ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ 'ಕ್ಸೆನೋ ಫೋಬಿಕ್', ಅವರನ್ನು ಎಂದೂ ಕ್ಷಮಿಸಲ್ಲ ಎಂದ ಮಿಶೆಲ್ ಒಬಾಮ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 9: ತಮ್ಮ ಪತಿಯ ಹುಟ್ಟಿನ ವಿಚಾರವಾಗಿ ಪಿತೂರಿ ಮಾಡಿ, ಅಧ್ಯಕ್ಷೀಯ ಚುನಾವಣೆ ಪ್ರಚಾರ ನಡೆಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಪತ್ನಿ ಮಿಶೆಲ್ ಒಬಾಮ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ನೆನಪುಗಳನ್ನು ದಾಖಲಿಸಿರುವ 'Becoming' ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಿರುವ ಮಿಶೆಲ್, ಟ್ರಂಪ್ ರನ್ನು 'ಕ್ಸೆನೋ ಫೋಬಿಕ್' (ಬೇರೆ ದೇಶದಿಂದ ಬಂದವರ ಬಗ್ಗೆ ಅಸಹನೆ ಇರುವ ವ್ಯಕ್ತಿ) ಎಂದು ಕರೆದಿದ್ದಾರೆ. ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ, ಬರಾಕ್ ಒಬಾಮ ಅಮೆರಿಕದಲ್ಲಿ ಜನಿಸಿದವರಲ್ಲ ಎಂದು ಟ್ರಂಪ್ ಹೇಳಿದ್ದರು.

ಎಚ್-1ಬಿ ವೀಸಾ ಹೊರಗುತ್ತಿಗೆ ಉದ್ಯೋಗಿಗಳಿಗಲ್ಲ: ಟ್ರಂಪ್ ಹೊಸ ನೀತಿ ಎಚ್-1ಬಿ ವೀಸಾ ಹೊರಗುತ್ತಿಗೆ ಉದ್ಯೋಗಿಗಳಿಗಲ್ಲ: ಟ್ರಂಪ್ ಹೊಸ ನೀತಿ

ಇದು ಕೂಡ ಬಹಳ ಅಪಾಯಕಾರಿ. ಯಾರಾದರೂ ಬುದ್ಧಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಲೋಡಡ್ ಗನ್ ಜತೆಗೆ ಡ್ರೈವ್ ಮಾಡಿಕೊಂಡು ವಾಷಿಂಗ್ಟನ್ ಗೆ ಬಂದರೆ ಹೇಗೆ? ನಮ್ಮ ಹೆಣ್ಣುಮಕ್ಕಳನ್ನು ಹುಡುಕಿಕೊಂಡು ಆ ವ್ಯಕ್ತಿ ಹೊರಟರೆ ಹೇಗೆ? ಡೊನಾಲ್ಡ್ ಟ್ರಂಪ್ ದೊಡ್ಡ ಧ್ವನಿಯಲ್ಲಿ ಅಂಥ ಪ್ರಚಾರ ಮಾಡುತ್ತಾ ನಮ್ಮ ಕುಟುಂಬದ ಸುರಕ್ಷತೆಯನ್ನು ಅಪಾಯದಲ್ಲಿಟ್ಟರು. ಆ ಕಾರಣಕ್ಕಾಗಿ ಅವರನ್ನು ನಾನೆಂದೂ ಕ್ಷಮಿಸುವುದಿಲ್ಲ ಎಂದು ಮಿಶೆಲ್ ಹೇಳಿದ್ದಾರೆ.

 I would never forgive Donald Trump, says Michelle Obama in memoir

ಮಿಶೆಲ್ ಒಬಾಮರ ಹೊಸ ಪುಸ್ತಕ ನವೆಂಬರ್ 13ರಂದು ಬಿಡುಗಡೆ ಆಗಲಿದೆ. ಅದರಲ್ಲಿ ಅವರು ಷಿಕಾಗೋದಲ್ಲಿ ಕಳೆದ ಆರಂಭದ ದಿನಗಳಿಂದ ಅಮೆರಿಕದ ಮೊದಲ ಮಹಿಳೆ ಆದಲ್ಲಿಯವರೆಗೆ ವಿವರಗಳು ಇರುತ್ತವೆ. ಜತೆಗೆ 2016ರಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದಾಗ ಆದ ಆಘಾತ ಮತ್ತು ನಂತರದ ಅನುಭವಗಳು ಕೂಡ ಇರುತ್ತವೆ.

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ? Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

ಮಿಶೆಲ್ ಒಬಾಮರ ಕೆಲವು ಅಭಿಪ್ರಾಯಗಳು ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಗುರಿ ಮಾಡಿಕೊಂಡಂಥವೇ ಆಗಿವೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ವಿರುದ್ಧ ಚರ್ಚೆ ನಡೆಸುವಾಗ ಟ್ರಂಪ್ ನಡವಳಿಕೆ ಹೇಗಿತ್ತು ಎಂಬ ಬಗ್ಗೆ ಕೂಡ ಮಿಶೆಲ್ ಒಬಾಮ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಹತ್ತು ನಗರಗಳಲ್ಲಿ ಪುಸ್ತಕದ ಪ್ರಚಾರಕ್ಕೆ ಸಂಬಂಧಿಸಿದಂತೆ ಮಿಶೆಲ್ ಪ್ರವಾಸ ಮಾಡಲಿದ್ದಾರೆ. ನವೆಂಬರ್ ಹದಿಮೂರರಂದು ಷಿಕಾಗೋ ನಗರದಿಂದಲೇ ಆ ಪಯಣ ಆರಂಭವಾಗಲಿದೆ.

English summary
In her memoir, former US First Lady Michelle Obama has ripped President Trump's spreading of the "birther" conspiracy theory against her husband Barack Obama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X