ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಮಹಾಮಳೆಗೆ ತತ್ತರಿಸಿದ ವಾಷಿಂಗ್ಟನ್

|
Google Oneindia Kannada News

ವಾಷಿಂಗ್ಟನ್, ಜುಲೈ 08: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಮಹಾಮಳೆಗೆ ತತ್ತರಿಸಿದ್ದು, ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ರಸ್ತೆಗಳಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಂತಿದ್ದು, ಕಾರುಗಳು ಮುಳುಗಿವೆ, ಜನರು ಜೀವ ಉಳಿಸಿಕೊಳ್ಳಲು ಎತ್ತರ ಪ್ರದೇಶಗಳಿಗೆ ಹೋಗುತ್ತಿದ್ದಾರೆ.

ಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆ

ತ್ವರಿತವಾಗಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ, ಈಗಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿ ಆಗಿದೆ.

Heavy rains in America capital Washington DC

ಮಹಾಮಳೆಗೆ ಅಮೆರಿಕದ ಶಕ್ತಿಸೌಧ ಶ್ವೇತಭವನದ ಕೆಲ ಭಾಗವೂ ತೊಂದರೆಗೆ ಸಿಲುಕಿದ್ದು, ಶ್ವೇತಭವನದ ಮಾಧ್ಯಮ ಕೊಠಡಿಗೆ ನೀರು ನುಗ್ಗಿದೆ, ಇನ್ನೂ ಕೆಲವು ಕೊಠಡಿಗಳು ಮಳೆಯಿಂದ ಹಾನಿಗೆ ಒಳಗಾಗಿವೆ.

ಪ್ರವಾಹ ಪರಿಸ್ಥಿತಿಯಿಂದಾಗಿ ಸುರಂಗ ಮಾರ್ಗದ ರೈಲು ಸಂಚಾರವನ್ನು ನಿಷೇಧಿಸಲಾಗಿದೆ. ಸಂಚಾರಕ್ಕೆ ಭಾರಿ ಅಡೆ-ತಡೆ ಉಂಟಾಗಿದ್ದು, ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ತಗ್ಗಿನಲ್ಲಿರುವವರನ್ನು ಸ್ಥಳಾಂತರ ಮಾಡಲಾಗಿದೆ.

English summary
Heavy rain created flood like situation in America capital Washington DC. A portion of the press area in the White House was also affected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X