ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ ನಿಮಗೆ ನೋಡಲು ಕಾಣಿಸಿತ್ತೇ?: ಪ್ರಸಿದ್ಧ ಹಾಲಿವುಡ್ ನಟನಿಗೆ ಕುತೂಹಲ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 17: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆ ಇಡೀ ಜಗತ್ತಿನ ಗಮನ ಸೆಳೆದಿದ್ದು ಗೊತ್ತಿರುವ ಸಂಗತಿ. ಯೋಜನೆ ಭಾಗಶಃ ಯಶಸ್ವಿಯಾದಾಗ ಇಡೀ ಜಗತ್ತೇ ಇಸ್ರೋದ ಬೆನ್ನುತಟ್ಟಿತ್ತು. ಈಗಲೂ ವಿಕ್ರಂ ಲ್ಯಾಂಡರ್ ತನ್ನ ಜೀವಂತಿಕೆಯನ್ನು ಪ್ರದರ್ಶಿಸಲಿದೆ ಎಂಬ ನಿರೀಕ್ಷೆ ವಿಜ್ಞಾನ ಲೋಕದಲ್ಲಿದೆ. ಇದು ವಿಜ್ಞಾನ ಮತ್ತು ಬಾಹ್ಯಾಕಾಶದ ಕುರಿತು ಆಸಕ್ತಿ ಉಳ್ಳವರನ್ನು ಮಾತ್ರವಲ್ಲ, ಸಿನಿಮಾ ನಟರನ್ನೂ ಕಾಡುತ್ತಿದೆ ಎಂಬುದು ಗಮನಾರ್ಹ.

ಹಾಲಿವುಡ್‌ನ ಖ್ಯಾತ ನಟ ಬ್ರಾಡ್ ಪಿಟ್ ಅವರು ಅಮೆರಿಕದ ಗಗನಯಾತ್ರಿಗಳೊಂದಿಗೆ ಮಾತನಾಡುವಾಗ ಇಸ್ರೋದ ಚಂದ್ರಯಾನ-2 ಕುರಿತು ಪ್ರಶ್ನಿಸಿದ್ದಾರೆ. ಹಾಲಿವುಡ್‌ನ ಸೆಲೆಬ್ರಿಟಿ ಭಾರತದ ಈ ಯೋಜನೆ ಬಗ್ಗೆ ಕೇಳಿರುವ ಸುದ್ದಿ ಸಹಜವಾಗಿಯೇ ವೈರಲ್ ಆಗಿದೆ.

ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?

ಬಾಹ್ಯಾಕಾಶದ ಕುರಿತು ಮಾಡಿರುವ 'ಆಡ್ ಆಸ್ಟ್ರಾ' ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿರುವ ಬ್ರಾಡ್ ಪಿಟ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ (ಐಎಸ್‌ಎಸ್‌) ಗಗನಯಾನಿ ನಿಕ್ ಹಾಗ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ಐಎಸ್‌ಎಸ್‌ನಲ್ಲಿನ ಜೀವನದ ಬಗ್ಗೆ ವಿಚಾರಿಸಿದ್ದರು. ಈ ವಿಚಾರಗಳನ್ನು ತಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಪಿಟ್, ಬಳಿಕ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಕುರಿತೂ ವಿಚಾರಿಸಿದ್ದಾರೆ.

Hollywood Star Brad Pitt NASA Astronaut Chandrayaan 2 lander

'ನಾನು ಕಳೆದ ವಾರ ಜೆಟ್ ಪ್ರೊಪೊಲ್ಷನ್ ಲ್ಯಾಬೊರೇಟರಿಗೆ ಹೋಗಿದ್ದೆ. ಅದೇ ದಿನ ಭಾರತವು ಚಂದ್ರನ ಮೇಲೆ ಇಳಿಯುತ್ತಿತ್ತು. ಅವರ ಪ್ರಯತ್ನಕ್ಕೆ ಅಮೆರಿಕ ನೆರವು ನೀಡುತ್ತಿತ್ತು. ಲ್ಯಾಂಡರ್ ಅನ್ನು ನೀವು ಇದ್ದ ಜಾಗದಿಂದ ನೋಡಲು ಸಾಧ್ಯವಿದೆಯೇ? ಎಂದು ಬ್ರಾಡ್ ಪಿಟ್ ಪ್ರಶ್ನಿಸಿದ್ದರು.

ಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆ

ಅದಕ್ಕೆ ಹಾಗ್, 'ದುರದೃಷ್ಟವಶಾತ್ ನಮಗೆ ನೋಡಲು ಸಾಧ್ಯವಾಗುವುದಿಲ್ಲ. ನಾನು ಮತ್ತು ನಮ್ಮ ತಂಡ ಸುದ್ದಿ ವರದಿಗಳಿಂದ ಮಾತ್ರ ಅದನ್ನು ತಿಳಿದುಕೊಳ್ಳುವಂತಾಗಿತ್ತು' ಎಂದು ಪ್ರತಿಕ್ರಿಯಿಸಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಹಾಗ್ ಅವರೊಂದಿಗೆ ಇನ್ನಿಬ್ಬರು ಅಮೆರಿಕನ್ನರು, ಇಬ್ಬರು ರಷ್ಯನ್ನರು ಮತ್ತು ಒಬ್ಬ ಇಟಲಿಯ ಗಗನಯಾನಿ ಇದ್ದಾರೆ.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ಪಿಟ್ ಮತ್ತು ಹಾಗ್ ಅವರ ಮಾತುಕತೆಗಳು ಬಾಹ್ಯಾಕಾಶ ಜಗತ್ತಿನ ಅನುಭವಗಳ ಕುರಿತು ಮುಂದುವರಿದಿತ್ತು. ಈ ಸಂಭಾಷಣೆಯನ್ನು ನಾಸಾ ಟಿವಿ ಪ್ರಸಾರ ಮಾಡಿದೆ.

English summary
Hollywood star Brad Pitt asked NASA astronaut on phone call if he spotted India's Chandrayaan 2 lander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X