ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಹಿಲ್ಲರಿ ಕ್ಲಿಂಟನ್ ರಿಂದ ಸ್ಪಷ್ಟನೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 05: ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಅವರು 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಬಂದಿದ್ದ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.

'ನಾನು ಈ ಬಾರಿ ಸ್ಪರ್ಧಿಸುತ್ತಿಲ್ಲ, ಆದರೆ, ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ, ನನ್ನ ನಂಬಿಕೆ, ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇನೆ' ಎಂದು ನ್ಯೂಯಾರ್ಕ್ ಟಿವಿ ಸ್ಟೇಷನ್ ನ್ಯೂಸ್ 12ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಮಾಜಿ ಫಸ್ಟ್ ಲೇಡಿ ಹೇಳಿದರು.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

2016ರ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಕ್ಲಿಂಟನ್ ಅವರಿಗೆ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದಲೂ ಬೆಂಬಲ ಸಿಕ್ಕಿತ್ತು. ಅಧ್ಯಕ್ಷ ಪಟ್ಟ ಈ ಬಾರಿ ಮಹಿಳೆಗೆ ದೊರೆಯಲಿದೆ ಎಂಬ ನಿರೀಕ್ಷೆ ಹೆಚ್ಚಿತ್ತು. ಆದರೆ, ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್ ನ 45ನೇ ಅಧ್ಯಕ್ಷರಾದರು.

Hillary Clinton will not run for 2020 Presidential Election

2020ರಲ್ಲಿ ಟ್ರಂಪ್ ಅಧಿಕಾರಕ್ಕೆ ಬರಲಿ : ಶೇ 65ರಷ್ಟು ಮಂದಿ ಅಭಿಮತ! 2020ರಲ್ಲಿ ಟ್ರಂಪ್ ಅಧಿಕಾರಕ್ಕೆ ಬರಲಿ : ಶೇ 65ರಷ್ಟು ಮಂದಿ ಅಭಿಮತ!

ಟ್ರಂಪ್ ಆಡಳಿತಾವಧಿಯಲ್ಲಿನ ಹುಳುಕುಗಳನ್ನು ಎತ್ತಿ ತೋರಿಸುತ್ತಾ, ವಲಸೆ ನೀತಿ, ಅಲ್ಪಸಂಖ್ಯಾತರು, ಯುಎಸ್ ಗಡಿ ವಿವಾದ ಮುಂತಾದ ವಿಷಯಗಳಲ್ಲಿ ಟ್ರಂಪ್ ನಡೆದುಕೊಂಡ ರೀತಿಯನ್ನು ಹಿಲರಿ ಕ್ಲಿಂಟನ್ ಖಂಡಿಸಿದ್ದರು.

ಯುಎಸ್ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರೀಸ್ ಯುಎಸ್ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರೀಸ್

ಈ ನಡುವೆ 2016ರಲ್ಲಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ಟಿಕೆಟ್ ಸಿಗದೆ ಕ್ಲಿಂಟನ್ ಗೆ ಸ್ಪರ್ಧೆ ಅವಕಾಶ ಮಾಡಿಕೊಟ್ಟಿದ್ದ ಬೆರ್ನಿ ಸ್ಯಾಂಡರ್ಸ್ ಅವರು 2020ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಡೆಮೊಕ್ರಾಟಿಕ್ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ.

English summary
Hillary Clinton says she won't run for president in 2020, but vows she's "not going anywhere." The former secretary of state, senator and first lady ruled out another campaign during an interview posted Monday by New York TV station News12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X