ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನದಲ್ಲಿ ಪ್ರತಿಜ್ಞಾವಿಧಿ: ಅಪರೂಪದ ಕಾರ್ಯಕ್ರಮದಲ್ಲಿ ಅಮೆರಿಕ ಪೌರತ್ವ ಪಡೆದ ಭಾರತದ ಮಹಿಳೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 26: ಭಾರತ ಮೂಲದ ಸಾಫ್ಟ್‌ವೇರ್ ಡೆವಲಪರ್ ಸೇರಿದಂತೆ ಐವರು ವಲಸಿಗರಿಗೆ ಶ್ವೇತಭವನದಲ್ಲಿ ನಡೆದ ಬಲು ಅಪರೂಪದ ಕಾರ್ಯಕ್ರಮದಲ್ಲಿ ಅಮೆರಿಕದ ಪೌರತ್ವ ನೀಡಲಾಯಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ವೇತಭವನದಲ್ಲಿ ಐದು ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸುವ ವಿರಳ ಕಾರ್ಯಕ್ರಮದ ಮೂಲಕ ಅಮೆರಿಕದ ಪೌರತ್ವ ಪಡೆದುಕೊಂಡರು.

ಪ್ರತಿ ಜನಾಂಗ, ಧರ್ಮ ಮತ್ತು ವರ್ಣಗಳನ್ನು ಒಳಗೊಂಡಿರುವ ಭವ್ಯವಾದ ದೇಶಕ್ಕೆ ಸ್ವಾಗತ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಿದರು. ಶ್ವೇತಭವನದಲ್ಲಿ ಪೌರತ್ವ ನೀಡುವ ಸಮಾರಂಭವನ್ನು ಟ್ರಂಪ್ ಆಯೋಜಿಸಿದ್ದರು.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಎರಡೂ ಪಕ್ಷಕ್ಕೆ 'ಮೋದಿಯೇ ಟ್ರಂಪ್ ಕಾರ್ಡ್'ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಎರಡೂ ಪಕ್ಷಕ್ಕೆ 'ಮೋದಿಯೇ ಟ್ರಂಪ್ ಕಾರ್ಡ್'

ಮಂಗಳವಾರ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಎರಡನೆಯ ರಾತ್ರಿಯಲ್ಲಿ ಇದರ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಭಾರತ ಸೇರಿದಂತೆ ವಿದೇಶಿಗರಿಗೆ ಅತ್ಯಂತ ಗೌರವಯುತವಾಗಿ ಪೌರತ್ವ ನೀಡಲಾಗಿದೆ ಎಂಬ ಸಂಗತಿಯನ್ನು ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ. ಸಾಮಾನ್ಯವಾಗಿ ಶ್ವೇತಭವನದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುವುದಿಲ್ಲ. ಅದರಲ್ಲಿಯೂ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆದಿದ್ದು ವಿಶೇಷ.

ಐದು ದೇಶಗಳ ವಲಸಿಗರು

ಐದು ದೇಶಗಳ ವಲಸಿಗರು

ಭಾರತ, ಬೊಲಿವಿಯಾ, ಲೆಬನಾನ್, ಸುಡಾನ್ ಮತ್ತು ಘಾನಾ ದೇಶಗಳ ವಲಸಿಗರು ಶ್ವೇತಭವನದ ಕಾರ್ಯಕ್ರಮದಲ್ಲಿ ಸಾಲಾಗಿ ನಿಂತು, ತಮ್ಮ ಎಡಗೈನಲ್ಲಿ ಅಮೆರಿಕದ ಬಾವುಟ ಹಿಡಿದು ಬಲಗೈಯನ್ನು ಮುಂದೆ ಚಾಚಿ ಪ್ರತಿಜ್ಞೆ ಸ್ವೀಕರಿಸಿದರು. ಅವರಿಗೆ ಹೋಮ್ ಲ್ಯಾಂಡ್ ಸೆಕ್ಯುರಿಟಿಯ ಕಾರ್ಯದರ್ಶಿ ಚಡ್ ವೋಲ್ಫ್ ಪ್ರತಿಜ್ಞಾವಿಧಿ ಬೋಧಿಸಿದರು.

ಭಾರತದ ಸುಧಾ ಸುಂದರಿ ನಾರಾಯಣನ್

ಭಾರತದ ಸುಧಾ ಸುಂದರಿ ನಾರಾಯಣನ್

ಭಾರತದ ಸಾಫ್ಟ್ ವೇರ್ ಡೆವಲಪರ್ ಸುಧಾ ಸುಂದರಿ ನಾರಾಯಣನ್ ಕೂಡ ಅಮೆರಿಕದ ಪ್ರಜೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಭಾರತದಲ್ಲಿ ಜನಿಸಿ 13 ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದ ಸುಧಾ ಅವರು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಶ್ಲಾಘಿಸಿದರು.

ಟ್ರಂಪ್ ‘ಕ್ರೂರಿ, ಸುಳ್ಳುಗಾರ': ಟ್ರಂಪ್ ಅಕ್ಕನ ಆರೋಪಟ್ರಂಪ್ ‘ಕ್ರೂರಿ, ಸುಳ್ಳುಗಾರ': ಟ್ರಂಪ್ ಅಕ್ಕನ ಆರೋಪ

ಪ್ರತಿಭಾವಂತೆ ಸುಧಾ- ಟ್ರಂಪ್ ಶ್ಲಾಘನೆ

ಪ್ರತಿಭಾವಂತೆ ಸುಧಾ- ಟ್ರಂಪ್ ಶ್ಲಾಘನೆ

'ಸುಧಾ ಒಬ್ಬ ಪ್ರತಿಭಾನ್ವಿತ ಸಾಫ್ಟ್‌ವೇರ್ ಡೆವಲಪರ್. ಅವರು ಮತ್ತು ಅವರ ಪತಿ ಎರಡು ಸುಂದರ ಮತ್ತು ಅದ್ಭುತ ಮಕ್ಕಳನ್ನು ಬೆಳೆಸುತ್ತಿದ್ದು ಅವರು ನಿಮ್ಮ ಜೀವನದ ಸೇಬುಹಣ್ಣುಗಳಾಗಿವೆ. ಬಹಳ ಧನ್ಯವಾದಗಳು ಮತ್ತು ಶುಭಾಶಯಗಳು' ಎಂದು ಟ್ರಂಪ್ ಹೇಳಿದರು. ಸುಧಾ ಅವರಿಗೆ ಟ್ರಂಪ್ ಅಮರಿಕದ ಪೌರತ್ವ ಪ್ರಮಾಣಪತ್ರ ನೀಡಿದರು.

ಅಮೆರಿಕಕ್ಕೆ ಶಾಶ್ವತ ನಿಷ್ಠೆ

ಅಮೆರಿಕಕ್ಕೆ ಶಾಶ್ವತ ನಿಷ್ಠೆ

ಅಮೆರಿಕದ ಜನತೆ, ಅಮೆರಿಕದ ಸಂವಿಧಾನ ಮತ್ತು ಅಮೆರಿಕದ ಜೀವನ ಕ್ರಮಕ್ಕೆ ತಮ್ಮ ಶಾಶ್ವತ ನಿಷ್ಠೆಯನ್ನು ತೋರಿಸುವುದಾಗಿ ಈ ಐವರು ಹೊಸ ನಾಗರಿಕರು ಪ್ರತಿಜ್ಞೆಗೈದಿದ್ದಾರೆ. ಅಮೆರಿಕದ ಇತಿಹಾಸ ಮತ್ತು ಪರಂಪರೆ ಈಗ ನಿಮ್ಮದಾಗಿದೆ. ಅದನ್ನು ಕಾಪಾಡಿ ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿ ನಿಮ್ಮದು ಎಂದ ಟ್ರಂಪ್, ಅಮೆರಿಕದ ಹಕ್ಕುಗಳ ಮಸೂದೆಯು ನಿಮ್ಮ ಬೆಂಬಲ, ರಕ್ಷಣೆ ಮತ್ತು ಸಮರ್ಥನೆಗಿದೆ ಎಂದರು.

ಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾ

English summary
Indian software developer Sudha Sundari Narayanan and four others from different countries sworn as US citizens in rare white house event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X