• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದ್ರಾಬಾದ್ ಮೂಲದ ವಿದ್ಯಾರ್ಥಿನಿ ಶಿಕಾಗೋದಲ್ಲಿ ಭೀಕರ ಹತ್ಯೆ

|

ಇಲಿನಾಯ್, ನವೆಂಬರ್ 27: ಭಾರತದ ಹೈದರಾಬಾದ್ ಮೂಲದ ವಿದ್ಯಾರ್ಥಿನಿಯೊಬ್ಬರು ಶಿಕಾಗೋ ವಿಶ್ವವಿದ್ಯಾಲಯದ ಕ್ಯಾಂಪಸಿನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 19 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದ್ದು, ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಮೃತ ವಿದ್ಯಾರ್ಥಿನಿಯನ್ನು ರುತ್ ಜಾರ್ಜ್ ಎಂದು ಗುರುತಿಸಲಾಗಿದೆ. ಶಿಕಾಗೋದ ಇಲಿನಾಯ್ ವಿಶ್ವವಿದ್ಯಾಲಯ(ಯುಐಸಿ) ದ ಪಾರ್ಕಿಂಗ್ ನಿಲುಗಡೆಯಲ್ಲಿದ್ದ ಕಾರಿನಲ್ಲಿ ಶವ ಪತ್ತೆಯಾಗಿತ್ತು. ಮರುದಿನವೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಕೆವಿನ್ ಬೂಕರ್ ಹೇಳಿದ್ದಾರೆ.

ಶಿಕಾಗೋ ಟ್ರಿಬ್ಯೂನ್ ಪ್ರಕಾರ, ಬಂಧಿತನ ಹೆಸರು ಡೊನಾಲ್ಡ್ ಥುರ್ ಮನ್ (26), ಲೈಂಗಿಕ ಕಿರುಕುಳ ಹಾಗೂ ಕೊಲೆ ಆರೋಪ ಹೊರೆಸಲಾಗಿದೆ. 2016ರಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ಕಿರುಕುಳ ನೀಡಿ, ಹತ್ಯೆ ಮಾಡಿರುವುದು ದೃಢಪಟ್ಟಿದೆ.

"Dearest Ruthie baby... we miss you... just not able to believe you're no more... You were a loving and wonderful daughter, sister and cousin... Rest in peace." ಎಂದು ರುತ್ ಜಾರ್ಜ್ ಅವರ ಕಸಿನ್ ಸುನೈನಾ ದೆಬ್ರೊಹ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕಿನೆಸಿಯೊಲಾಜಿ ವಿದ್ಯಾರ್ಥಿನಿಯಾಗಿದ್ದ ರುತ್ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿ ಹೊಂದಲು ಉತ್ಸುಕಳಾಗಿದ್ದಳು ಎಂದು ಯುಐಸಿ ಚಾನ್ಸೆಲರ್ ಮಕಲ್ ಎಮಿರಿಡಿಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian-origin student was found strangled in her car in a university campus in Chicago and a suspect has been arrested and charged in the crime, according to authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more