ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಹಿಂಸಾಚಾರದ ಸ್ವತಂತ್ರ ತನಿಖೆ, ಟ್ರಂಪ್ ಬೆನ್ನೇರಿದನಾ ಶನಿ?

|
Google Oneindia Kannada News

ಟ್ರಂಪ್‌ಗೆ 'ಏಳರಾಟ ಶನಿ ಕಾಟ' ಶುರುವಾದಂತೆ ಕಾಣಿಸುತ್ತಿದೆ. ಏಕೆಂದರೆ ನಿರಂತರವಾಗಿ ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಕೆಲ ದಿನಗಳ ಹಿಂದಷ್ಟೇ ವಾಗ್ದಂಡನೆ ದೊಣ್ಣೆ ಏಟಿನಿಂದ ಬಚಾವ್ ಆಗಿದ್ದ ಟ್ರಂಪ್ ವಿರುದ್ಧ ನ್ಯಾನ್ಸಿ ಪೆಲೋಸಿ ಗುಡುಗಿದ್ದಾರೆ. 2021 ಜನವರಿ 6ರ ಗಲಭೆಯ ಬಗ್ಗೆ ಸ್ವತಂತ್ರ ಆಯೋಗದಿಂದ ತನಿಖೆ ನಡೆಸುವುದಾಗಿ ಪೆಲೋಸಿ ಹೇಳಿದ್ದಾರೆ.

ಖುದ್ದು ಕಾಂಗ್ರೆಸ್ ಸದಸ್ಯರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಯಲ್ಲಿ ಅಮೆರಿಕ ಸಂಸತ್‌ನ ಕೆಳಮನೆ ಕ್ರಮಕ್ಕೆ ಆಗ್ರಹಿಸಿತ್ತು. ವಾಗ್ದಂಡನೆ ಪ್ರಕ್ರಿಯೆಗೆ ಅನುಮೋದನೆ ನೀಡಿತ್ತು. ಆದರೆ ಮೆಲ್ಮನೆ ಸೆನೆಟ್‌ನಲ್ಲಿ ಟ್ರಂಪ್‌ಗೆ ರಿಲೀಫ್ ಸಿಕ್ಕಿತ್ತು.

ಟ್ರಂಪ್‌ಗೆ ಇನ್ನೂ ಸಿಕ್ಕಿಲ್ಲ ರಿಲೀಫ್, ಮುಂದೆ ಕಾದಿದೆಯಾ ಮಾರಿ ಹಬ್ಬ..? ಟ್ರಂಪ್‌ಗೆ ಇನ್ನೂ ಸಿಕ್ಕಿಲ್ಲ ರಿಲೀಫ್, ಮುಂದೆ ಕಾದಿದೆಯಾ ಮಾರಿ ಹಬ್ಬ..?

ಆದರೂ ಟ್ರಂಪ್ ವಿರುದ್ಧ ಹಠಕ್ಕೆ ಬಿದ್ದಿರುವ ನ್ಯಾನ್ಸಿ ಪೆಲೋಸಿ & ಟೀಂ ಜನವರಿ 6ರ ಗಲಭೆ ಬಗ್ಗೆ ಸ್ವತಂತ್ರ ಆಯೋಗದಿಂದ ತನಿಖೆ ನಡೆಸಲು ನಿರ್ಣಯ ಕೈಗೊಂಡಿದೆ. 9/11ರ ಉಗ್ರದಾಳಿ ಮಾದರಿಯಲ್ಲೇ 'ಕ್ಯಾಪಿಟಲ್ ಹಿಲ್' ಮೇಲಿನ ಹಿಂಸಾಚಾರದ ಬಗ್ಗೆಯೂ ತನಿಖೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ ಅಮೆರಿಕದ ಸಂಸದರು.

ವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿ ವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ತನಿಖೆ ನಡೆಸಲು ಅನುದಾನ ಕೊಡಿ

ತನಿಖೆ ನಡೆಸಲು ಅನುದಾನ ಕೊಡಿ

ಅಮೆರಿಕ ಕಾಂಗ್ರೆಸ್ ನಿರ್ಣಯದಂತೆ ಕ್ಯಾಪಿಟಲ್ ಹಿಲ್ ಹಿಂಸಾಚಾರದ ತನಿಖೆಗಾಗಿ ಅನುದಾನದ ಅಗತ್ಯತೆ ಇದೆ. ಹೀಗಾಗಿ ತನಿಖಾ ಆಯೋಗಕ್ಕೆ ಅಗತ್ಯವಿರುವಷ್ಟು ಹಣವನ್ನು ಬಿಡುಗಡೆ ಮಾಡಿ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಮನವಿ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷ ಅಮೆರಿಕ ಸಂಸತ್‌ನ ಕೆಳಮನೆಯಾದ ಕಾಂಗ್ರೆಸ್‌ನಲ್ಲಿ ಬಹುಮತ ಹೊಂದಿದೆ. ಆದರೆ ಸೆನೆಟ್‌ನಲ್ಲಿ ಬಹುಮತದ ಕೊರತೆ ಇದೆ. ಹೀಗಾಗಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಮೆರಿಕನ್ ಕಾಂಗ್ರೆಸ್ ಸದಸ್ಯರ ಮೂಲಕ ಟ್ರಂಪ್ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದು ಟ್ರಂಪ್‌ಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.

ಎಲ್ಲೋ ಹೋದ್ರು ಅವರೆಲ್ಲಾ..?

ಎಲ್ಲೋ ಹೋದ್ರು ಅವರೆಲ್ಲಾ..?

ಬೈಡನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಅಮೆರಿಕ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕ್ಯಾಪಿಟಲ್ ಹಿಲ್ ಗಲಭೆಕೋರರ ಹೆಡೆಮುರಿ ಕಟ್ಟಲು ಖೆಡ್ಡಾ ತೋಡಿದ್ದಾರೆ. ಹೀಗೆ ಎಲ್ಲೆಲ್ಲಿ ಹಿಂಸಾಚಾರ ನಡೆಸಿದ್ದವರು ಅಡಗಿದ್ದಾರೆ ಎಂಬುದನ್ನ ಹುಡುಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಕಿರಾತಕರು, ತಮ್ಮ ಮೊಬೈಲ್‌ಗಳನ್ನು ನಾಶ ಮಾಡುವ ಜೊತೆಗೆ ಸೋಷಿಯಲ್ ಮೀಡಿಯಾಗಳಿಂದ ಓಡಿ ಬಂದಿದ್ದಾರೆ. ಆ ದಿನ ಅಂದರೆ ಜನವರಿ 6ರಂದು ಹಿಂಸೆ ನಡೆಯುವಾಗ ಹಾಕಿದ್ದ ಪ್ರಚೋದನಕಾರಿ ಪೋಸ್ಟ್‌ಗಳನ್ನ ಕೂಡ ಸದ್ಯ ಡಿಲೀಟ್ ಮಾಡಿ ಬಿಸಾಕಿದ್ದಾರೆ. ಹೀಗಾಗಿ ಹಿಂಸೆ ನಡೆಸಿದ್ದ ಹಲವರು ಎಲ್ಲೋದರು ಅನ್ನೋದೇ ಗೊತ್ತಾಗುತ್ತಿಲ್ಲ.

230 ಜನರಿಗೆ ಜೈಲೂಟ..!

230 ಜನರಿಗೆ ಜೈಲೂಟ..!

ಈವರೆಗೂ ಅಮೆರಿಕದ ತನಿಖಾ ಸಂಸ್ಥೆಗಳು 230 ಜನರ ವಿರುದ್ಧ ಪ್ರಕರಣ ದಾಖಲಿಸಿವೆ. ಕ್ಯಾಪಿಟಲ್ ಹಿಲ್ ಅಟ್ಯಾಕ್ ಸಂಬಂಧ ಇವರನ್ನೆಲ್ಲಾ ಬಂಧಿಸಲಾಗಿದೆ. ಸಂಸತ್ ಭವನಕ್ಕೆ ನುಗ್ಗಿ ಹುಚ್ಚರಂತೆ ವರ್ತಿಸಿದ್ದೂ ಅಲ್ಲದೆ ಹಿಂಸೆ ನಡೆಸಿದ್ದರಂತೆ ಇವರು. ಇದನ್ನೆಲ್ಲಾ ತೀರಾ ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕದ ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಟ್ರಂಪ್ ಮತ್ತು ಟ್ರಂಪ್ ಗ್ಯಾಂಗ್ ವಿರುದ್ಧ ತಿರುಗಿಬಿದ್ದರು. ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದ್ದು, ಅವರಿಗಾಗಿ ಇಂಚಿಂಚು ಜಾಗವನ್ನೂ ತನಿಖಾಧಿಕಾರಿಗಳು ಬೆದಕುತ್ತಿದ್ದಾರೆ.

ಶಾಸಕರು ಕೂಡ ಅರೆಸ್ಟ್..!

ಶಾಸಕರು ಕೂಡ ಅರೆಸ್ಟ್..!

ಉನ್ನತ ಸ್ಥಾನದಲ್ಲಿದ್ದು ಜನತೆಗೆ ಒಳ್ಳೆಯದನ್ನೇ ಬಯಸಬೇಕಿದ್ದ ಕೆಲ ಶಾಸಕರು ಟ್ರಂಪ್ ಮಾತಿಗೆ ಮರುಳಾಗಿ, ಜನವರಿ 6ರಂದು ಹಿಂಸೆಗೆ ಪ್ರಚೋದನೆ ನೀಡಿದ್ದರು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರಂತೆ. ಇದೇ ಕಾರಣಕ್ಕೆ ಹಲವು ಶಾಸಕರು ಈಗಾಗಲೇ ಕಂಬಿ ಹಿಂದೆ ಬಿದ್ದಿದ್ದಾರೆ. ಇನ್ನಷ್ಟು ಶಾಸಕರಿಗೆ ಬಲೆ ಬೀಸಲಾಗಿದೆ. ಇದು ಅಮೆರಿಕದ ಇತಿಹಾಸವೇ ಮುಜುಗರ ಪಡುವಂತಹ ಘಟನೆಯಾಗಿದ್ದು, ಕಾನೂನು ರಚಿಸಿ ಸಮಾಜ ರಕ್ಷಿಸಬೇಕಿದ್ದ ಶಾಕಸರು ಕೂಡ ಅಶಾಂತಿ ಸೃಷ್ಟಿಸಿದ್ದು ವಿಪರ್ಯಾಸವಾಗಿದೆ. ಈ ವಿಚಾರದಲ್ಲಿ ಅಮೆರಿಕ ಈಗಾಗಲೇ ಜಗತ್ತಿನ ಮುಂದೆ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

English summary
US House Speaker Nancy Pelosi informed that, House Democrats plans for the creation of independent commission to investigate attack on the ‘Capitol Hill’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X