ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ; 4 ಮಿಲಿಯನ್ ದಾಖಲೆರಹಿತ ವಲಸಿಗರಿಗೆ ಪೌರತ್ವ ಮಸೂದೆ ಮಂಡನೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 19: ಡೆಮಾಕ್ರಟಿಕ್ ನೇತೃತ್ವದ ಸದನದಲ್ಲಿ ಗುರುವಾರ ನಾಲ್ಕು ಮಿಲಿಯನ್ ದಾಖಲೆರಹಿತ ವಲಸಿಗರಿಗೆ ಪೌರತ್ವ ನೀಡುವ ಸಂಬಂಧ ಮಸೂದೆ ಮಂಡಿಸಲಾಗಿದೆ.

ಈ ಮೂಲಕ ಸದನವು ಮೊದಲ ಬಾರಿಗೆ 2.5 ದಶಲಕ್ಷಕ್ಕೂ ಹೆಚ್ಚು ದಾಖಲೆರಹಿತ ವಲಸಿಗರಿಗೆ ಶಾಶ್ವತ ಕಾನೂನು ಮಾರ್ಗ ಸ್ಥಾಪಿಸಲು ಮುಂದಾಗಿದೆ. ಇದರಲ್ಲಿ ಅಮೆರಿಕಕ್ಕೆ ಮಕ್ಕಳನ್ನು ಕರೆತಂದವರು, ಮಾನವೀಯತೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೆಲೆಯೂರಲು ಅವಕಾಶ ಪಡೆದವರು ಒಳಗೊಂಡಿದ್ದಾರೆ.

ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್ ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್

ಉಭಯ ಪಕ್ಷಗಳ ಬೆಂಬಲದೊಂದಿಗೆ ಎರಡನೇ ಮಸೂದೆ ಮಂಡಿಸಿದ್ದು, ಪ್ರಮುಖ ಕೃಷಿ ವೀಸಾ ನವೀಕರಿಸುವ ಮೂಲಕ ಕೃಷಿ ಕೆಲಸಗಾರರು ಹಾಗೂ ಅವರ ಕುಟುಂಬದವರಿಗೆ ಕಾನೂನು ಸ್ಥಾನಮಾನ ನೀಡಲಾಗಿದೆ.

House Passes Bills On Citizenship for Undocumented Immigrants

ವೀಸಾ ಮೇಲಿನ ನಿಷೇಧವನ್ನು ತೆರವುಗೊಳಿಸದಿದ್ದರೆ, ವಲಸೆ ವ್ಯವಸ್ಥೆ ಮತ್ತಷ್ಟು ಜಟಿಲವಾಗುತ್ತದೆ. ವಿವಿಧ ದೇಶಗಳ ಪ್ರತಿಭಾವಂತರು ಅಮೆರಿಕ ಬದಲು ರಾಷ್ಟ್ರಗಳತ್ತ ಮುಖ ಮಾಡುತ್ತಾರೆ ಎಂದು ಈ ಹಿಂದೆ ವಿವರಿಸಲಾಗಿತ್ತು.

ಅಮೆರಿಕದಲ್ಲಿ ವಾಸಿಸುವ 11 ಮಿಲಿಯನ್ ದಾಖಲೆರಹಿತ ವಲಸಿಗರನ್ನು ಶಾಶ್ವತ ಕಾನೂನು ಸ್ಥಾನಮಾನವಿಲ್ಲದ ಸ್ಥಿತಿಯಿಂದ ಹೊರಗೆ ತರಲು ದಶಕಗಳ ಕಾಲ ಅಭಿಯಾನ ನಡೆಸಿದ್ದ ಡ್ರೀಮರ್ಸ್ ಹಾಗೂ ಇತರ ಕಾರ್ಯಕರ್ತರಿಗೆ ಈ ಮಸೂದೆ ಮಹತ್ವದ ಮೈಲಿಗಲ್ಲಾಗಿದೆ. ಬುಧವಾರವಷ್ಟೆ ಸದನದಲ್ಲಿ ಮಹಿಳೆಯರ ಪರವಾದ ಎರಡು ಮಸೂದೆಗಳಿಗೆ ಅನುಮೋದನೆ ನೀಡಲಾಗಿತ್ತು.

English summary
House passes bills on citizenship for an estimated four million undocumented immigrants,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X