ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡೆಗೂ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್, ಉಡಾಫೆ ಇನ್ನಿಲ್ಲ

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಡೆಗೂ ಮಾಸ್ಕ್ ಧರಿಸುವ ಮನಸ್ಸಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇದೇ ಮೊದಲ ಬಾರಿಗೆ ಟ್ರಂಪ್ ಮಾಸ್ಕ್ ಧರಿಸಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಮಾಸ್ಕ್ ಧರಿಸುವುದಿಲ್ಲ ಅಂತಾ ಉಡಾಫೆ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷರಿಗೆ ಕಡೆಗೂ ಮಾಸ್ಕ್‌ ಮಹತ್ವ ಮನದಟ್ಟಾಗಿದೆ.

ಅಮೆರಿಕದ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಡೊನಾಲ್ಡ್ ಟ್ರಂಪ್ ಅಧಿಕಾರಿಗಳ ಸಲಹೆ ಮೇರೆಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ಧರಿಸಿದ್ದರು. ವಾಷಿಂಗ್ಟನ್‌ ಬಳಿಯ ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಕೇಂದ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಟ್ಟ ಟ್ರಂಪ್ ಅಧ್ಯಕ್ಷೀಯ ಮುದ್ರೆ ಇರುವ ಮಾಸ್ಕ್ ಧರಿಸಿ ಮಿಂಚುತ್ತಿದ್ದರು.

ವೀಸಾ ಗೊಂದಲ ವಿದ್ಯಾರ್ಥಿಗಳು ಉಸ್ಸಪ್ಪ, ಸಾಕಪ್ಪಾ ಸಹವಾಸ!ವೀಸಾ ಗೊಂದಲ ವಿದ್ಯಾರ್ಥಿಗಳು ಉಸ್ಸಪ್ಪ, ಸಾಕಪ್ಪಾ ಸಹವಾಸ!

ಟ್ರಂಪ್ ತಮ್ಮ ಭೇಟಿ ವೇಳೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ಯೋಗಕ್ಷೇಮ ವಿಚಾರಿಸಿದ್ರು. ಅಲ್ಲದೆ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದ್ರು.

 ಮಾಸ್ಕ್ ಅಂದ್ರೆ ಅಲರ್ಜಿ..!

ಮಾಸ್ಕ್ ಅಂದ್ರೆ ಅಲರ್ಜಿ..!

ಅಂದಹಾಗೆ ಇವತ್ತು ಮಾಸ್ಕ್ ಧರಿಸಿ ಮಿಂಚಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಹಿಂದೆ ಮಾಸ್ಕ್ ಹಾಕದೇ ಇರುವ ಬಗ್ಗೆ ಪ್ರಶ್ನಿಸಿದ್ರೆ ಕೋಪ ಮಾಡಿಕೊಳ್ತಿದ್ರು. ಅಲ್ಲದೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿರುವ ಜೋ ಬಿಡೆನ್ ಮಾಸ್ಕ್ ಧರಿಸಿ ಕ್ಯಾಂಪೇನ್ ಮಾಡುತ್ತಿರುವುದರ ಬಗ್ಗೆ ಜೋಕ್ ಕೂಡ ಮಾಡಿದ್ದರು.

ಮಾಸ್ಕ್‌ ಧರಿಸಲು ಯಾವುದೇ ತೊಂದರೆ ಇಲ್ಲ, ಆದರೆ...: ಡೊನಾಲ್ಡ್ ಟ್ರಂಪ್ಮಾಸ್ಕ್‌ ಧರಿಸಲು ಯಾವುದೇ ತೊಂದರೆ ಇಲ್ಲ, ಆದರೆ...: ಡೊನಾಲ್ಡ್ ಟ್ರಂಪ್

 ವೈಟ್ ಹೌಸ್ ಸಿಬ್ಬಂದಿಗೂ ಕೊರೊನಾ ಸೋಂಕು

ವೈಟ್ ಹೌಸ್ ಸಿಬ್ಬಂದಿಗೂ ಕೊರೊನಾ ಸೋಂಕು

ಮತ್ತೊಂದೆಡೆ ವೈಟ್ ಹೌಸ್ ಸಿಬ್ಬಂದಿಗೂ ಕೊರೊನಾ ಸೋಂಕು ದೃಢವಾದಾಗಲೂ ಟ್ರಂಪ್ ಮಾಸ್ಕ್ ಅಂದ್ರೆ ನೋ ನೋ ಅಂತಾ ದೂರ ಸರಿಯುತ್ತಿದ್ದರು. ಆದರೆ ಇದೀಗ ಜ್ಞಾನೋದಯವಾದವರಂತೆ ಮಾಸ್ಕ್ ಹಾಕಿ ಮಿಂಚಿದ್ದಾರೆ ಟ್ರಂಪ್. ಇನ್ನು ಮಾಸ್ಕ್ ಧರಿಸಿರುವ ಬಗ್ಗೆ ಅಮೆರಿಕ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಆಸ್ಪತ್ರೆಯಲ್ಲಿ ಮಾಸ್ಕ್ ಹಾಕುವುದು ಒಳ್ಳೆಯದು ಅನ್ನಿಸಿತು. ಇದೇ ಕಾರಣಕ್ಕೆ ಮಾಸ್ಕ್ ಧರಿಸಿದ್ದೇನೆ ಅಂತಾ ತಮ್ಮ ಮೊದಲ ಮಾಸ್ಕ್ ಅನುಭವದ ಬಗ್ಗೆ ತಿಳಿಸಿದ್ರು.

ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!

 ಮಾಸ್ಕ್ ಧರಿಸುವುದರಲ್ಲೂ ರಾಜಕೀಯ

ಮಾಸ್ಕ್ ಧರಿಸುವುದರಲ್ಲೂ ರಾಜಕೀಯ

ಮಾಸ್ಕ್ ಧರಿಸುವುದರಲ್ಲೂ ರಾಜಕೀಯ ಇದೆ ಎಂದು ನೋಡಲಾಗುತ್ತದೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಡೆಮಾಕ್ರಾಟಿಕ್ ಗಳಿಗೆ ಹೋಲಿಸಿದರೆ ರಿಪಬ್ಲಿಕನ್ನರು ಮಾಸ್ಕ್ ಧರಿಸಿದ್ದೇ ಕಡಿಮೆ ಎಂದು ಅಂಕಿ ಅಂಶ ಹೇಳುತ್ತಿದೆ. ತುಲ್ಸಾ, ಓಕ್ಲಾಹೊಮಾ, ಫೀನಿಕ್ಸ್ ,ದಕ್ಷಿಣ ಡಕೊಟಾದ ಮೌಂಟ್ ರಶ್ ಮೋರ್ ನಲ್ಲಿ ಟ್ರಂಪ್ ಅಭಿಯಾನದಲ್ಲಿ ಮಾಸ್ಕ್ ಧಾರಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

 ಒಂದೇ ದಿನ 61 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ

ಒಂದೇ ದಿನ 61 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ

ಇದೆಲ್ಲಾ ಒಂದು ಕಡೆಯಾದರೆ, ಅಮೆರಿಕದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ನಿನ್ನೆ ಕೂಡ ಒಂದೇ ದಿನ 61 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢವಾಗಿದೆ. ಅಲ್ಲದೆ ಒಟ್ಟು ಸೋಂಕಿತರ ಸಂಖ್ಯೆ 34 ಲಕ್ಷದತ್ತ ಮುನ್ನುಗ್ಗುತ್ತಿದೆ. ಅಮೆರಿಕದಲ್ಲಿ ಈಗಾಗಲೇ 1 ಲಕ್ಷ 37 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದು, ತಜ್ಞರ ಪ್ರಕಾರ ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರವಾಗಲಿದೆಯಂತೆ.

English summary
President Donald Trump wore a mask during a visit to a military hospital on Saturday, the first time the president has been seen in public with the type of facial covering recommended by health officials as a precaution against spreading or becoming infected by the novel coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X