ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 14: ಅಮೆರಿಕದ ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಎರಡು ಅಂಶಗಳ ಆರೋಪದ ವಿರುದ್ಧ ವಾಗ್ದಂಡನೆಗೆ ಮತ ಚಲಾವಣೆ ಮಾಡಲಾಗಿದೆ. ಇದರಿಂದ ಸದನದಲ್ಲಿ ಟ್ರಂಪ್ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್‌ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಶುಕ್ರವಾರ ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿದೆ.

ಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿ

ಈ ವಿಚಾರ ಇನ್ನು 435 ಸದಸ್ಯರು ಇರುವ ಜನಪ್ರತಿನಿಧಿ ಸಭೆಗೆ ರವಾನೆಯಾಗಿದೆ. ಇಲ್ಲಿ ಟ್ರಂಪ್ ವಿರೋಧಿ ಬಣದ ಸದಸ್ಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಡೆಮಾಕ್ರಟಿಕ್ ಪಕ್ಷವು 233-197 ಸದಸ್ಯರ (ಕೆಲವು ಸ್ಥಾನಗಳು ಖಾಲಿ ಇವೆ) ಬಲದೊಂದಿಗೆ ಟ್ರಂಪ್ ವಿರುದ್ಧದ ವಾಗ್ದಂಡನೆಯನ್ನು ಖಚಿತಪಡಿಸಿದೆ.

House Judiciary Committee Votes 23-17 To Impeach Donald Trump

ಕ್ರಿಸ್‌ಮಸ್ ರಜಾ ಅವಧಿಗೂ ಮೊದಲೇ ಮುಂದಿನ ವಾರ ಜನಪ್ರತಿನಿಧಿ ಸಭೆಯ ಸಂಪೂರ್ಣ ಮತ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ನೀಡುವ ಸೆನೆಟ್ ವಿಚಾರಣೆಯು 2020ರ ಜನವರಿಗೂ ಮೊದಲು ಪ್ರಾರಂಭವಾಗುವ ಸಾಧ್ಯತೆ ಕಡಿಮೆ.

ಸೆನೆಟ್ ಶಿಕ್ಷೆ ವಿಧಿಸಿದರೆ ಮಾತ್ರ ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಬಹುದು. ಅದಕ್ಕೆ ಮೂರನೇ ಎರಡರಷ್ಟು ಮತಗಳು ಅವರ ವಿರುದ್ಧ ಬೀಳಬೇಕಾಗುತ್ತದೆ. ಆದರೆ ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು 53-47 ಮತಗಳ ಬಹುಮತ ಹೊಂದಿದೆ. ಹೀಗಾಗಿ ಟ್ರಂಪ್ ವಿರುದ್ಧದ ವಾಗ್ದಂಡನೆ ಜಾರಿಯಾಗುವುದು ಅನುಮಾನ.

ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?

ಜನಪ್ರತಿನಿಧಿಗಳ ಸಭೆಯಲ್ಲಿನ ಸಂಪೂರ್ಣ ಸದನ ಮತಕ್ಕೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಮುಂದಿನ ಬುಧವಾರ ಇದು ನಡೆಯುವ ನಿರೀಕ್ಷೆಯಿದೆ. ಇಲ್ಲಿ ವಾಗ್ದಂಡನೆ ಅಂಗೀಕಾರಕ್ಕೆ ಸರಳ ಬಹುಮತದ ಅಗತ್ಯವಿದೆ.

ಟ್ರಂಪ್ ತಮ್ಮ ರಾಜಕೀಯ ಎದುರಾಳಿ, 2020ರ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಅಭ್ಯರ್ಥಿ ಹಾಗೂ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಜತೆಗೆ ತಮ್ಮ ತನಿಖೆಗೆ ಸಹಕಾರ ನೀಡಲು ನಿರಾಕರಿಸುವ ಮೂಲಕ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

English summary
The US House Of Representatives Judiciary Committee on Friday approved two articles of impeachment against President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X