ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹೆಸರೆತ್ತದೆ ಮಾತಿನಲ್ಲಿ ತಿವಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ಹ್ಯೂಸ್ಟನ್ (ಅಮೆರಿಕ), ಸೆಪ್ಟೆಂಬರ್ 22: "ನಾವಿಲ್ಲಿ ಹೊಸ ಇತಿಹಾಸ ಹಾಗೂ ಬಾಂಧವ್ಯವನ್ನು ನೋಡುತ್ತಿದ್ದೇವೆ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹ್ಯೂಸ್ಟನ್ ನಲ್ಲಿ ಭಾನುವಾರ ಆಯೋಜಿಸಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಮಧ್ಯದ ನಂಟಿನ ಬಗ್ಗೆ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶ ಇಲ್ಲಿದೆ:
* ಈ ಕಾರ್ಯಕ್ರಮದ ಹೆಸರು 'ಹೌಡಿ ಮೋದಿ'. ಆದರೆ ಮೋದಿ ಏಕಾಂಗಿಯಾಗಿ ಏನೂ ಅಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ನೂರಾ ಮೂವತ್ತು ಕೋಟಿ ಜನರ ಆದೇಶದ ಮೇಲೆ ಕೆಲಸ ಮಾಡುವ ವ್ಯಕ್ತಿ. ನೀವು 'ಹೌಡಿ ಮೋದಿ' ಅಂದರೆ, ಎವರಿಥಿಂಗ್ ಫೈನ್ ಇನ್ ಇಂಡಿಯಾ ಎನ್ನುತ್ತೇನೆ.

ಅಮೆರಿಕ- ಭಾರತದ ಗಟ್ಟಿ ಬಂಧ, ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್ಅಮೆರಿಕ- ಭಾರತದ ಗಟ್ಟಿ ಬಂಧ, ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್

* ಭಾರತದಲ್ಲಿ ವೈವಿಧ್ಯತೆ ಬಗ್ಗೆ ತಿಳಿಸುವ ಉದ್ದೇಶದಿಂದ, ಎವರಿಥಿಂಗ್ ಇಸ್ ಫೈನ್ ಎನ್ನುವುದನ್ನು ಕನ್ನಡವೂ ಸೇರಿದ ಹಾಗೆ ತಮಿಳು, ತೆಲುಗು, ಮಲಯಾಳಂ... ಹೀಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲವೂ ಚೆನ್ನಾಗಿದೆ ಎಂಬುದನ್ನು ಮೋದಿ ಹೇಳಿದರು.

Narendra Modi

* ಕಳೆದ ಅರವತ್ತು ವರ್ಷಗಳಲ್ಲಿ ಭಾರತದಲ್ಲಿ ಬಹುಮತದ ಸರ್ಕಾರ ಎರಡನೇ ಬಾರಿ ಹೆಚ್ಚು ಮತ ಪ್ರಮಾಣದೊಂದಿಗೆ ಅಧಿಕಾರಕ್ಕೆ ಬಂದಿದೆ.

* ನಾವು ನಮ್ಮ ಜತೆಗೇ ಸ್ಪರ್ಧಿಸುತ್ತಿದ್ದೇವೆ. ನಮ್ಮ ಜತೆಗೆ ಸವಾಲಿಗೆ ಇಳಿದಿದ್ದೇವೆ. ಆದ್ದರಿಂದಲೇ ನಾವು ಅಭಿವೃದ್ಧಿ ಪಥದಲ್ಲಿ ಇದ್ದೇವೆ. ನಮ್ಮ ಗುರಿ ಎತ್ತರದಲ್ಲಿದೆ. ನಾವು ಎತ್ತರ ಇರುವುದನ್ನೇ ಸಾಧಿಸಿದ್ದೇವೆ.

* ಇಡೀ ಜಗತ್ತಿನಲ್ಲಿ ಎಲ್ಲಾದರೂ ಕೈಗೆಟುಕುವ ಬೆಲೆಗೆ ಇಂಟರ್ ನೆಟ್ ಡೇಟಾ ದೊರೆಯುತ್ತಿದ್ದರೆ ಅದು ಭಾರತದಲ್ಲಿ. ಒಂದು ಜಿ. ಬಿ. ಡೇಟಾ ಇಪ್ಪತ್ತೈದು ಸೆಂಟ್ಸ್ ಗೆ ಸಿಗುತ್ತದೆ. ಡಿಜಿಟಲ್ ಇಂಡಿಯಾ ಅಡಿಯಲ್ಲಿ ಇದು ಸಾಧ್ಯವಾಗಿದೆ. ಇ ಆಡಳಿತದಿಂದ ಆದಾಯ ತೆರಿಗೆ ರಿಟರ್ನ್ಸ್ ತನಕ ಎಲ್ಲ ಅನುಕೂಲವು ಈ ಅಗ್ಗದ ಡೇಟಾದಿಂದ ಸಾಧ್ಯವಾಗಿದೆ.

* ಈ ಅಕ್ಟೋಬರ್ ಎರಡಕ್ಕೆ ಬಯಲು ಶೌಚಾಲಯಕ್ಕೆ ನಾವು ಕೊನೆ ಹಾಡಲಿದ್ದೇವೆ. ಎಪ್ಪತ್ತು ವರ್ಷಗಳಿಂದ ಇದ್ದ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ಮಾನ ತೆಗೆದಿದ್ದೇವೆ. ಅಭಿವೃದ್ಧಿಯಿಂದ ವಂಚಿತವಾಗಿದ್ದ ಜಮ್ಮು- ಕಾಶ್ಮೀರ, ಲಡಾಖ್ ನ ಜನರಿಗೆ ಇದರ ಅನುಕೂಲ ಆಗಲಿದೆ. ಇಲ್ಲಿವರೆಗಿನ ಅಲ್ಲಿನ ಸಮಸ್ಯೆಗಳ ಅನುಕೂಲವನ್ನು ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರು ಪಡೆದಿದ್ದರು.

* ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ತನ್ನದೇ ದೇಶವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲದ ದೇಶಕ್ಕೆ ಇರುಸುಮುರುಸು ಮಾಡಿದೆ. ಅದು ಯಾವುದೇ ಭಯೋತ್ಪಾದನೆ ದಾಳಿ ಇರಲಿ ವಿದ್ರೋಹಿಗಳು ಆ ಒಂದು ದೇಶದಲ್ಲೇ ಕಂಡುಬರುತ್ತಾರೆ.

* ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದ ನಿರ್ಧಾರದಿಂದ ಜಗತ್ತಿನಾದ್ಯಂತ ಇರುವ ಉದ್ಯಮಿಗಳಿಗೆ ಸಕಾರಾತ್ಮಕ ಸಂದೇಶ ರವಾನೆಯಾಗಿದೆ.

* ಸುಲಭವಾಗಿ ವ್ಯವಹಾರ ಮಾಡಲು ಸಾಧ್ಯವಾಗಬೇಕು ಎಂಬುದು ನಮಗೆ ಬಹಳ ಮುಖ್ಯ. ಅದರ ಜತೆಗೆ ಆರಾಮವಾಗಿ ಬದುಕುವುದು ಸಹ ಅಷ್ಟೇ ಮುಖ್ಯ. ಅದಕ್ಕಾಗಿ ಜನರನ್ನು ಸಶಕ್ತರನ್ನಾಗಿ ಮಾಡಬೇಕು. ಆಗ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ವೇಗ ಪಡೆದುಕೊಳ್ಳಲು ಸಾಧ್ಯ.

* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಭಾರತಕ್ಕೆ ಬರುವಂತೆ ನರೇಂದ್ರ ಮೋದಿ ಆಹ್ವಾನ ನೀಡಿದರು.

English summary
Howdy Modi: India PM Narendra Modi lashes out Pakistan for shielding and nurturing terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X