ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Facebook ನಿಂದ ಮಹಾ ಪ್ರಮಾದ: 419 ಮಿಲಿಯನ್ ಫೋನ್ ನಂಬರ್ ಬಹಿರಂಗ!

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸೆಪ್ಟೆಂಬರ್ 05: ಖಾಸಗೀ ಮಾಹಿತಿಗಳನ್ನು ಕಳುವು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂಲದ ಆನ್ ಲೈನ್ ಸೋಶಿಯಲ್ ಮೀಡಿಯಾ 'ಫೇಸ್ಬುಕ್' ಹಲವು ಬಾರಿ ಸುದ್ದಿಯಲ್ಲಿದೆ. ಇದೀಗ ಮತ್ತೊಮ್ಮೆ ಮಹಾಪ್ರಮಾದದೊಂದಿಗೆ ಅದು ಸುದ್ದಿಯಲ್ಲಿದೆ!

'ಜೀ ನ್ಯೂಸ್' ವರದಿ ಪ್ರಕಾರ, ಫೇಸ್ಬುಕ್ ಪ್ರೊಫೈಲ್ ಜೊತೆ ಜೋಡಿಸಲಾಗಿದ್ದ ಸುಮಾರು 419 ದಶಲಕ್ಷ ಫೋನ್ ನಂಬರ್ ಗಳು ಬಹಿರಂಗವಾಗಿದ್ದು, ಫೇಸ್ಬುಕ್ ಬಳಕೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ.

ಫೇಸ್‌ಬುಕ್ ಒಳಜಗಳ, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಹ ಸಂಸ್ಥಾಪಕಫೇಸ್‌ಬುಕ್ ಒಳಜಗಳ, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಹ ಸಂಸ್ಥಾಪಕ

ಅಮೆರಿಕದ 133 ಮಿಲಿಯನ್, ಇಂಗ್ಲೆಂಡ್ ನ 18 ಮಿಲಿಯನ್, ವಿಯೆಟ್ನಾಂ ನ 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ದತ್ತಾಂಶಗಳು ಬಹಿರಂಗವಾಗಿವೆ ಎಂದು ವರದಿ ಹೇಳಿದೆ.

In A Shocking News: 419 Million Facebook Users Phone Number exposed

ಫೇಸ್ಬುಕ್ ಅಕೌಂಟ್ ಮೂಲಕ ಬಳಕೆದಾರರ ಫೋನ್ ನಂಬರ್ ಗಳನ್ನು ಪತ್ತೆ ಹಚ್ಚಬಹುದಾದ್ದರಿಂದ ಸ್ಪ್ಯಾಮ್ ಕಾಲ್, ಸಿಮ್ ಸ್ವಾಪಿಂಗ್ ಮತ್ತು ಸಿಮ್ ಜ್ಯಾಕಿಂಗ್ ಸಮಸ್ಯೆಗಳಿಗೆ ಬಳಕೆದಾರರು ಸಿಲುಕಿಕೊಳ್ಳುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫೇಸ್ಬುಕ್, "ಈ ದತ್ತಾಂಶಗಳು ಹಳತಾಗಿದ್ದು, ಇವನ್ನು ನಾವು ಡಿಲೀಟ್ ಮಾಡಿದ್ದೆವು. ಫೇಸ್ಬುಕ್ ಖಾತೆಯಿಂದ ಫೋನ್ ನಂಬರ್ ಬಹಿರಂಗವಾಗಿರುವುದು ನಮಗೆ ಕಂಡುಬಂದಿಲ್ಲ" ಎಂದಿದೆ.

ಫೇಸ್‌ಬುಕ್ ಸ್ನೇಹಿತನಿಂದ ದೋಖಾ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಫೇಸ್‌ಬುಕ್ ಸ್ನೇಹಿತನಿಂದ ದೋಖಾ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಇತ್ತೀಚೆಗಷ್ಟೇ 1.5 ಮಿಲಿಯನ್ ಹೊಸ ಬಳಕೆದಾರರ ಇ ಮೈಲ್ ಐಡಿಯನ್ನು ಬಹಿರಂಗವಾಗಿ ಅಪ್ಲೋಡ್ ಮಾಡುವ ಮೂಲಕ ಫೇಸ್ಬುಕ್ ಅವಾಂತರ ಸೃಷ್ಟಿಸಿತ್ತು. ಮಿಲಿಯನ್ ಗಟ್ಟಲೆ ಇನ್ ಸ್ಟಾಗ್ರಾಂ ಖಾತೆಯ ಫಾಸ್ವರ್ಡ್ ಗಳಲು ಬಹಿರಂಗವಾಗಿದ್ದವು.

English summary
In a Shocking news 419 facebook users' phone number linked to facebook account discovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X