ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತ ಭವನಕ್ಕೆ ನಾನು ಮೊದಲ ಮಹಿಳೆ, ಕೊನೆಯಲ್ಲ; ಕಮಲಾ ಹ್ಯಾರೀಸ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 08 : "ನಾನು ಈ ಕಚೇರಿಗೆ ಮೊದಲ ಮಹಿಳೆ ಆಗಿರಬಹುದು. ಆದರೆ, ನಾನೇ ಕೊನೆಯಲ್ಲ" ಎಂದು ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಹೇಳಿದರು. ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸಾಧಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬೈಡನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ಗೆಲುವು ಸಾಧಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದಾರೆ.

ದೇಶವನ್ನು ಉದ್ದೇಶಿಸಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭಾಷಣದೇಶವನ್ನು ಉದ್ದೇಶಿಸಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭಾಷಣ

I May First Woman In This Office I Wont Be The Last Says Kamala Harris

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಜೋ ಬೈಡನ್ ಮತ್ತು ಕಮಲಾ ಹ್ಯಾರೀಸ್ ದೇಶವನ್ನು ಉದ್ದೇಶಿಸಿ ಮಾತನಾಡಿದರು, ಹಲವಾರ ವಿಚಾರಗಳನ್ನು ದೇಶದ ಜನರ ಜೊತೆ ಹಂಚಿಕೊಂಡರು.

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

"ದೇಶದ ಆಯ್ಕೆಗಳೇನು ಎಂದು ಎಲ್ಲಾ ಚಿಕ್ಕ ಹುಡುಗಿಯರು ಇಂದು ರಾತ್ರಿಯ ವಿದ್ಯಮಾನಗಳನ್ನು ನೋಡುತ್ತಿದ್ದಾರೆ. ಅಮೆರಿಕದಲ್ಲಿಯೇ ಮೊದಲ ಬಾರಿಗೆ ಉತ್ತಮ ಅಧ್ಯಕ್ಷ ಅಭ್ಯರ್ಥಿಯನ್ನು ಜನರು ಆಯ್ಕೆ ಮಾಡಿದ್ದಾರೆ" ಎಂದು ಕಮಲಾ ಹ್ಯಾರೀಸ್ ಹೇಳಿದರು.

ವಿಡಿಯೋ: We Did It, ಜೋ ಎಂದು ಸಂಭ್ರಮಿಸಿದ ಕಮಲಾ ವಿಡಿಯೋ: We Did It, ಜೋ ಎಂದು ಸಂಭ್ರಮಿಸಿದ ಕಮಲಾ

ಭಾರತ ಮೂಲದ ಕಮಲಾ ಹ್ಯಾರೀಸ್ ತಮ್ಮ ಭಾಷಣದಲ್ಲಿ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರೀಸ್ ಸ್ಮರಿಸಿಕೊಂಡರು. 19ನೇ ವರ್ಷದಲ್ಲಿಯೇ ಶ್ಯಾಮಲಾ ಭಾರತ ಬಿಟ್ಟು ಅಮೆರಿಕಕ್ಕೆ ಬಂದವರು 2009ರಲ್ಲಿ ನಿಧನ ಹೊಂದಿದ್ದಾರೆ.

"ಒಂದು ದಿನ ತಮ್ಮ ಮಗಳು ಈ ಮಹಾನ್ ದೇಶದ ಉಪಾಧ್ಯಕ್ಷಳಾಗಿ ಆಯ್ಕೆಯಾಗಲಿದ್ದಾಳೆ ಎಂದು ನಮ್ಮ ತಾಯಿ ಅಂದುಕೊಂಡಿರಲಿಲ್ಲ. ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ಆಕೆಗೆ ಅಪಾರವಾದ ನಂಬಿಕೆ ಇತ್ತು" ಎಂದು ಕಮಲಾ ಹ್ಯಾರೀಸ್ ಹೇಳಿದರು.

"ಈ ಮಹಾನ್ ದೇಶದ ಪ್ರಜಾಪ್ರಭುತ್ವ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ದೇಶದ ಸುಂದರ ಭವಿಷ್ಯವನ್ನು ನಿರ್ಮಾಣ ಮಾಡಲು ನಮಗೆ ಅವಕಾಶ ಸಿಕ್ಕಿದೆ. ಇದನ್ನು ನಾವು ಬಳಸಿಕೊಳ್ಳೋಣ" ಎಂದು ಕಮಲಾ ಕರೆ ನೀಡಿದರು.

ಜೋ ಬೈಡನ್ ಅಮೆರಿಕದ ಅಧ್ಯಕ್ಷರಾದರೆ ಕಮಲಾ ಹ್ಯಾರೀಸ್ ಉಪಾಧ್ಯಕ್ಷರಾಗಲಿದ್ದಾರೆ. ಅಮೆರಿಕದ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ.

English summary
United States vice president elect Kamala Harris said that, I may be the first woman in this office, I won't be the last.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X