• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರಹಚಾರ ಕೈ ಕೊಟ್ರೆ ಏನಾಗುತ್ತೆ?; ಓದಿ ತಿಳಿಯಿರಿ ಅಫ್ಘಾನ್ ಮಾಜಿ ಹಣಕಾಸು ಸಚಿವರ ಕಥೆ

|
Google Oneindia Kannada News

ವಾಶಿಂಗ್ಟನ್, ಮಾರ್ಚ್ 21: ಗ್ರಹಚಾರ ಯಾವಾಗ, ಯಾರಿಗೆ, ಹೇಗೆ ಕೈ ಕೊಡುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಒಂದು ಕಾಲದಲ್ಲಿ ದಿವಾನನಂತೆ ಮೆರೆದವರು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಜವಾನ್ ಆಗಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣು ಮುಂದೆಯೇ ಇವೆ. ಅಂಥದ್ದೇ ಒಂದು ಕಥೆಗೆ ಇಂದು ಸಾಕ್ಷಿ ಆಗಿರುವುದು ಅಫ್ಘಾನಿಸ್ತಾನದ ಮಾಜಿ ಹಣಕಾಸು ಸಚಿವ ಖಾಲಿದ್ ಪಯೆಂಡಾ.

ಅಫ್ಘಾನಿಸ್ತಾನದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಇದೇ ಖಾಲಿದ್ ಪಯೆಂಡಾ ಇಂದು ವಾಶಿಂಗ್ಟನ್ ನಗರದಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಮುಚ್ಚಿಟ್ಟಿದೆಯಾ ಅಮೆರಿಕಾ? ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಮುಚ್ಚಿಟ್ಟಿದೆಯಾ ಅಮೆರಿಕಾ?

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಸಂಘಟನೆಯು ಆಕ್ರಮಿಸಿಕೊಳ್ಳುವುದಕ್ಕೂ ಒಂದು ವಾರ ಮೊದಲು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಖಾಲಿದ್ ಪಯೆಂಡಾ ವಿರುದ್ಧ ಸಾರ್ವಜನಿಕ ಸಭೆಯಲ್ಲಿಯೇ ಮುರಿದು ಬಿದ್ದಿದ್ದರು. ತದನಂತರದ ಬೆಳವಣಿಗೆಯಲ್ಲಿ ಹಣಕಾಸು ಸಚಿವರ ಸ್ಥಾನಕ್ಕೆ ಖಾಲಿದ್ ಪಯೆಂಡಾ ರಾಜೀನಾಮೆ ಸಲ್ಲಿಸಿದ್ದರು. ಅಶ್ರಫ್ ಘನಿ ತಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೇ ವಿನಃ, ಅಂದಿನ ಮಟ್ಟಿಗೆ ತಾಲಿಬಾನಿಗಳು ದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ವಾಷಿಂಗ್ಟನ್‌ನಲ್ಲಿ ಹೇಗಿದೆ ಮಾಜಿ ಹಣಕಾಸು ಸಚಿವರ ದುಡಿಮೆ?:

40 ವರ್ಷ ವಯಸ್ಸಿನ ಖಾಲಿದ್ ಪಯೆಂಡಾ ಈ ವಾರದ ಆರಂಭದಲ್ಲಿ "ಆರು ಗಂಟೆಗಳ ಕೆಲಸಕ್ಕೆ 150 ಡಾಲರ್ ಆಸುಪಾಸಿನಲ್ಲಿ ಸಂಪಾದನೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಸಾಧಾರಣವಾಗಿ ರಾತ್ರಿ ವೇಳೆಯಲ್ಲಿ ಕ್ಯಾಬ್ ಚಾಲನೆಯಿಂದ ಹೆಚ್ಚು ಆದಾಯ ಗಳಿಸಬಹುದು ಎಂದಿದ್ದಾರೆ.

ಯುಎಸ್‌ಗೆ ಬಂದ ನಂತರ, ಪಯೆಂಡಾ ಅವರು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿರುವುದಾಗಿ ಹೇಳಿದರು. ಕಾಬೂಲ್‌ನಿಂದ ವಾಷಿಂಗ್ಟನ್‌ಗೆ ತನ್ನ ಸ್ಥಳಾಂತರವು "ಸಾಕಷ್ಟು ಹೊಂದಾಣಿಕೆಯಾಗಿದೆ" ಎಂದು ಪಯೆಂಡಾ ತಿಳಿಸಿದ್ದಾರೆ.

How Afghanistan Former Finance Minister Khalid Payenda Is a Cab Driver in Washington

ಖಾಲಿದ್ ಪಯೆಂಡಾ ಭಾವನಾತ್ಮಕ ನುಡಿ:

ಅಫ್ಘಾನಿಸ್ತಾನದ ದುರಂತ ಪತನದ ತಿಂಗಳುಗಳ ನಂತರವೂ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ತ್ವರಿತ ಕುಸಿತಕ್ಕೆ ತನ್ನ ಸಹವರ್ತಿ ಆಫ್ಘನ್ನರೇ ಕಾರಣವಾಗಿದ್ದಾರೆ. ಸುಧಾರಣೆ ಮಾಡಲು, ಗಂಭೀರವಾಗಿರಲು ನಮಗೆ ಸಾಮೂಹಿಕ ಇಚ್ಛಾಶಕ್ತಿ ಇರಲಿಲ್ಲ," ಎಂದು ಪಯೆಂಡಾ ದೂರಿದ್ದಾರೆ.

ಇಡೀ ದೇಶವನ್ನು ತಾಲಿಬಾನ್‌ಗೆ ಹಸ್ತಾಂತರಿಸುವ ಮೂಲಕ ನಿರಂತರ ಮೌಲ್ಯಗಳಿಗೆ ದ್ರೋಹ ಮಾಡಿದ್ದಕ್ಕಾಗಿ ಅಮೆರಿಕನ್ನರನ್ನು ದೂಷಿಸಿದ ಪಯೆಂಡಾ, "ಈ ನೋವು ನಿಮ್ಮನ್ನು ಆಂತರಿಕವಾಗಿ ತಿನ್ನುತ್ತಿರುತ್ತದೆ," ಎಂದರು. "ಸದ್ಯಕ್ಕೆ ನನಗೆ ಯಾವುದೇ ಸ್ಥಳವಿಲ್ಲ" ಎಂದರು. "ನಾನು ಇಲ್ಲಿಗೂ ಸೇರಿಲ್ಲ, ಅಲ್ಲಿಗೂ ಸೇರಿಲ್ಲ. ಇದು ತುಂಬಾ ಖಾಲಿ ಭಾವನೆ," ಎಂದಿದ್ದಾರೆ.

English summary
How Afghanistan former Finance minister Khalid Payenda is a cab driver in Washington. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X