• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹ್ಯೂಸ್ಟನ್ ಹೌಡಿ-ಮೋದಿ ಐತಿಹಾಸಿಕ ಸಂಭ್ರಮದ ಸುತ್ತಾ ಮುತ್ತಾ

By ಕೋವರ್ ಕೊಲ್ಲಿ ಇಂದ್ರೇಶ್
|

ಮೋದಿ ಅವರು ಅಮೆರಿಕದ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಹೌಡಿ-ಮೋದಿ ಎಂದು ಕರೆಯಲಾಗುತ್ತಿದ್ದು, ಸೆ. 22 ರಂದು ಹೌಸ್ಟನ್ ನಗರದ ಎನ್ಆರ್‌ಜಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ 50 ಸಾವಿರ ಭಾರತೀಯರು ಟಿಕೆಟ್ ರಿಸರ್ವ್ ಮಾಡಿಸಿಕೊಂಡಿದ್ದಾರೆ.

ಸಾಕಷ್ಟು ಜನರಿಗೆ ಹೌಡಿ ಎಂದರೆ ಗೊತ್ತಿಲ್ಲ. ಹೌಡಿ ಎಂದರೆ ದಕ್ಷಿಣ ಪೂರ್ವ ಅಮೆರಿಕದಲ್ಲಿ ನಿತ್ಯ ಬಳಕೆಯ ಸಾಮಾನ್ಯ ಪದ ಆಗಿದ್ದು 'ಹೌ ಡು ಯು ಡೂ' ಎಂಬುದನ್ನು ಸಂಕ್ಷಿಪ್ತವಾಗಿ ಹೌಡಿ ಎಂದು ಕರೆಯಲಾಗುತ್ತಿದೆ. ಈ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೂಡ ಪಾಲ್ಗೊಳ್ಳಲಿರುವುದು ವಿಶೇಷ. ಅಮೇರಿಕಾ ದ ಅದ್ಯಕ್ಷ ಟ್ರಂಪ್ ಅವರ ಚುನಾವಣಾ ಪ್ರಚಾರ ಭಾಷಣಗಳಿಗೂ ಇಷ್ಟೊಂದು ದೊಡ್ಡ ಪ್ರಮಾಣದ ಜನಸಂದಣಿ ಸೇರುತ್ತಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ

ಐದು ವರ್ಷದ ಹಿಂದೆ ಕೂಡ ಮೋದಿ ಅಮೇರಿಕದ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆ ಸಮಾರಂಭ ನಡೆದಿದ್ದು ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಿನಲ್ಲಿ. ಆಗ ಸೇರಿದ್ದ ಜನರ ಒಟ್ಟು ಸಂಖ್ಯೆ 20 ಸಾವಿರ ಆಗಿದ್ದು ಈಗ ಅದರ ಮೂರು ಪಟ್ಟು ಹೆಚ್ಚು ಜನ ಸೇರುತ್ತಿರುವುದು ಮೋದಿ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ.

ಮುಂದಿನ ವರ್ಷ ಅಮೆರಿಕದಲ್ಲಿ ಅದ್ಯಕ್ಷರ ಚುನಾವಣೆ ನಡೆಯಲಿದ್ದು ಡೆಮೊಕ್ರಾಟಿಕ್‌ ಪಕ್ಷದ ಅದ್ಯಕ್ಷೀಯ ಅಭ್ಯರ್ಥಿ ಮೊದಲ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್‌ ಅವರು ಹೌಡಿ ಮೋದಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದು ಇದರಲ್ಲಿ ಪಾಲ್ಗೊಳ್ಳಲಾಗದಿದ್ದಕ್ಕೆ ವಿಷಾದಿಸಿದ್ದಾರೆ.

ಮಳೆ ಭೀತಿ ನಡುವೆ ಹೌಡಿ ಮೋದಿ

ಮಳೆ ಭೀತಿ ನಡುವೆ ಹೌಡಿ ಮೋದಿ

ಅಮೆರಿಕದಲ್ಲಿ ಸುಮಾರು 44.5 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇದು ವಿಶ್ವದ ಇತರ ಯಾವುದೇ ದೇಶಗಳಿಗಿಂತ ಜಾಸ್ತಿ ಇದ್ದು ಇಲ್ಲಿನ ಅನಿವಾಸಿ ಭಾರತೀಯರಲ್ಲಿ ಶ್ರೀಮಂತ ವರ್ಗದವರೇ ಹೆಚ್ಚಿದ್ದಾರೆ. ಅಮೇರಿಕಾದಲ್ಲಿ ಇದು ಮೋದಿ ಅವರ ನಾಲ್ಕನೇ ಭಾಷಣ ಆಗಲಿದೆ. ಕಳೆದ ತಿಂಗಳಷ್ಟೇ ಜಮ್ಮು ಮತ್ತು ಕಾಶೀರದಲ್ಲ್ಲಿನ 370 ನೇ ವಿಧಿಯನ್ನು ತೆಗೆದು ಹಾಕಿದ ನಂತರ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಇದು ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ.

ಮೋದಿಯ ಈ ಕಾರ್ಯಕ್ರಮದ ಯಶಸ್ಸಿಗೆ ಸುಮಾರು 1500 ಸ್ವಯಂ ಸೇವಕರು ಹಗಲಿರುಳೂ ಶ್ರಮಿಸುತಿದ್ದಾರೆ. ಆದರೆ ಶುಕ್ರವಾರ ಹ್ಯೂಸ್ಟನ್ ನಗರದಲ್ಲಿ ವ್ಯಾಪಕ ಮಳೆ ಅಗುತ್ತಿದ್ದು, ನಗರದ ವಿಮಾನ ನಿಲ್ದಾಣ ಜಲಾವೃತಗೊಂಡಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಗಳ ಹಾರಾಟಕ್ಕೆ ತೊಂದರೆ ಆಗದಿದ್ದರೂ ಹೊರಗೆ ವಾಹನಗಳ ಓಡಾಟಕ್ಕೆ ರಸ್ತೆಯಲ್ಲಿ ನಿಂತಿರುವ ನೀರು ಅಡ್ಡಿಯಾಗಲಿದೆ.

 ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಅವರೂ ಪಾಲ್ಗೊಳ್ಳುತ್ತಿರುವುದರಿಂದ ಸಹಜವಾಗೇ ಬಾರತ ಸರ್ಕಾರ 370 ನೇ ವಿಧಿಯನ್ನು ತೆಗೆದು ಹಾಕಿರುವುದನ್ನು ಬೆಂಬಲಿಸಿದಂತೆಯೇ ಅಗಲಿದೆ. ಜತೆಗೇ ಅಮೆರಿಕದ ಅಧ್ಯಕ್ಷರು ಭಾರತದೊಂದಿಗಿನ ಸ್ನೇಹ ವೃದ್ದಿಗೆ ಹೆಚ್ಚಿನ ವ್ಯಾಪಾರ -ಒಪ್ಪಂದಗಳನ್ನೂ ಮಾಡಿಕೊಳ್ಳುವ, ಆಮದಾಗುವ ಭಾರತೀಯ ವಸ್ತುಗಳ ಮೇಲಿನ ತೆರಿಗೆ ಕಡಿತವನ್ನೂ ಘೋಷಿಸಿವ ಸಾದ್ಯತೆ ಇದ್ದೇ ಇದೆ.

ಜಮ್ಮು ಕಾಶ್ಮೀರದ ವಿಶೇಷಾಧಿಕಾರದ 370 ನೇ ವಿಧಿಯನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಅಮೆರಿಕದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಮೋದಿ ವಿರುದ್ದ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಅವರಲ್ಲದೆ ಖಾಲಿಸ್ತಾನ ಬೆಂಬಲಿಸುವ ಸಿಖ್‌ ಸಂಘಟನೆ ಮತ್ತು ಮೋದಿ ವಿರೋದಿ ಗುಂಪು ಇದಕ್ಕಾಗಿ ಪ್ರತಿಭಟನಾಕಾರರನ್ನು ಸೇರಿಸಲು 16 ಮಸೀದಿಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ಚಿಟರ್ ನಲ್ಲಿ ಅದರ ಆಯೋಜಕರು ಪ್ರಕಟಿಸಿದ್ದಾರೆ.

'ಹೌಡಿ ಮೋದಿ' ಜಗತ್ತಿನ ದುಬಾರಿ ಕಾರ್ಯಕ್ರಮ: ರಾಹುಲ್ ತಗಾದೆ

 ಅಮೆರಿಕದಲ್ಲಿರುವ ಪಾಕಿಸ್ತಾನದ ನಾಗರಿಕರಿಂದ ಪ್ರತಿಭಟನೆ

ಅಮೆರಿಕದಲ್ಲಿರುವ ಪಾಕಿಸ್ತಾನದ ನಾಗರಿಕರಿಂದ ಪ್ರತಿಭಟನೆ

ಈ ಪ್ರತಿಭಟನೆಗೆ ಪಾಕಿಸ್ತಾನದ ಐಎಸ್ಐ ಮೂಲಕ ಹಣಕಾಸಿನ ನೆರವು ನೀಡುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಮೆರಿಕದಲ್ಲಿರುವ ಪಾಕಿಸ್ತಾನದ ನಾಗರಿಕರು ಈ ಪ್ರತಿಭಟನೆಯನ್ನು ಬೆಂಬಲಿಸುತಿದ್ದಾರೆ. ಪ್ರಾರ್ಥನಾ ಮಂದಿರಗಳನ್ನು ರಾಜಕೀಯದ ಪ್ರತಿಭಟನೆಗೆ ಬಳಸಿಕೊಳ್ಳುತ್ತಿರುವ ಕುರಿತು ಅಮೇರಿಕನ್ನರಿಂದ ವಿರೋಧವೂ ವ್ಯಕ್ತವಾಗಿದೆ.

 ಅಮೆರಿಕದ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ

ಅಮೆರಿಕದ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ

ಅಮೆರಿಕದ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ದೇಶದ ಬಹುತೇಕ ಟಿವಿ ಚಾನೆಲ್ ಗಳು ನೇರ ಪ್ರಸಾರ ಮಾಡಲಿವೆ. ಅಮೇರಿಕದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿರುವ ಈ ಕಾರ್ಯಕ್ರಮ ( ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30 ಗಂಟೆ)ಮಧ್ಯಾಹ್ನ 2 ಗಂಟೆಯವರೆಗೂ ನಡೆಯಲಿದೆ. ವಿಶ್ವಾದ್ಯಂತ ಭಾರತೀಯರು ಈ ಕಾರ್ಯಕ್ರಮ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
‘Howdy, Modi!’ event: Indian Prime Minister Narendra Modi is in Houston event to where US President Donald Trump will be joining him to address a mega rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more