• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾರಾ ಹೊಡೆತಕ್ಕೆ 50 ಜನರ ಸಾವು, 6 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು

|
Google Oneindia Kannada News

ಅಮೆರಿಕದಲ್ಲಿ 'ಲಾರಾ' ಚಂಡಮಾರುತ ಬಹುದೊಡ್ಡ ವಿಪತ್ತನ್ನೇ ಸೃಷ್ಟಿಸಿಬಿಟ್ಟಿದೆ. 250 ಕಿಲೋ ಮೀಟರ್ ವೇಗದಲ್ಲಿ ಬಂದು ಅಮೆರಿಕದ ಕರಾವಳಿಗೆ ಬಂದು ಅಪ್ಪಳಿಸಿರುವ ರಾಕ್ಷಸ ಗಾತ್ರ ಸುಳಿಗಾಳಿಗೆ ಹತ್ತಾರು ಮಂದಿ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಮಾತ್ರವಲ್ಲದೆ, ಹೈಟಿ ಹಾಗೂ ಕ್ಯೂಬಾ ದ್ವೀಪಗಳಲ್ಲೂ ಚಂಡಮಾರುತ ಭೀಕರ ಅನಾಹುತ ಸೃಷ್ಟಿಸಿದ್ದು 50ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.

ಶತಮಾನದಲ್ಲೇ ಇಂತಹ ಭೀಕರ ಚಂಡಮಾರುತವನ್ನು ಅಮೆರಿಕದ ದಕ್ಷಿಣ ಭಾಗದ ರಾಜ್ಯಗಳು ಎದುರಿಸಿರಲಿಲ್ಲ ಎನ್ನಲಾಗಿದ್ದು, ಲೂಸಿಯಾನಾ ಹಾಗೂ ಟೆಕ್ಸಾಸ್ ರಾಜ್ಯಗಳ ಅಕ್ಷರಶಃ ನಲುಗಿ ಹೋಗಿವೆ. ಈಗಾಗಲೇ ಜನಾಂಗೀಯ ಸಂಘರ್ಷ ಹಾಗೂ ಕೊರೊನಾ ದಾಳಿಯಿಂದ ನಲುಗಿ ಹೋಗಿರುವ ಅಮೆರಿಕದ ನಿವಾಸಿಗಳು, ಇದೀಗ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನರಳಾಡುತ್ತಿದ್ದಾರೆ.

ಮುಂಬರುವ ಚಂಡಮಾರುತಗಳ ಚೆಂದದ ಹೆಸರುಗಳಿವು! ಮುಂಬರುವ ಚಂಡಮಾರುತಗಳ ಚೆಂದದ ಹೆಸರುಗಳಿವು!

ಪರಿಸ್ಥಿತಿ ಹೇಗಿದೆ ಎಂದರೆ ಸೈಕ್ಲೋನ್ ಅಪ್ಪಳಿಸಿರುವ ರಾಜ್ಯಗಳು ನರಕದಂತೆ ಭಾಸವಾಗುತ್ತಿವೆ. ಈಗಾಗಲೇ ಟ್ರಂಪ್ ಆಡಳಿತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದು ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ. ಚುನಾವಣೆಯ ಹೊತ್ತಲ್ಲೇ 'ಲಾರಾ' ಚಂಡಮಾರುತ ಟ್ರಂಪ್ ಸರ್ಕಾರಕ್ಕೆ ಮತ್ತೊಂದು ಸವಾಲನ್ನು ತಂದೊಡ್ಡಿದೆ.

ಹೊಟ್ಟೆಗೆ ಆಹಾರ ಸಿಗುತ್ತಿಲ್ಲ

'ಲಾರಾ' ಚಂಡಮಾರುತ ಅಪ್ಪಳಿಸಿರುವ ಅಮೆರಿಕದ ರಾಜ್ಯಗಳಲ್ಲಿ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಮನೆಗಳು ಭೀಕರ ಚಂಡಮಾರುತಕ್ಕೆ ನಾಶವಾಗಿ ಹೋಗಿದ್ದರೆ, ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ವಿದ್ಯುತ್ ಕೂಡ ಕೈಕೊಟ್ಟಿದ್ದು, ಕತ್ತಲೆಯಲ್ಲೇ ಕೋಟಿ ಕೋಟಿ ಜನರು ಜೀವನ ಸಾಗಿಸಬೇಕಾಗಿದೆ. ಬೃಹತ್ ಮರಗಳು ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದಿರುವ ಪರಿಣಾಮ ವಿದ್ಯುತ್ ಪೂರೈಕೆಯನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ. ಈವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದ್ದು, ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ.

ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 300ಕ್ಕೂ ಹೆಚ್ಚು ಸಾವುಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 300ಕ್ಕೂ ಹೆಚ್ಚು ಸಾವು

Hurricane Laura Killed Morethan 50 People

ರೈತರ ಬದುಕು ಮೂರಾಬಟ್ಟೆ

ಮೇಲೆ ವಿವರಿಸಿದ ಅಷ್ಟೂ ಪರಿಸ್ಥಿತಿ ಶ್ರೀಮಂತ ರಾಷ್ಟ್ರ ಅಮೆರಿಕದ್ದಾದರೆ, ಬಡ ರಾಷ್ಟ್ರಗಳಾದ ಕ್ಯೂಬಾ, ಹೈಟಿ ದ್ವೀಪಗಳ ಸ್ಥಿತಿ ಇನ್ನೂ ಭೀಕರವಾಗಿದೆ. ಅತ್ತ ಕೊರೊನಾ ಹೊಡೆತದಿಂದ ಎರಡೂ ದ್ವೀಪಗಳು ಸುಧಾರಿಸಿಕೊಳ್ಳುತ್ತಿರುವಾಗಲೇ 'ಲಾರಾ' ಚಂಡಮಾರುತ ಏಟು ಕೊಟ್ಟಿದೆ. ಇಲ್ಲಿನ ಸರ್ಕಾರದ ಬಳಿ ನಿರಾಶ್ರಿತರಿಗೆ ಸಹಾಯ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಎರಡೂ ರಾಷ್ಟ್ರಗಳು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಬದುಕು ಮೂರಾಬಟ್ಟೆಯಾಗಿದೆ.

English summary
Hurricane Laura Killed Morethan 50 People. It is effected in America, Cuba, Hati. There were 464,813 customers without power in Louisiana state of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X