ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ- ಭಾರತದ ಗಟ್ಟಿ ಬಂಧ, ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್

|
Google Oneindia Kannada News

ಹ್ಯೂಸ್ಟನ್ (ಅಮೆರಿಕ), ಸೆಪ್ಟೆಂಬರ್ 22: "ಭಾರತಕ್ಕೆ ಈ ಹಿಂದೆ ಎಂದೆಂದಿಗೂ ಅಮೆರಿಕದ ವೈಟ್ ಹೌಸ್ ನಲ್ಲಿ ನನ್ನಂಥ ಸ್ನೇಹಿತ ಇರಲಿಲ್ಲ" ಎನ್ನುವ ಮೂಲಕ ಭಾರತದ ಬಗ್ಗೆ ತಮಗಿರುವ ಪ್ರೀತಿ ಹಾಗೂ ಸಂಬಂಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಹ್ಯೂಸ್ಟನ್ ನಲ್ಲಿ ಭಾನುವಾರ ಆಯೋಜಿಸಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೊನಾಲ್ಡ್ ಟ್ರಂಪ್ ಭಾಷಣದ ಮುಖ್ಯಾಂಶಗಳು ಇಲ್ಲಿವೆ:
* ಭಾರತಕ್ಕಾಗಿ ಪ್ರಧಾನಿ ಮೋದಿ ನಿಜವಾಗಲೂ ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ. ಇದು ಐತಿಹಾಸಿಕವಾದ ಕಾರ್ಯಕ್ರಮ. ನಾವು ನಿಮ್ಮನ್ನು ಪ್ರೀತಿಸುತ್ತೇವೆ, ಬೆಂಬಲಿಸುತ್ತೇವೆ.

* ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಬಲಿಷ್ಠವಾಗಿ, ಸಾರ್ವಭೌಮ ದೇಶವಾಗಿ ಬೆಳೆಯುತ್ತಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.

Donald Trump

* ಈ ಹಿಂದೆಂದಿಗಿಂತ ನಮ್ಮ (ಅಮೆರಿಕ ಹಾಗೂ ಭಾರತ) ಸಂಬಂಧ ಇಂದು ಬಲಿಷ್ಠವಾಗಿದೆ. ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.

* ಮುಂದಿನ ವಾರ ಮೊದಲ ಎನ್ ಬಿಎ ಪಂದ್ಯ ನೋಡಲು ಮುಂಬೈನಲ್ಲಿ ಸೇರಲಿದ್ದಾರೆ. ಎಚ್ಚರ, ನಾನೂ ಭೇಟಿ ನೀಡಬಹುದು.

* ನಮ್ಮ ದೇಶಗಳನ್ನು ಈ ಹಿಂದೆಂದಿಗಿಂತ ಸುಭಿಕ್ಷ ಹಾಗೂ ಶ್ರೀಮಂತ ಮಾಡಲು ಮೋದಿ ಅವರ ಜತೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

* ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ಆತಂಕದಿಂದ ಮುಗ್ಧ ನಾಗರಿಕರನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ.

* ಭಾರತೀಯ ಅಮೆರಿಕನ್ನರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹೊಸ ವ್ಯಾಪಾರ ಆರಂಭಿಸಿದ್ದಾರೆ ಹಾಗೂ ಸಾವಿರಾರು ಉದ್ಯೋಗಗಳನ್ನು ನೀಡಿದ್ದಾರೆ.

* ಪ್ರಧಾನಿ ಮೋದಿ ಅವರ ಪ್ರಗತಿ ಪರವಾದ ನೀತಿಯ ಪರಿಣಾಮವಾಗಿ ಭಾರತದಲ್ಲಿ ಮೂವತ್ತು ಕೋಟಿಯಷ್ಟು ಮಂದಿಯನ್ನು ಬಡತನದಿಂದ ಹೊರತರಲು ಸಾಧ್ಯವಾಗಿದೆ. ನಮ್ಮ ಜನರು ಈ ಹಿಂದೆಂದಿಗಿಂತ ಅಭಿವೃದ್ಧಿ ಆಗುತ್ತಿದ್ದಾರೆ.

* ಅರವತ್ತು ಕೋಟಿಗೂ ಹೆಚ್ಚು ಭಾರತೀಯರು ಪ್ರಧಾನಿ ಮೋದಿ ಹಾಗೂ ಅವರ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇನ್ನು ಎಲ್ಲರ ಜತೆಗೆ ಸೇರಿ ನಿಮಗೆ (ನರೇಂದ್ರ ಮೋದಿ) ಜನ್ಮ ದಿನದ ಶುಭಾಶಯ ಹೇಳುತ್ತೇನೆ.

English summary
Howdy Modi: U. S. president Donald Trump praised India PM Narendra Modi on Sunday function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X