ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಜನರ ಮುಖದಲ್ಲಿ ನಗು ಮೂಡಿಸಿದ ಭಾರತದ ಬಾಲಕಿ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್: ಇತ್ತೀಚಿಗಷ್ಟೆ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್‌ ಸೇವೆಯನ್ನು ಗಮನಿಸಿ ಅಮೆರಿಕ ಸರ್ಕಾರ 'ಡ್ರೈವ್‌ ಆಫ್ ಹಾನರ್' ಗೌರವ ನೀಡಿತ್ತು. ಇದೀಗ ಭಾರತದ ಮೂಲದ ಬಾಲಕಿಯೊಬ್ಬರು ಅಮೆರಿಕ ಜನರ ಮುಖದಲ್ಲಿ ನಗು ಮೂಡಿಸಿದ್ದಾರೆ.

ಹಿತಾ ಗುಪ್ತ ಭಾರತ ಮೂಲದ ಹುಡುಗಿ. 15 ವರ್ಷದ ಈ ಹುಡುಗಿ ಪೆನ್ಸಿಲ್ವೇನಿಯಾ ವಿದ್ಯಾರ್ಥಿನಿ ಕೊನೆಸ್ಟೊಗಾ ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ಬಾಲಕಿ ಮಾಡಿದ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಮೆರಿಕದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಿಸಿದ ವೈದ್ಯೆ: ಸಿಎಂ ಅಭಿನಂದನೆ ಅಮೆರಿಕದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಿಸಿದ ವೈದ್ಯೆ: ಸಿಎಂ ಅಭಿನಂದನೆ

'ಬ್ರೈಟನಿಂಗ್ ಎ ಡೆ' ಎಂಬ ಎನ್ ಜಿಒ ಮೂಲಕ ಹಿತಾ ಗುಪ್ತ ಅಮೆರಿಕದಲ್ಲಿ ನರ್ಸಿಂಗ್ ಹೋಂಗಳಲ್ಲಿರುವ ನೂರಾರು ಹಿರಿಯರು ಮತ್ತು ಮಕ್ಕಳಿಗೆ ಹಿತಾ ಗುಪ್ತ ಖುಷಿ ನೀಡುವ ಕೆಲಸ ಮಾಡಿದ್ದಾರೆ. ಅವರಿಗಾಗಿ ತಾನು ಗಿಫ್ಟ್ ಪ್ಯಾಕ್ ಕಳಿಸಿ, ಅದರಲ್ಲಿ ಸ್ಪೂರ್ತಿಯ ಸಾಲುಗಳನ್ನು ಬರೆಯುತ್ತಿದ್ದಾರೆ.

Hita Gupta is brightening the lives of nursing home residents with gift packs

ಲಾಕ್‌ಡೌನ್ ಇರುವ ಕಾರಣ ಅನೇಕರಿಗೆ ತಮ್ಮ ಪ್ರೀತಿಪಾತ್ರರನ್ನು ನೋಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಇತ್ತೀಚಿನ ಪರಿಸ್ಥಿತಿಯಲ್ಲಿ ವೃದ್ಧರು ಹೆಚ್ಚಾಗಿ ಒಬ್ಬರೆ ಇರುತ್ತಾರೆ. ಹೀಗಾಗಿ, ಇಂತಹ ಸಮಯದಲ್ಲಿ ಅವರಿಗಾಗಿ ಸಣ್ಣ ಉಡುಗೊರೆ ನೀಡಿ, ಅವರ ಮುಖದಲ್ಲಿ ಸಣ್ಣ ನಗು ನೋಡಲು ಪ್ರಯತ್ನ ಮಾಡಿ ಹಿತಾ ಗೆದ್ದಿದ್ದಾರೆ.

ಹಿತಾ ಗುಪ್ತ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಂತಸ ಹಂಚಿಕೊಂಡಿದೆ. ಹಿತಾ ಎನ್ ತಮ್ಮ ಉಡುಗೊರೆಯ ಮೂಲಕ ಪ್ರೀತಿ ಹಂಚುತ್ತಿದ್ದಾರೆ ಎಂದಿದೆ.

English summary
15-year-old Hita Gupta, from Pennsylvania, USA, is brightening the lives of nursing home residents with gift packs through her NGO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X