ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬಲ್ ಟೆಲಿಸ್ಕೋಪ್‌ಗೆ 30 ವರ್ಷ: ಏನಿದರ ವಿಶೇಷತೆ?

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 25: ಹಬಲ್ ದೂರದರ್ಶಕಕ್ಕೆ ಇಂದಿಗೆ 30 ವರ್ಷ. ಹಬಲ್ ದೂರದರ್ಶಕ ಭೂಮಿಯ ಸುತ್ತ ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಒಂದು ದೂರದರ್ಶಕವಾಗಿದೆ.

ಬಾಹ್ಯಾಕಾಶದಲ್ಲಿರುವುದರಿಂದ ಈ ದೂರದರ್ಶಕವು ಭೂಮಿಯ ವಾಯುಮಂಡಲದ ಹೊರಗಿರುವುದರಿಂದ ಬ್ರಹ್ಮಾಂಡದ ದೂರ ಪ್ರದೇಶಗಳಿಂದ ಬರುವ ದುರ್ಬಲ ಬೆಳಕನ್ನು ಕೂಡ ಪತ್ತೆ ಹಚ್ಚಬಲ್ಲದು. 1990ರಲ್ಲಿ ಅಂತರಿಕ್ಷದಲ್ಲಿ ಸ್ಥಾಪನೆಗೊಂಡ ನಂತರದಿಂದಲೂ ಇದು ಖಗೋಳವಿಜ್ಞಾನಕ್ಕೆ ಬ್ರಹ್ಮಾಂಡದ ಬಗ್ಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ.

ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಹಬಲ್‌ ಬಾಹ್ಯಾಕಾಶ ದೂರದರ್ಶಕವು ದಟ್ಟ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.

Hubbles Best Photos For Its 30th Birthday

ಹಬಲ್‌ ದೂರದರ್ಶಕದ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, 1990 ರಲ್ಲಿ ಉಡಾವಣೆಯ ಸ್ವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು ಗೋಳೀಯ ವಿಪಥನ ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು.

ಆದರೆ, 1993ರ ದುರಸ್ತಿ ಯಾತ್ರೆಯ ಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಸಂಶೋಧನಾ ಉಪಕರಣವಾಯಿತು.

Hubbles Best Photos For Its 30th Birthday

ಇದು ಮೊಟ್ಟ ಮೊದಲ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, 1990ರಲ್ಲಿ ಇದರ ಉಡಾವಣೆಯ ನಂತರ ಇದು ಖಗೋಳಶಾಸ್ತ್ರದ ಇತಿಹಾಸದಲ್ಲಿ ಒಂದು ಮುಖ್ಯ ಉಪಕರಣವಾಗಿ ಕಾರ್ಯ ನಿರ್ವಹಿಸಿದೆ.

English summary
Hubble turns 30 today. Here's a look back at some of its most noteworthy accomplishments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X