ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸೋತರೆ ಗಂಡಾಂತರ: ಜೈಲು ಸೇರಬಹುದು ಇಲ್ಲ ದೇಶ ಬಿಡಬಹುದು..!?

|
Google Oneindia Kannada News

ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ 2ನೇ ಬಾರಿಗೆ ಆಯ್ಕೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಟ್ರಂಪ್‌ಗೆ ನೂರಾರು ಅಡ್ಡಿ, ಆತಂಕಗಳು ಎದುರಾಗಿವೆ. ಸೋಲು-ಗೆಲುವಿನ ಲೆಕ್ಕಾಚಾರದ ಜೊತೆಗೆ ಟ್ರಂಪ್ ವಿರೋಧಿ ಪಡೆ ಕಾನೂನು ಹೋರಾಟಕ್ಕೆ ಸಜ್ಜಾಗಿ ನಿಂತಿದೆ. ಅಕಸ್ಮಾತ್ ಟ್ರಂಪ್ ಸೋತರೆ ಅವರ ವಿರುದ್ಧದ ಕೇಸ್‌ಗಳ ವಿಚಾರಣೆ ಸುಲಭವಾಗಲಿದೆ. ತೆರಿಗೆ ವಂಚನೆ ಆರೋಪ, ಲೈಂಗಿಕ ದೌರ್ಜನ್ಯ ಆರೋಪಗಳು ಸೇರಿದಂತೆ ಕೆಲ ಕ್ರಿಮಿನಲ್ ಆರೋಪಗಳು ಕೂಡ ಟ್ರಂಪ್ ವಿರುದ್ಧ ಕೇಳಿಬಂದಿವೆ.

ಆದರೆ ಟ್ರಂಪ್ ವಿರುದ್ಧ ಈ ಪ್ರಕರಣಗಳ ವಿಚಾರಣೆಯನ್ನು ಪಾರದರ್ಶಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಧ್ಯಕ್ಷರಿಗೆ ಇರುವ ಅಧಿಕಾರಗಳೇ ಆರೋಪಗಳ ಪಾರದರ್ಶಕ ವಿಚಾರಣೆಗೆ ಅಡ್ಡಿಯಾಗಿದೆ. ಹೀಗಾಗಿ ಟ್ರಂಪ್ ಅಕಸ್ಮಾತ್ ಸೋತರೆ ಗಂಡಾಂತರ ಕಟ್ಟಿಟ್ಟಬುತ್ತಿ. ಸೋಲಿನ ಬಳಿಕ ಅಧ್ಯಕ್ಷರಿಗೆ ಇರುವ ಅಧಿಕಾರಗಳನ್ನು ಟ್ರಂಪ್ ಕಳೆದುಕೊಂಡರೆ, ಆಗ ಕಾನೂನು ಹೋರಾಟವೂ ಸುಲಭವಾಗಲಿದೆ ಎಂಬುದು ಟ್ರಂಪ್ ವಿರೋಧಿ ಪಾಳಯದ ಲೆಕ್ಕಾಚಾರ.

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಇದನ್ನೆಲ್ಲಾ ಅಳೆದು, ತೂಗಿ ಹೇಳುವುದಾದರೆ ಚುನಾವಣೆ ಸೋಲಿಗಿಂತಲೂ ಹೆಚ್ಚಾಗಿ ಸೋತ ನಂತರವೇ ಟ್ರಂಪ್‌ ಸಾಕಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಶತಾಯಗತಾಯ ಗೆಲುವಿಗಾಗಿ ಟ್ರಂಪ್ ಹೋರಾಡುತ್ತಿದ್ದಾರೆ.

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

15 ದಿನಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾ ಕಣ ಕಾವೇರಿದೆ, ಟ್ರಂಪ್ ಮತ್ತು ಬಿಡೆನ್ ಗೆಲುವಿಗಾಗಿ ಕಾದಾಡುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಟ್ರಂಪ್ ಸೋತರೆ ಕತೆ ಏನು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೀಗೆ ಟ್ರಂಪ್ ಸೋಲಬಹುದು ಎಂಬ ಊಹೆಗೆ ಹಲವು ಘಟನೆಗಳು ಬಲ ನೀಡುತ್ತಿವೆ. ಕೊರೊನಾ ಕಂಟಕ, ಜನಾಂಗೀಯ ಸಂಘರ್ಷ, ಇದರ ಜೊತೆಗೆ ಅಮೆರಿಕದ ಆರ್ಥಿಕತೆಯ ಅಧಃಪತನ.

ಇವಿಷ್ಟೂ ಕಾರಣಗಳು ಸಾಕಾಗಿಲ್ಲ ಎಂಬಂತೆ ಟ್ರಂಪ್ ವಿರುದ್ಧ ಕೇಳಿಬಂದಿರುವ ಗಂಭೀರವಾದ ಆರೋಪಗಳು, ಕ್ರಿಮಿನಲ್ ಪ್ರಕರಣಗಳು ಮೆಲ್ಲಗೆ ಟ್ರಂಪ್‌ಗೂ ಭಯದ ವಾಸನೆ ಸೋಕಿಸುತ್ತಿವೆ. ಹೀಗಾಗಿಯೇ ಟ್ರಂಪ್, ಬಿಡೆನ್ ಗೆದ್ದರೆ ತಾನು ದೇಶ ಬಿಡಬೇಕಾದ ಸಂದರ್ಭ ಬರಬಹುದು ಎಂದಿರಬಹುದು.

ತೆರಿಗೆ ಮೋಸ ಮಾಡಿದ್ದಾರಾ ಟ್ರಂಪ್..?

ತೆರಿಗೆ ಮೋಸ ಮಾಡಿದ್ದಾರಾ ಟ್ರಂಪ್..?

ಅಮೆರಿಕ ಬಂಡವಾಳಿಗರ ದೇಶ. ಅಲ್ಲಿ ಎಲ್ಲಾ ಕಾನೂನಿಗಿಂತ ತೆರಿಗೆ ಕಾನೂನಿಗೆ ಹೆಚ್ಚಿನ ಮಹತ್ವ. ಹೀಗಾಗಿಯೇ ಅಲ್ಲಿ ತೆರಿಗೆ ವಂಚನೆ ಮಾಡುವುದು ಮಹಾಪರಾಧ. ಸಾಮಾನ್ಯವಾಗಿ ಜಗತ್ತಿನ ಬಹುಪಾಲು ದೇಶಗಳಲ್ಲಿ ತೆರಿಗೆ ವಂಚನೆ ಒಂದು ಸಾಮಾನ್ಯ ಅಪರಾಧವಾಗಿದ್ದರೆ, ಅಮೆರಿಕದಲ್ಲಿ ಅದು ಕ್ರಿಮಿನಲ್ ಪ್ರಕರಣವೇ ಆಗಲಿದೆ.

ಟ್ರಂಪ್‌ v/s ಕಮಲಾ: ಅಧ್ಯಕ್ಷರು ಮಾಡಿದ ಎಡವಟ್ಟು ಒಂದೆರಡಲ್ಲಟ್ರಂಪ್‌ v/s ಕಮಲಾ: ಅಧ್ಯಕ್ಷರು ಮಾಡಿದ ಎಡವಟ್ಟು ಒಂದೆರಡಲ್ಲ

ಈಗ ಟ್ರಂಪ್ ಪಾವತಿಸಿರುವ ತೆರಿಗೆ, ಟ್ರಂಪ್ ಆಸ್ತಿ ಲೆಕ್ಕಾಚಾರಗಳು, ತೆರಿಗೆ ವಂಚನೆ ನಡೆದಿದೆ ಎಂಬ ಆರೋಪಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಅಮೆರಿಕದ ಕೋರ್ಟ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಅರ್ಜಿಗಳು ದಾಖಲಾಗಿವೆ. ಹಲವು ಅರ್ಜಿಗಳ ಪೈಕಿ ಕೆಲವು ಅರ್ಜಿಗಳು ಕ್ರಿಮಿನಲ್ ಪ್ರಕರಣದ ಹಾದಿ ಹಿಡಿದಿವೆ. ಹೀಗಾಗಿ ಟ್ರಂಪ್ ಸೋತರೆ ಅವರಿಗೆ ಸೋಲಿನ ಜೊತೆಗೆ ದೊಡ್ಡ ಗಂಡಾಂತರವನ್ನೂ ತಂದೊಡ್ಡಲಿದೆ.

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಕೆಲ ದಿನಗಳ ಹಿಂದೆ ಟ್ರಂಪ್ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿ ಮಾಡಿತ್ತು. ನವೆಂಬರ್ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಗ್ಯಾರಂಟಿ ಕೊಡಲ್ಲ ಎಂದಿದ್ದ ಟ್ರಂಪ್ ವಿರುದ್ಧ ಅಮೆರಿಕದ ರಾಜಕೀಯ ನಾಯಕರು ಪಕ್ಷಾತೀತವಾಗಿ ತಿರುಗಿಬಿದ್ದಿದ್ದರು. ನೇರವಾಗಿ ಅಂಚೆ ಮತದಾನವನ್ನೇ ಟಾರ್ಗೆಟ್ ಮಾಡಿದ್ದ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರು. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದಿದ್ದ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಊಹಿಸಿದ್ದರು.

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

ಟ್ರಂಪ್ ಹೇಳುವ ಪ್ರಕಾರ ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ನಡುವೆಯೂ ಡೆಮಾಕ್ರಟಿಕ್ ಲೀಡರ್ಸ್ ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಮಾತ್ರ ಅಂಚೆ ಮತದಾನ ಬಿಲ್‌ಕುಲ್ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದಾರೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ. ಹೀಗಾಗಿಯೇ ಟ್ರಂಪ್ ಅಂಚೆ ಮತದಾನದ ವಿರುದ್ಧ ಮಾತನಾಡುವ ಮೂಲಕ ಹೊಸ ಕ್ಯಾತೆ ತೆಗೆದಿದ್ದರು ಎಂಬುದು ವಿಪಕ್ಷ ನಾಯಕರ ಆರೋಪವಾಗಿತ್ತು. ಈ ವಾದ, ವಿವಾದ ಹಾಗೂ ಬೇಕು-ಬೇಡಗಳ ನಡುವೆಯೂ ಅಂಚೆ ಮತದಾನ ಮುನ್ನಡೆದಿದ್ದು, ಅಮೆರಿಕ ಅಧ್ಯಕ್ಷರ ಆಯ್ಕೆಗೆ ಕೌಂಟ್‌ಡೌನ್ ಶುರುವಾಗಿದೆ.

ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರುಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು

English summary
If Donald Trump lost the presidential election by chance, there would be a big dent. Already, Trump opponents are heading for a judicial fight, and if Trump steps down from the presidential seat, he will face a greater risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X