ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್ ಆಗಿ ಡೆಮಾಕ್ರಟಿಕ್ ನ್ಯಾನ್ಸಿ ಪೆಲೋಸಿ ಮರು ನಾಮನಿರ್ದೇಶನ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 19: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ ಜನಪ್ರತಿನಿಧಿ ಸಭೆಯ ಸ್ಪೀಕರ್ ಆಗಿ ನ್ಯಾನ್ಸಿ ಪೆಲೋಸಿ ಅವರನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ನಾಮನಿರ್ದೇಶನ ಮಾಡಿದ್ದಾರೆ.

ಕ್ಯಾಲಿಫೋರ್ಮಿಯಾದ ಡೆಮಾಕ್ರಟಿಕ್ ಸದಸ್ಯೆ ನ್ಯಾನ್ಸಿ ಅವರ ಪರವಾಗಿ ಡೆಮಾಕ್ರಟಿಕನ್ನರು ಧ್ವನಿ ಮತ ಚಲಾಯಿಸಿದರು. ಈ ಮೂಲಕ ಇನ್ನೂ ಎರಡು ವರ್ಷಗಳವರೆಗೆ ಅವರನ್ನು ಸ್ಪೀಕರ್ ಆಗಿ ತಮ್ಮ ಆಯ್ಕೆಯನ್ನು ಘೋಷಿಸಿದರು. ದೇಶದ ವಿವಿಧ ಮೂಲಗಳಲ್ಲಿ ಹಂಚಿಹೋಗಿರುವ ಡೆಮಾಕ್ರಟಿಕ್ ಸದಸ್ಯರು ಇದೇ ಮೊದಲ ಬಾರಿಗೆ ಆನ್‌ಲೈನ್ ನಾಯಕತ್ವದ ಚುನಾವಣೆಯನ್ನು ನಡೆಸಿದರು.

ಜೋ ಬೈಡನ್ ಪರ ವಾಲುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳುಜೋ ಬೈಡನ್ ಪರ ವಾಲುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳು

ಹೌಸ್ ಮೆಜಾರಿಟಿ ನಾಯಕ ಸ್ಟೆನಿ ಹೋಯರ್ ಮತ್ತು ಪಕ್ಷದ ಮೂರನೇ ನಾಯಕ ಜಿಮ್ ಕ್ಲಿಬರ್ನ್ ಅವರನ್ನು ಅವರ ಸ್ಥಾನಗಳಿಗೆ ನ್ಯಾನ್ಸಿ ಅವರಂತೆಯೇ ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು. ಸೌತ್ ಕೆರೊಲಿನಾದಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮನಿರ್ದೇಶನದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೈಡನ್ ಅವರಿಗೆ ಕ್ಲಿಬರ್ನ್ ನೆರವಾಗಿದ್ದರು.

 House Democrats Nominate Nance Pelosi As Speaker

ಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆ ಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆ

'ಆರ್ಥಿಕತೆ, ಆರೋಗ್ಯ ಕ್ಷೇತ್ರ ಮತ್ತು ನೀತಿ ನಿರೂಪಣೆಗಳಲ್ಲಿ ನಾವು ನ್ಯಾಯ ಒದಗಿಸುವುದು ನಮ್ಮ ಮುಖ್ಯ ಗುರಿಯಾಗಬೇಕು' ಎಂದು ಮತದಾನದ ಬಳಿಕ ನ್ಯಾನ್ಸಿ ತಮ್ಮ ಸಹೋದ್ಯೋಗಿಗಳಿಗೆ ಹೇಳಿದರು. 'ಮತದಾರರು ಮತ್ತು ಪ್ರತಿಯೊಬ್ಬರನ್ನು ಗೌರವಯುತವಾಗಿ ಆಲಿಸಬೇಕು. ಜೋ ಬೈಡನ್ ಒಬ್ಬ ಏಕೀಕರಣವಾದಿ. ಹೀಗಾಗಿ ನಮ್ಮ ಕೆಲಸವನ್ನು ಅದು ಸುಗಮಗೊಳಿಸಲಿದೆ' ಎಂದು ತಿಳಿಸಿದರು.

English summary
House Democrats on Wednesday nominated Nancy Pelosi as the speaker without opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X