ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ಕ್ಕೂ ಮುನ್ನ ಯುವ, ಆರೋಗ್ಯವಂತರಿಗೆ ಕೊರೊನಾ ಲಸಿಕೆ ಸಿಗಲ್ಲ:WHO

|
Google Oneindia Kannada News

ನವದೆಹಲಿ, ಅಕ್ಟೋಬರ್ 17: ಕೊರೊನಾ ಲಸಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಂದು ವಿಚಾರವನ್ನು ಬಹಿರಂಗಪಡಿಸಿದೆ.

2022ಕ್ಕೂ ಮುನ್ನ ಯುವ ಹಾಗೂ ಆರೋಗ್ಯವಂತರಿಗೆ ಕೊರೊನಾ ಲಸಿಕೆ ಸಿಗುವುದು ಅಸಾಧ್ಯ ಎಂದು ಹೇಳಿದೆ.

ಕೊರೊನಾ ಲಸಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಕೊರೊನಾವೈರಸ್ ಲಸಿಕೆ (Coronavirus Vaccine) ಸ್ವೀಕರಿಸಲು ಆರೋಗ್ಯವಂತ ಜನರು ಮತ್ತು ಯುವ ಜನಾಂಗ 2022 ರವರೆಗೆ ಕಾಯಬೇಕಾಗಬಹುದು ಎಂದು ಡಬ್ಲ್ಯುಎಚ್‌ಒ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

2021ರ ವೇಳೆಗೆ ಕನಿಷ್ಠ ಒಂದು ಪರಿಣಾಮಕಾರಿ ಲಸಿಕೆಯನ್ನಾದರೂ ಹೊಂದಬೇಕೆಂದು ಆಶಯ ವ್ಯಕ್ತಪಡಿಸಿದ ಸ್ವಾಮಿನಾಥನ್ ಆದರೆ ಇದು ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74 ಲಕ್ಷಕ್ಕೆ ಏರಿಕೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74 ಲಕ್ಷಕ್ಕೆ ಏರಿಕೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74 ಲಕ್ಷಕ್ಕೆ ಏರಿಕೆಯಾಗಿದೆ. ದಿನೇದಿನೆ ಹೋದಂತೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಭಾರತದಲ್ಲಿ 62,212 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದೇ ದಿನದಲ್ಲಿ 837 ಮಂದಿ ಮೃತಪಟ್ಟಿದ್ದಾರೆ, ಒಟ್ಟು 74,32,681 ಪ್ರಕರಣಗಳಿವೆ, 7,95,087 ಸಕ್ರಿಯ ಪ್ರಕರಣಗಳಿವೆ. 65,24,596 ಮಂದಿ ಗುಣಮುಖರಾಗಿದ್ದಾರೆ.

ಹೆಚ್ಚಿನ ಅಪಾಯದಲ್ಲಿರುವವರಿಗೆ ಮೊದಲ ಲಸಿಕೆ

ಹೆಚ್ಚಿನ ಅಪಾಯದಲ್ಲಿರುವವರಿಗೆ ಮೊದಲ ಲಸಿಕೆ

ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಹೆಚ್ಚಿನ ಅಪಾಯದಲ್ಲಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸ್ವಾಮಿನಾಥನ್ ಒತ್ತಿ ಹೇಳಿದರು.

ಹತ್ತಾರು ಲಸಿಕೆಗಳ ಪ್ರಯೋಗ

ಹತ್ತಾರು ಲಸಿಕೆಗಳ ಪ್ರಯೋಗ

ಕೊರೊನಾ ಲಸಿಕೆಗಾಗಿ ಜಾಗತಿಕವಾಗಿ ಹತ್ತಾರು ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈ ವರ್ಷದದಲ್ಲಿ ಲಸಿಕೆಯ ನಿರೀಕ್ಷೆಯ ಹೊರತಾಗಿಯೂ ದೊಡ್ಡ ಪ್ರಮಾಣದ ಹೊಡೆತಗಳು ಅದನ್ನು ಅಸಂಭವವೆಂದು ತೋರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization) ವಿಜ್ಞಾನಿ ಪುನರುಚ್ಚರಿಸಿದರು. ಇದಲ್ಲದೆ ಸುರಕ್ಷಿತ ಲಸಿಕೆ ಹುಡುಕಾಟದಲ್ಲಿ ಯಾರು ಮೊದಲು ಗೆಲ್ಲುತ್ತಾರೆ ಎಂದು ಕಂಡುಹಿಡಿಯಲು, ಅದರ ಬಗ್ಗೆ ಇನ್ನೂ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಅಪಾಯದಲ್ಲಿರುವ ಹಿರಿಯರಿಗೆ ಆದ್ಯತೆ

ಅಪಾಯದಲ್ಲಿರುವ ಹಿರಿಯರಿಗೆ ಆದ್ಯತೆ

ಅನ್ನು ಉಲ್ಲೇಖಿಸಿ ಮಾತನಾಡಿದ ಸ್ವಾಮಿನಾಥನ್ ಲಸಿಕೆಯನ್ನು ಮೊದಲು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರೊಂದಿಗೆ ಪ್ರಾರಂಭವಾಗುತ್ತದೆ ಎಂದು ಹೆಚ್ಚಿನ ಜನರು ಒಪ್ಪುತ್ತಾರೆ. ಆದರೆ ಅದರಲ್ಲಿಯೂ ಯಾರಿಗೆ ಹೆಚ್ಚು ಈ ಲಸಿಕೆ ಅಗತ್ಯವಿದೆ ಎಂದು ವ್ಯಾಖ್ಯಾನಿಸುವ ಅಗತ್ಯವಿದೆ. ಅಪಾಯದಲ್ಲಿರುವ ಹಿರಿಯರಿಗೆ ಆದ್ಯತೆ ಇರುತ್ತದೆ ಎಂದವರು ತಿಳಿಸಿದರು.

ಆರೋಗ್ಯವಂತರು 2022ರವರೆಗೆ ಕಾಯಲೇಬೇಕು

ಆರೋಗ್ಯವಂತರು 2022ರವರೆಗೆ ಕಾಯಲೇಬೇಕು

ಆರೋಗ್ಯವಂತ ಜನರು ಮತ್ತು ಯುವ ಜನಾಂಗ ಕೊವಿಡ್-19 ಲಸಿಕೆ ಸ್ವೀಕರಿಸಲು 2022 ರವರೆಗೆ ಕಾಯಬೇಕಾಗಬಹುದು ಎಂಬುದನ್ನು ವಿವರಿಸಿದ ಡಬ್ಲ್ಯ, ಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮೊದಲು ವೃದ್ಧರು ಮತ್ತು ಇತರ ದುರ್ಬಲ ಗುಂಪುಗಳಿಗೆ ರೋಗನಿರೋಧಕ ಶಕ್ತಿಯನ್ನು ಕೇಂದ್ರೀಕರಿಸುತ್ತಾರೆ. ನಂತರದಲ್ಲಿ ಆರೋಗ್ಯವಂತ ಜನರು ಮತ್ತು ಯುವ ಜನಾಂಗದವರಿಗೆ ಈ ಲಸಿಕೆ ಲಭ್ಯವಾಗಲಿದೆ ಎಂದರು.

Recommended Video

MS Dhoni ಪರದೆ ಮೇಲೆ AB DE Villiers ಆಟ ನೋಡಿದರು | Oneindia Kannada

English summary
The wait for Covid-19 vaccine may get longer for young population who are in sound health, World Health Organization’s chief scientist Dr Soumya Swaminathan has said at a social media event of WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X