ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಟೆರರ್ ಅಟ್ಯಾಕ್? ವಾಹನ ಸ್ಫೋಟಗೊಂಡಿದ್ದು ಹೇಗೆ?

|
Google Oneindia Kannada News

ಜಗತ್ತು ಕ್ರಿಸ್‌ಮಸ್ ಸಂಭ್ರಮದಲ್ಲಿ ಮುಳುಗಿರುವಾಗ ಅಮೆರಿಕ ಕೊರೊನಾ ಕೂಪದಲ್ಲಿ ನರಳುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್ ದಿನವೇ ಭೀಕರ ಅವಘಡ ನಡೆದಿದೆ. ಅಮೆರಿಕದ ಟೆನ್ನೆಸ್ಸೀ ರಾಜ್ಯದ ರಾಜಧಾನಿ ನ್ಯಾಶ್‌ವಿಲ್ಲೆಯಲ್ಲಿ ಜನಜಂಗುಳಿ ಇರುವ ಪ್ರದೇಶದಲ್ಲಿ ವಾಹನವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಎಲ್ಲಿ ಮತ್ತೆ ಉಗ್ರರ ದಾಳಿ ನಡೆಯಿತೋ ಎಂಬ ಭಯ ಅಮೆರಿಕನ್ನರಲ್ಲಿ ಆವರಿಸುವಂತೆ ಮಾಡಿದೆ ಈ ಘಟನೆ.

ವಾಹನ ಸ್ಫೋಟಗೊಳ್ಳುತ್ತಿದ್ದಂತೆ ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮತ್ತೊಂದೆಡೆ ಘಟನೆ ಬಗ್ಗೆ ಮಾತನಾಡಿರುವ ನ್ಯಾಶ್‌ವಿಲ್ಲೆ ಮೇಯರ್‌ ಜಾನ್‌ ಕೂಪರ್, ಜನರಲ್ಲಿ ಭಯ ಹಾಗೂ ಗೊಂದಲವನ್ನು ಸೃಷ್ಟಿಸುವ ಸಲುವಾಗಿ ದಾಳಿ ನಡೆಸಲಾಗಿದೆ. ಆದರೆ ನಮ್ಮ ನಗರದಲ್ಲಿ ನೆಮ್ಮದಿ ಹಾಳು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕ್ರಿಸ್‌ಮಸ್ ಮುಂಜಾನೆ ವಾಹನ ಸ್ಫೋಟ: ಭಯೋತ್ಪಾದನಾ ಕೃತ್ಯ ಶಂಕೆಕ್ರಿಸ್‌ಮಸ್ ಮುಂಜಾನೆ ವಾಹನ ಸ್ಫೋಟ: ಭಯೋತ್ಪಾದನಾ ಕೃತ್ಯ ಶಂಕೆ

ಘಟನೆ ಮುಂಜಾನೆಯ ವೇಳೆ ಸಂಭವಿಸಿದ್ದು, ಕೊರೊನಾ ಕಾರಣಕ್ಕೆ ಜನರ ಓಡಾಟ ಹೆಚ್ಚಾಗಿ ಇರಲಿಲ್ಲ. ಇದರ ಜೊತೆಗೆ ಸ್ಥಳೀಯರು ವಾಹನದಲ್ಲಿ ಬಾಂಬ್ ಇರುವುದನ್ನ ಪತ್ತೆ ಮಾಡಿದ್ದರು. ಹೀಗಾಗಿ ಸಾವು-ನೋವು ಸಂಭವಿಸಿಲ್ಲ, ಆದರೆ ಮೂವರಿಗೆ ಸಣ್ಣ ಪ್ರಮಾಣದ ಗಾಯವಾಗಿರುವ ಕುರಿತು ಮಾಹಿತಿ ಸಿಕ್ಕಿದೆ.

ಮುಗಿಲೆತ್ತರಕ್ಕೆ ಹರಡಿತು ದಟ್ಟ ಹೊಗೆ..!

ಮುಗಿಲೆತ್ತರಕ್ಕೆ ಹರಡಿತು ದಟ್ಟ ಹೊಗೆ..!

ನ್ಯಾಶ್‌ವಿಲ್ಲೆಯಲ್ಲಿ ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ, ವಾಹನ ಬ್ಲಾಸ್ಟ್ ಆದ ಸಂದರ್ಭದಲ್ಲಿ ಅಕ್ಕಪಕ್ಕದ ಜಾಗಗಳು ಅಲುಗಾಡಿ ಹೋಗಿವೆ. ಅಷ್ಟೇ ಅಲ್ಲ ಬೆಂಕಿಯ ಜ್ವಾಲೆಗೆ ವಾಹನ ಧಗಧಗನೆ ಹೊತ್ತಿ ಉರಿದಿದೆ. ಈ ಹೊತ್ತಲ್ಲೇ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಾಚಿದ್ದು, ಸುತ್ತಮುತ್ತ ಇದ್ದ ಜನರು ಬೆಚ್ಚಿಬಿದ್ದಿದ್ದಾರೆ. ಉಗ್ರರು ನುಗ್ಗಿ ದಾಳಿ ನಡೆಸಿದರೇನೋ ಅಂತಾ ಕೆಲವರು ಕಾಲಿಗೆ ಬುದ್ಧಿ ಹೇಳಿ ಚೆಲ್ಲಾಪಿಲ್ಲಿಯಾಗಿದ್ದಾರೆ. ಘಟನೆಯ ದೃಶ್ಯ ಸುತ್ತಮುತ್ತಲ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.

ಅಮೆರಿಕದ ವಿರುದ್ಧ ಉಗ್ರರ ಹಗೆ

ಅಮೆರಿಕದ ವಿರುದ್ಧ ಉಗ್ರರ ಹಗೆ

ಜಿಹಾದಿಗಳು ಜಗತ್ತಿನಲ್ಲಿ ಅಮೆರಿಕವನ್ನು ದ್ವೇಷಿಸಿದಷ್ಟು ಬೇರೆ ಯಾವುದೇ ದೇಶವನ್ನೂ ದ್ವೇಷ ಮಾಡುವುದಿಲ್ಲ. ಹೀಗಾಗಿ ಸದಾ ಅಮೆರಿಕದ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿರುತ್ತಾರೆ. ಸಣ್ಣದೊಂದು ಲೋಪ ಸಿಕ್ಕರೂ ಸಾಕು ಸೀದಾ ಸೀದಾ ನುಗ್ಗಿ ವಿದ್ವಂಸಕ ಕೃತ್ಯ ಎಸಗಿಬಿಡುತ್ತಾರೆ. 2001ರ ಸೆಪ್ಟೆಂಬರ್ 9ರಂದು ಇದೇ ರೀತಿ ಆಗಿತ್ತು. ಭದ್ರತಾ ಲೋಪವನ್ನೇ ಉಪಯೋಗಿಸಿಕೊಂಡು ಉಗ್ರರು ಅಮೆರಿಕದ ಬೃಹತ್ ಕಟ್ಟಡಗಳನ್ನೇ ನೆಲಕ್ಕುರುಳಿಸಿ, ಸಾವಿರಾರು ಜನರನ್ನು ಕೊಂದಿದ್ದರು. ಆದರೆ ಈ ಘಟನೆಯ ಬಳಿಕ ಅಮೆರಿಕದಲ್ಲಿ ಮತ್ತೊಂದು ದೊಡ್ಡ ಮಟ್ಟದ ವಿದ್ವಂಸಕ ಕೃತ್ಯ ನಡೆದಿಲ್ಲವಾದರೂ, ಅಮೆರಿಕನ್ನರಿಗೆ ಆ ಭಯ ಈಗಲೂ ಕಾಡುತ್ತಿದೆ.

ಫೈರಿಂಗ್ ಎಂದು ಕಾಲ್ ಮಾಡಿದ್ರು..!

ಫೈರಿಂಗ್ ಎಂದು ಕಾಲ್ ಮಾಡಿದ್ರು..!

ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಆಘಾತಕಾರಿ ಮಾಹಿತಿಯನ್ನ ಬಿಡಿಸಿಟ್ಟಿದ್ದಾರೆ. ಪಾರ್ಕ್ ಮಾಡಿದ್ದ ವಾಹನ ಬಾಂಬ್ ತುಂಬಿಸಿಕೊಂಡಿತ್ತು. ಆದರೆ ನಮಗೆ ಇಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಮಾಹಿತಿ ಬಂದಿತ್ತು. ಈ ಕಾರಣಕ್ಕೆ ಸ್ಥಳಕ್ಕೆ ಓಡಿ ಬಂದೆವು. ಆದರೆ ವಾಹನ ಪರಿಶೀಲನೆ ಮಾಡಿದಾಗ ಅದರಲ್ಲಿ ಬಾಂಬ್ ಪತ್ತೆಯಾದವು. ನಾವು ತಕ್ಷಣ ಹತ್ತಿರದ ಕಟ್ಟಡಗಳಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿದೆವು. ಆದರೆ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನದಲ್ಲಿದ್ದ ಬಾಂಬ್‌ ಸ್ಪೋಟಗೊಂಡಿದೆ ಎಂದು ವಿವರಿಸುತ್ತಾರೆ. ದಾಳಿಯ ಪರಿಣಾಮ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ನಡುವೆ ಮತ್ತೊಂದು ಶಾಕ್

ಕೊರೊನಾ ನಡುವೆ ಮತ್ತೊಂದು ಶಾಕ್

ಈಗಾಗಲೇ ಕೊರೊನಾ ಸೋಂಕು ಅಮೆರಿಕನ್ನರನ್ನು ಇಂಚಿಂಚು ಹಿಂಸೆ ಮಾಡುತ್ತಿದೆ. ಆದರೆ ಇದೇ ಹೊತ್ತಲ್ಲಿ ಬಾಂಬ್ ತುಂಬಿದ ವಾಹನ ಟೆನ್ನೆಸ್ಸೀ ರಾಜ್ಯದ ರಾಜಧಾನಿ ನ್ಯಾಶ್‌ವಿಲ್ಲೆಯಲ್ಲಿ ಸ್ಫೋಟಗೊಂಡಿದೆ. ಇದು ಜನಕ್ಕೆ ಮತ್ತೊಂದು ಶಾಕ್ ನೀಡಿದೆ. ಮೊದಲೇ 'ಕೊರೊನಾ'ಗೆ ಹೆದರಿ ಹೊರಗೆ ಹೋಗಲು ಭಯಪಡುತ್ತಿದ್ದ ಜನರಿಗೆ ಈ ಘಟನೆಯಿಂದ ಮತ್ತಷ್ಟು ಆಘಾತವಾಗಿದೆ. ಅಮೆರಿಕದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಫೋಟ ತುಂಬಿದ ವಾಹನ ಬಂದಿದ್ದು ಹೇಗೆ ಎಂಬುದನ್ನ ಎಫ್‌ಬಿಐ ಅಧಿಕಾರಿಗಳು ಬೆದಕಾಡುತ್ತಿದ್ದಾರೆ.

English summary
Bomb loaded vehicle exploded in American city of Tennessee state. After the explosion in Nashville city, curfew imposed on surrounding area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X