅವರು ಖುಷಿಯಾಗಿಲ್ಲ. ಪರೋಕ್ಷ ತೆರಿಗೆ ವಿಧಿಸಬಹುದಾಗಿತ್ತು ಎಂದು ಟ್ರಂಪ್ ಹೇಳಿದ್ದರು.

English summary
India is a very high-tariff nation, US President Donald Trump alleged on Saturday, stating that he wants a reciprocal tax or at least some kind of tax."India is a very high-tariff nation. They charge us a lot," Trump said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X