ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

|
Google Oneindia Kannada News

ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ಎಚ್ 1ಬಿ ವೀಸಾ ನೀತಿ ಪ್ರಕಟಿಸಿದೆ. ಏಪ್ರಿಲ್ 01ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಟ್ರಂಪ್ ಸರ್ಕಾರ ಘೋಷಿಸಿದೆ.

ಹೊಸ ವ್ಯವಸ್ಥೆಯಲ್ಲಿ ಅರ್ಜಿಗಳನ್ನು ಎಲೆಕ್ಟ್ರಾನಿಕ್ ನೋಂದಣಿ ಮಾಡಿಕೊಳ್ಳಬೇಕಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರಲು ಎಚ್ 1 ಬಿ 2020ರ ಸೀಸನ್ ತನಕ ಕಾಯಬೇಕಿದೆ. ಅಮೆರಿಕದ ವಿದ್ಯಾಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಸ್ನಾತಕೋತ್ತರ ಪದವಿ ಪಡೆದ ಕೌಶಲ್ಯಪೂರ್ಣ ವಿದೇಶಿಯರಿಗೆ ಮಾತ್ರ ಹೆಚ್ಚ ಅವಕಾಶ ಸಿಗಲಿದೆ.

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್ ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

ಸುಮಾರು 65,000 ವೀಸಾಗಳನ್ನು ವಿದೇಶದಿಂದ ನೇಮಕವಾಗುವ ಉದ್ಯೋಗಿಗಳಿಗೆ ಯುಎಸ್ ನೀಡುತ್ತಿದೆ. ಯುಎಸ್ ಕಾಲೇಜ್ ಹಾಗೂ ವಿವಿಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದೇಶಿಯರಿಗೆ 20,000 ವೀಸಾಗಳು ಲಭ್ಯವಾಗುತ್ತಿದೆ.

ಯುಎಸ್ ನ ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಎಲ್ಲಾ ಕಂಪನಿಗಳ ವಿದೇಶಿ ಉದ್ಯೋಗಿಗಳ ಲೆಕ್ಕ ಹಾಕಿದರೆ, ಭಾರತದಿಂದ ಶೇ70ರಷ್ಟು ನೇಮಕಾತಿ ನಡೆದಿರುವುದು ಕಂಡು ಬರುತ್ತದೆ. ಭಾರತದಿಂದ ಅಮೆರಿಕಕ್ಕೆ ಕೌಶಲ್ಯಯುಕ್ತ ಉದ್ಯೋಗಿಗಳನ್ನು ಕಳಿಸುವುದರಲ್ಲಿ ಇನ್ಫೋಸಿಸ್, ಟಿಸಿಎಸ್ ಹಾಗೂ ವಿಪ್ರೋ ಮುಂದಿವೆ.

ಗ್ರೀನ್ ಕಾರ್ಡ್ ಪಡೆಯಲಿ ಇದು ರಹದಾರಿ?

ಗ್ರೀನ್ ಕಾರ್ಡ್ ಪಡೆಯಲಿ ಇದು ರಹದಾರಿ?

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಅಥವಾ ಶಾಶ್ವತ ನೆಲೆ ಕಂಡುಕೊಳ್ಳಲು ಯೋಜನೆ ಹಾಕಿಕೊಂಡಿರುವ ವೃತ್ತಿಪರರಿಗೆ ಇದು ರಹದಾರಿ ನೀಡಲಿದೆ. ಸಾಮಾನ್ಯವಾಗಿ 3 ರಿಂದ 6 ವರ್ಷಗಳ ಅವಧಿಗೆ ವಿದೇಶಿ ವೃತ್ತಿಪರರಿಗೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿ ಅನ್ವಯ ಬದಲಾವಣೆ ಅನಿವಾರ್ಯವಾಗಲಿದೆ.

ಕಡಿಮೆ ದರದಲ್ಲಿ ಮಾನವ ಸಂಪನ್ಮೂಲ

ಕಡಿಮೆ ದರದಲ್ಲಿ ಮಾನವ ಸಂಪನ್ಮೂಲ

ಬಹುತೇಕ ಭಾರತದ ಐಟಿ ವೃತ್ತಿಪರರು ಅರ್ಜಿ ಹಾಕುವ ಈ ಬೇಡಿಕೆಯ ವೀಸಾ ನಿಯಮದಲ್ಲಿ ಭಾರಿ ಬದಲಾವಣೆಯಾಗಿದೆ. ಜೊತೆಗೆ, ವೃತ್ತಿ ಸಂಬಂಧಿ ವೀಸಾ ನವೀಕರಣ ಮಾಡುವುದು ಹೆಚ್ಚಾಗಿದೆ. ಕಡಿಮೆ ದರದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಭಾರತ ಹಾಗೂ ಚೀನಾ ಒದಗಿಸುತ್ತಿದೆ. ಹೊಸ ನೀತಿಯಂತೆ, third party worksite ನಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವೀಸಾಗಳ ಅವಧಿ 3 ವರ್ಷಗಳ ತನಕ ಇರುತ್ತದೆ. ಆದರೆ, ಇದರ ನವೀಕರಣ ಪ್ರಕ್ರಿಯೆ ಸುಲಭವಾಗಿಲ್ಲ.

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ! ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

ಆತಂಕದಲ್ಲಿದ್ದ ಭಾರತದ ಐಟಿ ಕಂಪನಿಗಳು

ಆತಂಕದಲ್ಲಿದ್ದ ಭಾರತದ ಐಟಿ ಕಂಪನಿಗಳು

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿದೆ. ವೀಸಾ ನೀತಿಯಲ್ಲಿ ಮಾರ್ಪಾಟು ಹಾಗೂ ಎಚ್ 1 ಬಿ ವೀಸಾ ಪಡೆಯುವ ಪ್ರತಿಭಾವಂತರ ಬಗ್ಗೆ ಮೋದಿ ಅವರು ಕಾಳಜಿ ವಹಿಸಿ ಯುಎಸ್ ಪ್ರತಿನಿಧಿಗಳ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದರು.

ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ

ಭಾರತದ ಐಟಿ ರಫ್ತು ಆದಾಯವೂ ಹೆಚ್ಚಳ

ಭಾರತದ ಐಟಿ ರಫ್ತು ಆದಾಯವೂ ಹೆಚ್ಚಳ

ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್​ನಿಂದ 1,30,000 ಡಾಲರ್​ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆ. ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ .

ಬ್ರಿಟನ್ ವೀಸಾ ನಿಯಮ ಕಠಿಣ: ಭಾರತದ ವಿದ್ಯಾರ್ಥಿಗಳಲ್ಲಿ ತಳಮಳ ಬ್ರಿಟನ್ ವೀಸಾ ನಿಯಮ ಕಠಿಣ: ಭಾರತದ ವಿದ್ಯಾರ್ಥಿಗಳಲ್ಲಿ ತಳಮಳ

English summary
The United States administration on Wednesday announced that it will switch to a new system to process H-1B visa applications from April 1. The new system will give priority to foreign workers with advanced degrees from a university or college in the US over those hired abroad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X