ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ!

|
Google Oneindia Kannada News

ವಾಷಿಂಗ್ಟನ್, ಮೇ 5: ಮಾರಣಾಂತಿಕ ಕೊರೊನಾ ವೈರಸ್ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿಶ್ವದಾದ್ಯಂತ ಇಲ್ಲಿಯವರೆಗೂ 36,45,539 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ನಿಂದಾಗಿ ಈವರೆಗೂ 2,52,396 ಜನರು ಜೀವ ಕಳೆದುಕೊಂಡಿದ್ದಾರೆ.

ಕೊರೊನಾ ವೈರಸ್ ನಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಕ್ಷರಶಃ ಜರ್ಜರಿತಗೊಂಡಿದೆ. ಯು.ಎಸ್.ಎ ಒಂದರಲ್ಲೇ 12,12,835 ಮಂದಿ ಸೋಂಕಿತರಿದ್ದಾರೆ. 69,921 ಜನ ಈಗಾಗಲೇ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲೇ ಸಾಗುತ್ತಿರುವ ಅಮೇರಿಕಾದಲ್ಲಿ ಕೊರೊನಾ ಕಂಟಕ ಇನ್ನೂ 18-24 ತಿಂಗಳು ತಪ್ಪುವುದಿಲ್ಲ ಎಂಬ ಆಘಾತಕಾರಿ ಅಂಶ ಅಧ್ಯಯನವೊಂದರಿಂದ ಬಹಿರಂಗವಾಗಿದೆ.

ಆಘಾತಕಾರಿ ಅಂಶ

ಆಘಾತಕಾರಿ ಅಂಶ

ಮಿನೆಸೋಟಾದ ಸೆಂಟರ್ ಫಾರ್ ಇನ್ಫೆಕ್ಷಿಯಸ್ ಡಿಸೀಸ್ ರಿಸರ್ಚ್ ಅಂಡ್ ಪಾಲಿಸಿ ಕೈಗೊಂಡ ಅಧ್ಯಯನದಲ್ಲಿ, ''ಮುಂದಿನ 18-24 ತಿಂಗಳವರೆಗೆ ಕೊರೊನಾ ವೈರಸ್ ಇದ್ದೇ ಇರುತ್ತದೆ. ಈ ಹಂತದಲ್ಲಿ ಯು.ಎಸ್.ಎ ಜನಸಂಖ್ಯೆಯ 5%-15% ರಷ್ಟು ಜನರು ಸೋಂಕಿಗೆ ಒಳಗಾಗಲಿದ್ದಾರೆ'' ಎಂದು ತಿಳಿದುಬಂದಿದೆ.

ಅನಾಹುತದ ಮುನ್ಸೂಚನೆ

ಅನಾಹುತದ ಮುನ್ಸೂಚನೆ

''ದಿ ಫ್ಯೂಚರ್ ಆಫ್ ದಿ ಕೋವಿಡ್-19 ಪ್ಯಾಂಡೆಮಿಕ್: ಲೆಸೆನ್ಸ್ ಲರ್ನ್ಡ್ ಫ್ರಮ್ ಫ್ಯಾಂಡೆಮಿಕ್ ಇನ್ಫ್ಯುಯೆನ್ಝಾ'' ಎಂಬ ಶೀರ್ಷಿಕೆ ಅಡಿ ವರದಿ ಸಲ್ಲಿಸಿರುವ ಸಂಶೋಧಕರು, ಮುಂದಿನ ಎರಡು ವರ್ಷಗಳಲ್ಲಿ ಕೊರೊನಾ ವೈರಸ್ ನಿಂದ ಅಮೇರಿಕಾದಲ್ಲಿ ಆಗುವ ಅನಾಹುತದ ಮುನ್ಸೂಚನೆ ನೀಡಿದ್ದಾರೆ.

2020ರ ಅಂತ್ಯದೊಳಗೆ ಕೊರೊನಾ ಔಷಧ ನಮ್ಮ ಕೈಸೇರಲಿದೆ: ಟ್ರಂಪ್ ವಿಶ್ವಾಸ2020ರ ಅಂತ್ಯದೊಳಗೆ ಕೊರೊನಾ ಔಷಧ ನಮ್ಮ ಕೈಸೇರಲಿದೆ: ಟ್ರಂಪ್ ವಿಶ್ವಾಸ

ಲಸಿಕೆ ಸಿಗಲಿಲ್ಲ ಅಂದ್ರೆ...

ಲಸಿಕೆ ಸಿಗಲಿಲ್ಲ ಅಂದ್ರೆ...

ಒಂದು ವೇಳೆ ಲಸಿಕೆ ಸಿಗಲಿಲ್ಲ ಅಂದರೆ, ದುರಂತ ಸನ್ನಿವೇಶಕ್ಕೆ ಆರೋಗ್ಯ ಅಧಿಕಾರಿಗಳು ಸಿದ್ಧತೆ ನಡೆಸಬೇಕು. ಸೋಂಕಿತರ ಸಂಖ್ಯೆ ಹೆಚ್ಚಾದಾಗ ಆರೋಗ್ಯ ಕಾರ್ಯಕರ್ತರಿಗೆ ಸಾಕಷ್ಟು ರಕ್ಷಣೆ ನೀಡುವಂತೆ ಸರ್ಕಾರಿ ಸಂಸ್ಥೆಗಳು ಮತ್ತು ಆರೋಗ್ಯ ವಿತರಣಾ ಸಂಸ್ಥೆಗಳು ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ವರದಿಯಲ್ಲಿ ಸಂಶೋಧಕರು ಶಿಫಾರಸ್ಸು ಮಾಡಿದ್ದಾರೆ.

ಸದ್ಯಕ್ಕೆ ಮುಗಿಯಲ್ಲ

ಸದ್ಯಕ್ಕೆ ಮುಗಿಯಲ್ಲ

''ಕೋವಿಡ್-19 ಅಟ್ಟಹಾಸ ಸದ್ಯಕ್ಕೆ ಮುಗಿಯುವುದಿಲ್ಲ. ಹೀಗಾಗಿ, ಮುಂದಿನ 2 ವರ್ಷಗಳ ಕಾಲ ಜನರು ಎಚ್ಚರಿಕೆ ವಹಿಸಲೇಬೇಕು. ವೈರಸ್ ವ್ಯಾಪಕವಾಗಿ ಹಬ್ಬುವ ಪ್ರಮಾಣ ಕ್ಷೀಣಿಸಬಹುದು. ಆದರೂ, SARS-Cov-2 ಜನರಲ್ಲಿ ಪಸರಿಸುತ್ತಲೇ ಇರುತ್ತದೆ'' ಎಂದು ಸಂಶೋಧಕರು ವರದಿಯಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.

ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!

English summary
According to a new study, In USA, Coronavirus will be inescapable for next 2 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X