• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ,ಮೋದಿಯನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ

|

ಜೆನೆವಾ,ಫೆಬ್ರವರಿ 26: ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಹಾಗೂ ಮೋದಿಯನ್ನು ಶ್ಲಾಘಿಸಿದೆ.
ಲಸಿಕೆ ಸಮಾನತೆಯನ್ನು ಬೆಂಬಲಿಸುವ ಮತ್ತು ಕೋವಿಡ್-19 ಲಸಿಕೆಗಳನ್ನು ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಯುನಿಸೆಫ್ ಸಹಯೋಗದೊಂದಿಗೆ ಭಾರತವು ಬುಧವಾರ ಆರು ಲಕ್ಷ ಕೋವಾಕ್ಸ್ ಲಸಿಕೆಯನ್ನು ಘಾನಾಗೆ ರವಾನಿಸಿದೆ. ಈ ಉಪಕ್ರಮದಲ್ಲಿ 92 ದೇಶಗಳನ್ನು ಒಳಗೊಳ್ಳುವ ಗುರಿ ಹೊಂದಿದೆ.

ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHOಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHO

ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ(20 ಲಕ್ಷ), ಮ್ಯಾನ್ಮಾರ್(17 ಲಕ್ಷ), ನೇಪಾಳ(10 ಲಕ್ಷ), ಭೂತಾನ್(1.5 ಲಕ್ಷ), ಮಾಲ್ಡೀವ್ಸ್(1 ಲಕ್ಷ), ಮಾರಿಷಸ್(1 ಲಕ್ಷ), ಸೀಶೆಲ್ಸ್(50,000), ಶ್ರೀಲಂಕಾ(5 ಲಕ್ಷ), ಬಹ್ರೇನ್(1 ಲಕ್ಷ), ಒಮಾನ್(1 ಲಕ್ಷ), ಅಫ್ಘಾನಿಸ್ತಾನ(5 ಲಕ್ಷ), ಬಾರ್ಬಡೋಸ್(1 ಲಕ್ಷ) ಮತ್ತು ಡೊಮಿನಿಕಾ(70,000)ಗೆ ಡೋಸ್ ಗಳನ್ನು ಉಡುಗೊರೆಯಾಗಿ ಸರಬರಾಜು ಮಾಡಲಾಯಿತು.

ಇನ್ನು ವಾಣಿಜ್ಯ ಆಧಾರದ ಮೇಲೆ ಲಸಿಕೆಗಳನ್ನು ಪಡೆದ ದೇಶಗಳು ಬ್ರೆಜಿಲ್(20 ಲಕ್ಷ), ಮೊರಾಕೊ(60 ಲಕ್ಷ), ಬಾಂಗ್ಲಾದೇಶ(50 ಲಕ್ಷ), ಮ್ಯಾನ್ಮಾರ್(20 ಲಕ್ಷ), ಈಜಿಪ್ಟ್(50,000), ಅಲ್ಜೀರಿಯಾ(50,000), ದಕ್ಷಿಣ ಆಫ್ರಿಕಾ(10 ಲಕ್ಷ) , ಕುವೈತ್(2 ಲಕ್ಷ) ಮತ್ತು ಯುಎಇ(2 ಲಕ್ಷ).

ಟ್ವೀಟ್‌ನಲ್ಲಿ, 60ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತ ಲಸಿಕೆಗಳನ್ನು ಪೂರೈಸುವಲ್ಲಿ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

"#ವ್ಯಾಕ್ಸಿನ್ ಎಕ್ವಿಟಿಯನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಎಂದು ಬರೆದುಕೊಂಡಿದ್ದಾರೆ.

English summary
WHO chief Tedros Adhanom Ghebreyesus has lauded Prime Minister Narendra Modi’s commitment for supporting vaccine equity and sharing COVID-19 vaccines with over 60 countries across the world, hoping that other nations will follow his example.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X